ಶಿಕ್ಷಕರ ಕಲಾಸಂಘದಿಂದ ಪಾದಯಾತ್ರೆ.

Get real time updates directly on you device, subscribe now.

ಕೊಪ್ಪಳ  : ಇದೇ ಜನೆವರಿ ೨೪ ರಂದು ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ನಡೆಯುತ್ತಿರುವ ಕಾಯಕದೇವೋಭವ ಜಾಗೃತಿ ನಡಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಜಾಗೃತಿ ನಡಿಗೆಯನ್ನು ಕೊಪ್ಪಳದ ಶಿಕ್ಷಕರ ಕಲಾಸಂಘ (ರಿ) ಕೊಪ್ಪಳದವರು ಭಾಗ್ಯನಗರದ ಪಟ್ಟಣ ಪಂಚಾಯತನಿಂದ ಮುಂಜಾನೆ ೦೬:೩೦ ಕ್ಕೆ ಹೊರಟು, ನಗರದ ತಾಲೂಕು ಕ್ರೀಡಾಂಗಣ (ಪಬ್ಲಿಕ್ ಗ್ರೌಂಡ್).ನಲ್ಲಿ ಸೇರಿ ಜಾಗೃತಿ ನಡಿಗೆಯಲ್ಲಿ ಪಾಲ್ಗೊಳ್ಳುವ ತಂಡ, ವಿದ್ಯಾರ್ಥಿಗಳೊಂದಿಗೆ ಶ್ರೀ ಗವಿಸಿದ್ಧೆಶ್ವರ ಮಠ ತಲುಪಲಾಗುತ್ತದೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು. ಬಿಳಿ (ಶ್ವೇತ ವರ್ಣ) ಬಣ್ಣದ ಉಡುಪನ್ನು ಧರಿಸಿ, ಗಾಂಧೀ ಟೊಪ್ಪಿಗೆಯನ್ನು ಕಡ್ಡಾಯವಾಗಿ ಧರಿಸಿರಬೇಕು.
ಕಲಾಸಂಘದೊಂದಿಗೆ, ಅಶೋಕ ಸರ್ಕಲ್ ನಾಟಕ ತಂಡ, ಕಲರವ ಶಿಕ್ಷಕರ ಬಳಗ, ಪತಂಜಲಿ ಯೋಗ ಸಮಿತಿ, ಹಾಗೂ ಗಾಂಧೀ ವಿಚಾರ ವೇದಿಕೆ, ಪ್ರಗತಿ ಪರ ಚಿಂತಕರು, ಸಾಹಿತಿಗಳು, ಸರ್ಕಾರಿ ನೌಕರರ ಸಂಯುಕ್ತಾಶ್ರಯದಲ್ಲಿ ಪಾದಯಾತ್ರೆ ಜರಗುವದು.
ಗಾಂಧೀ ಬಳಗದೊಂದಿಗೆ ಭಾಗ್ಯನಗರದ ಪಟ್ಟಣ ಪಂಚಾಯತನಿಂದ ನಡಿಗೆಯಲ್ಲಿ ಪಾಲ್ಗೊಳ್ಳುವವರು. ನೋಂದಣಿಗಾಗಿ ಸಂಪರ್ಕಿಸಲು ಬಸವರಾಜ ಸವಡಿ ೯೪೮೧೯೩೮೩೦೪,ಮಂಜುನಾಥ ಪೂಜಾರ ೯೯೦೦೪೮೫೮೮೦,ರಾಮಣ್ಣ ಶ್ಯಾವಿ ೯೫೩೮೮೦೧೭೦೭,ಪ್ರಾಣೇಶ ಪೂಜಾರ ೯೯೦೨೮೯೩೬೭೧, ಹನುಮಂತಪ್ಪ ಕುರಿ ೯೮೮೦೭೫೯೭೧೨, ನಾಗರಾಜನಾಯಕ ಡೊಳ್ಳಿನ ೯೯೦೧೧೩೫೮೭೪.ಪ್ರಕಾಶಗೌಡ ಎಸ್.ಯು ೯೯೮೦೯೧೦೫೩೩. ಇವರನ್ನು ಸಂಪರ್ಕಿಸಬಹುದು ಎಂದು ಶಿಕ್ಷಕರ ಕಲಾಸಂಘದ ಅಧ್ಯಕ್ಷ ರಾಮಣ್ಣ ಶ್ಯಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Get real time updates directly on you device, subscribe now.

Comments are closed.

error: Content is protected !!