ಮಕ್ಕಳ ಮೊಬೈಲ್ ಬಳಕೆ ಗೆ ಮಿತಿ ಇರಲಿ  : ಡಾ ವಿಜಯನಾಥ ಇಟಗಿ

Get real time updates directly on you device, subscribe now.

ಕೊಪ್ಪಳ :  ಮಕ್ಕಳನ್ನು ಮೊಬೈಲ್ ಹಾಗೂ‌ ಟಿವಿ‌ಯಿಂದ ದೂರವಿಡಿ. ಪಾಲಕರು ಮೈ ಮರೆಯದೆ ಜಾಗುರುಕರಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ತೀರಾ ಅಗತ್ಯವಿದ್ದಾಗ ಮಾತ್ರ ಬಳಕೆಗೆ ಅವಕಾಸ ನೀಡಬೇಕು ಎಂದು ಕಿಮ್ಸ್ ನಿರ್ದೇಶಕ ಡಾ. ವಿಜಯನಾಥ ಇಟಗಿ ಹೇಳಿದರು .

ಅವರು ನಗರದ ಕಿನ್ನಾಳ ರಸ್ತೆಯ ಎಜುಕೇರ ಇಂಗ್ಲೀಷ ಮಿಡಿಯಮ್ ಸ್ಕೂಲ್ ನ ವಾರ್ಷಿಕೋತ್ಸವ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.

ಮಕ್ಕಳಿಗೆ ಶಿಕ್ಷಣದ ಜೋತೆಗೆ ಕ್ರೀಡೆ, ಸಂಗೀತ ಸೇರಿದಂತೆ ಅವರ ಆಶಯದಂತೆ ಕಲಿಕೆಯಲು ಸೂಕ್ತ ವಾತಾವರಣ ಕಲ್ಪಿಸಿ. ಶಿಕ್ಷಣದ ಜೊತೆಗೆ ಕ್ರೀಡೆಯೂ ಆದ್ಯತೆ ನೀಡಿ.

ಕನ್ನಡ ಪ್ರಭಾ ಪತ್ರಿಕೆ ಹಿರಿಯ ವರದಿಗಾರ ಸೋಮರಡ್ಡಿ ಅಳವಂಡಿ ಮಾತನಾಡಿ ಜಗತ್ತು ಆಳುತ್ತಿರುವುದು  ಹೊಸ ಹೊಸ ಐಡಿಯಾ ದಿಂದ. ಇಂಥ ಐಡಿಯಾ ಅಥವಾ ಚಿಂತನೆ ಮೂಡಿಬರಲು ಮಕ್ಕಳನ್ನು ಕ್ರೀಯಾಶೀಲರನ್ನಾಗಿ ಮಾಡಬೇಕು. ಮಕ್ಕಳಿಗೆ ಅಘಾದವಾಗಿ ಜ್ಞಾನ ಇದದು, ಸಂಸ್ಕಾರ ನೀಡಿದರೇ ಅದು ಬೆಳೆಯಲು ಸಾಧ್ಯವಾಗುತ್ತದೆ.

ನಮ್ಮ ಆಲೋಚನೆ ಸಮಾಜ ಮುಖವಾಗಿರಬೇಕು ಹಾಗೂ ಪಾಲಕರು ಮತ್ತು‌ ಶಿಕ್ಷಕರು ಕಾಳಜಿ ವಹಿಸಿ ಮಗುವನ್ನು ಮಗುವಾಗಿ ಬೆಳೆಯಲಿ ಜಗತ್ತಿಗೆ ಬೆಳಕು ನೀಡುವಂತಾಗಲಿ‌ ಎಂದರು.

ನಗರಸಭಾ ಸದಸ್ಯ ಮತ್ತು ರಾಜ ಕುಷ್ಟಗಿ ಮಾತನಾಡಿ ಪಾಲಕರು ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ, ಕೇವಲ ಓದು ಅಷ್ಟೇ ಜೀವನವಲ್ಲಾ, ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳ ಬೇಡಿ ಎಂದು ಹೇಳಿದರು.

ನಿವೃತ್ತಿ ಪ್ರಾಚಾರ್ಯ ಸೋಮನಗೌಡ ಪಾಟೀಲ್ ಮಾತನಾಡಿ, ಎಜುಕೇರ ಶಾಲೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಈ ಶಾಲೆ ಉನ್ನತವಾದ ಮಟ್ಟಕ್ಕೆ ಬೆಳೆದು ಹೆಸರು ಮಾಡಲಿ ಎಂದು ಆಶಿಸಿದರು.

ಶಾಲಾ ಸಂಸ್ಥೆ ಅಧ್ಯಕ್ಷ ಡಾ. ಶ್ರೀನಿವಾಸ ಹ್ಯಾಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೇ ತಿಂಗಳಲ್ಲಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಆಗಲಿದ್ದು‌ ಮಕ್ಕಳ ಹಿತದೃಷ್ಟಿಯಿಂದ ಹಾಗೂ ಪಾಲಕರ ಆಶಯದಂತೆ ಉತ್ತಮ ಗುಣಮಟ್ಟದ ಕಟಡದಲ್ಲಿ ಮುಂದಿನ ವರ್ಷ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

ಸಮಾಜ ಸೇವಕರಾದ ಬಸವರಾಜ ನೀರಘಂಟಿ, ಕರುನಾಡ ಬೆಳಗು ಸಂಪಾದಕ ಸಂತೋಷ ದೇಶಪಾಂಡೆ, ಶಾರದಾ ಇಂಟರ್ ನ್ಯಾಷನಲ್ ಶಾಲೆಯ ಪಿಆರ್ ಓ ಮೃತ್ಯುಂಜಯ ರಾಂಪೂರ, ಅಂಜುಮನ್ ಕಮಿಟಿ ಅಧ್ಯಕ್ಷ ಆಸೀಪ್ ಕರ್ಕಿಹಳ್ಳಿ, ಶಾಲೆ ಮುಖ್ಯೋಪಾಧ್ಯಾಯರಾದ ಗಿರಿಜಾಪತಿ ಸ್ವಾಮಿ ವೇದಿಕೆಯಲ್ಲಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ‌ ಕ್ರೀಡೆಯಲ್ಲಿ ವಿಜಯತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣ ಕಾರ್ಯಕ್ರಮ ಜರುಗಿತು.

21ಕೆಪಿಎಲ್24 ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿ ಇರುವ ಎಜುಕೇರ್ ಇಂಗ್ಲೀಷ್ ಮೀಡಿಯಮ್ ಶಾಲೆಯ ವಾರ್ಷಿಕೋತ್ಸವ

Get real time updates directly on you device, subscribe now.

Comments are closed.

error: Content is protected !!
%d bloggers like this: