ಆರ್ಯ ಈಡಿಗ ಸಮಾಜದಿಂದ ಡಾ. ಹನುಮಂತಪ್ಪ ಅಂಡಗಿ ಅವರಿಗೆ ಸನ್ಮಾನ

Get real time updates directly on you device, subscribe now.

ಕೊಪ್ಪಳ: ರವಿವಾರ ಕೊಪ್ಪಳದ ಕಾಳಿದಾಸ ನಗರದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸಭಾಮಂಟಪದಲ್ಲಿ ಆರ್ಯ ಈಡಿಗ ಸಮಾಜದ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರನ್ನು ಸನ್ಮಾನಿಸಲಾಯಿತು. ಹುಲಿಗೆಮ್ಮದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ವೀರೇಶ ಹುಲಿಗಿ, ಜನಪದ ಕಲಾವಿದರಾದ ಮಾರುತಿ ಹಿಟ್ನಾಳ, ಕವಿಯತ್ರಿಯಾದ ಜ್ಯೋತಿ ಹಿಟ್ನಾಳ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಕೆ. ರಾಜಶೇಖರ ಹಿಟ್ನಾಳ, ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷರಾದ ಬಿಚ್ಚಾಲಿ ಕಾಶಿ ವಿಶ್ವನಾಥ, ಉಪಾಧ್ಯಕ್ಷರಾದ ಎಚ್. ಶರಣಪ್ಪ, ತಾಲೂಕ ಅಧ್ಯಕ್ಷರಾದ ಈರಣ್ಣ ಹುಲಿಗಿ, ತಾಲೂಕ ಪಂಚಾಯತ ಮಾಜಿ ಸದಸ್ಯರಾದ ಯಮನಪ್ಪ ಗುಂಡೂರು, ತುಕಾರಾಮಪ್ಪ ಕಲಿಕೇರಿ, ಸಮಾಜದ ಮುಖಂಡರಾದ ವೆಂಕಟೇಶ ಗಂಗಾವತಿ, ರಮೇಶ ಈಳಿಗೇರ, ಮಂಜುನಾಥ ಈಳಿಗೇರ, ಬಸವರಾಜ ಈಳಿಗೇರ, ಅನೀಲಕುಮಾರ ಹುಲಿಗಿ, ಹನುಮೇಶ ಎ.ಇ. ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!