ಇಂದು ಅಯೋಧ್ಯೆ ರಾಮಲಲ್ಲಾ ಮಾಡಿದ ಶಿಲೆಯ ಪೂಜೆ

Get real time updates directly on you device, subscribe now.

ಕೊಪ್ಪಳ: ನಗರದ ಗವಿಶ್ರೀ ನಗರದಲ್ಲಿರುವ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರದ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಮಂದಿರದ ರಾಮನ ಮೂರ್ತಿ ಮಾಡಿದ ಶಿಲೆಯ ಉಳಿದ ಭಾಗದಲ್ಲಿ ಹನುಮನ ಮೂರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುವದು ಎಂದು ಶ್ರೀ ಸಹಸ್ರ ಆಂಜನೇಯ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ ಗೊಂಡಬಾಳ ತಿಳಿಸಿದ್ದಾರೆ.
೨೨ರ ಬೆಳಗ್ಗೆ ೭ ಗಂಟೆಗೆ ಕೊಪ್ಪಳ ಪುರ ಪ್ರವೇಶ ಮಾಡಲಿದೆ ಅಂದೇ ಅದನ್ನು ದೇವಸ್ಥಾನದ ಹತ್ತಿರ ತೆಗೆದುಕೊಂಡು ಹೋಗಿ ಪೂಜೆ ನೆರವೇರಿಸಿ ನಿತ್ಯ ಮೂರ್ತಿ ಸೇವಾ ಕಾರ್ಯದ ಭಾಗವಾಗಿ ೬೧೫೩ನೇ ಮೂರ್ತಿಯನ್ನು ಶ್ರೀ ಪ್ರಕಾಶ್ ಶಿಲ್ಪಿ ಅವರು ಅದೇ ಶಿಲೆಯಲ್ಲಿ ಕೆತ್ತನೆ ಮಾಡಿ ಪಂಚಾಮೃತ ಅಭಿಷೇಕ ಮಾಡುವರು.
ನಂತರ ಭಗವಂತನ ಇಚ್ಚೆ ಅನುಸಾರ ಮೂರು ಶಿಲೆಯಲ್ಲಿ ಹನುಮ, ಸೀತಾರಾಮ ಮತ್ತು ಹನುಮನ ಉತ್ತರದಂತೆ ಮೂರ್ತಿಗಳನ್ನು ಮಾಡಿ ಪ್ರತಿಷ್ಠಾಪಿಸಲಾಗುವುದು. ೨೨ರಂದು ಬೆಳಿಗ್ಗೆ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನ ಮುಹೂರ್ತದಲ್ಲಿ ಈ ಶಿಲೆಗಳಿಗೆ ಕಚ್ಚು ಹಾಕಿ ಪ್ರಾರಂಭಿಸಲಾಗುತ್ತಿದ್ದು ಈ ಶುಭ ಕಾರ್ಯದಲ್ಲಿ ರಾಮ ಹನುಮನ ಭಕ್ತರೆಲ್ಲರು ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.
ಶ್ರೀ ಗವಿಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಪೇಜಾವರ ರ್ಶರೀಗಳು, ಮಂತ್ರಾಲಯ ಶ್ರಿಗಳು ಸೇರಿದಂತೆ ನಾಡಿನ ಅನೇಕ ಸ್ವಾಮೀಜಿಗಳು, ದಾರ್ಶನಿಕರು ಇಲ್ಲಿ ಆಗಮಿಸಿ ದೇವಸ್ಥಾನದ ಸ್ಥಳವನ್ನು ಪವಿತ್ರಗೊಳಿಸಿದ್ದಾರೆ, ಪ್ರಕಾಶ ಶಿಲ್ಪಿ ಅವರು ತಂದೆ ಶೇಖಣ್ಣಾಚಾರ್ಯರಿಂದ ಬಂದಂತಹ ಅನ್ನಪೂರ್ಣೇಶ್ವರಿ ಶಕ್ತಿ ಹಾಗೂ ಕಳೆದ ೬೧೫೨ ದಿನಗಳಿಂದ ನಿತ್ಯ ಒಂದು ಕಲ್ಲಿನಲ್ಲಿ ಒಂದು ಹನುಮಂತನ ಮೂರ್ತಿ ಮಾಡಿ ಪೂಜೆ ಸಲ್ಲಿಸುವ ಸಂಕಲ್ಪ ಮಾಡಿದ್ದು ಅವರ ಜೀವಿತಾವಧಿವರೆಗೆ ಅದನ್ನು ನಡೆಸಿಕೊಂಡು ಹೋಗುವ ಸಂಕಲ್ಪದಂತೆ ನಡೆದುಕೊಂಡು ಬಂದಿದ್ದಾರೆ. ಪ್ರಕಾಶ ಶಿಲ್ಪಿ ಅವರು ಕೆತ್ತಿದ ಅಷ್ಟೂ ಮೂರ್ತಿಗಳು ಮುಂದಿನ ದಿನಗಳಲ್ಲಿ ಇಲ್ಲಿಯೇ ಪ್ರತಿಷ್ಠಾಪಿಸಲಾಗುತ್ತದೆ. ಇನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮಲಲ್ಲಾ ಮೂರ್ತಿಯನ್ನು ಮೈಸೂರಿನ ಅರುಣ ಅವರು ಮಾಡಿದ್ದು, ಶಿಲೆಯನ್ನು ಮೈಸೂರಿನ ಹಾರೋಹಳ್ಳಿಯಲ್ಲಿ ಶ್ರೀನಿವಾಸ ಅವರಿಂದ ಪಡೆದಿದ್ದಾರೆ, ಈ ಶಿಲೆ ಸಾವಿರಾರು ವರ್ಷಗಳೇ ಹಿಂದೆಯೇ ನಿರ್ಮಾಣವಾಗಿದ್ದ ಬಗ್ಗೆ ಕೋಲಾರದ ತಂತ್ರಜ್ಞರು ದೃಢಪಡಿಸಿದ್ದಾರೆ, ಯಾವುದೇ ಲೋಪವಿಲ್ಲದ ಶುದ್ಧ ಶಿಲೆಯಾಗಿದೆ, ಇದನ್ನೇ ೨೦೨೨ರ ಡಿಸೆಂಬರ್‌ನಲ್ಲಿ ಮೊದಲಿಗೆ ಪ್ರಕಾಶ ಶಿಲ್ಪಿ ಅವರೇ ಪರೀಕ್ಷಿಸಿ ವಿಜಯದಾಸರ ಮೂರ್ತಿಗಾಗಿ ಕಲ್ಲನ್ನು ದೃಢಪಡಿಸಿದ್ದರು, ಅದೇ ಕಲ್ಲು ಅಯೋಧ್ಯೆಯಲ್ಲಿ ರಾಮನಾಗಿದ್ದಾನೆ ಮೂರ್ತಿಯ ಉಳಿದ ಭಾಗ ಹನುಮನ ಜನ್ಮ ಸ್ಥಳದಲ್ಲಿ ಹನುಮನಾಗುತ್ತಿದ್ದಾನೆ ಎಂಬುದು ವಿಶೇಷ ಮತ್ತು ಇಲ್ಲಿನ ಜನರ ಪುಣ್ಯವೇ ಸರಿ ಎಂದು ಗೊಂಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!