ಅಂಜನಾದ್ರಿ ಬೆಟ್ಟಕ್ಕೆ ಕೇಂದ್ರ ಸಚಿವರ ಭೇಟಿ: ವಿಶೇಷ ಪೂಜೆ

Get real time updates directly on you device, subscribe now.

* ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ
*ರಾಮಭಕ್ತೆ ಶಬರಿ ಗುಹೆಯ ಬಾರೆ ಹಣ್ಣುಗಳು ಅಯೋಧ್ಯೆಗೆ
ಶ್ರೀ ರಾಮಚಂದ್ರನ ರಕ್ಷಕ ಆಂಜನೇಯ: ಸಚಿವೆ ಶೋಭಾ ಕರಂದ್ಲಾಜೆ

 : ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆ ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಅವರು ರಾಮ ಭಕ್ತ ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಜನವರಿ 21ರಂದು ಸ್ವಚ್ಛ ತೀರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ, ಸ್ವಚ್ಛತಾ ಸೇವೆ ಸಲ್ಲಿಸಿದರು.
ಸಚಿವರು, ಅಂಜನಾದ್ರಿ ಬೆಟ್ಟದ ಮೇಲಿರುವ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಸ್ವಚ್ಛತಾ ಸೇವೆ ಸಲ್ಲಿಸಿದರು. ಅಯೋಧ್ಯೆಗೆ ತಲುಪಿಸಲು ರಾಮಭಕ್ತೆ ಶಬರಿ ಗುಹೆಯ ಬಾರೆ ಹಣ್ಣುಗಳನ್ನು ಭಕ್ತರು ಸಚಿವರಿಗೆ ನೀಡಿದರು.
ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆ ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಅವರು ಇದೆ ವೇಳೆ ಮಾತನಾಡಿ, ಶ್ರದ್ಧಾ ಕೇಂದ್ರವಾದ ಅಯೋಧ್ಯೆಯಲ್ಲಿ ಜ.22ಕ್ಕೆ ಜರುಗಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ. ಶ್ರೀ ರಾಮನಿಗೆ ಸಾಥ್ ಕೊಟ್ಟಿದ್ದು ಹಾಗೂ ಶ್ರೀ ರಾಮಚಂದ್ರನನ್ನು ರಕ್ಷಣೆ ಮಾಡಿದ್ದು ಆಂಜನೇಯ. ಸೀತಾ ಮಾತೆಯನ್ನು ಹುಡುಕಿದ್ದು, ರಾಮನಿಗಾಗಿ ಸೇತುವೆ ನಿರ್ಮಾಣ ಹಾಗೂ ಸಂಜೀವಿನಿಗಾಗಿ ಬೆಟ್ಟವನ್ನೇ ಹೊತ್ತು ತಂದವರು ಆಂಜನೇಯ. ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಿಮಿತ್ತ ಪವನಪುತ್ರ ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ರಾಮನ ಬರುವಿಕೆಗಾಗಿ ಹಲವಾರು ಬಾರಿ ಕಾದು, ರಾಮನಿಗಾಗಿ ಬಾರೆ ಹಣ್ಣುಗಳನ್ನು ನೀಡಿದ್ದ ರಾಮಭಕ್ತೆ ಶಬರಿಯ ಗುಹೆ ಸ್ಥಳದಿಂದ ಪ್ರಸಾದದ ರೂಪದಲ್ಲಿ ಭಕ್ತರು ನೀಡಿದ ಬಾರೆ ಹಣ್ಣುಗಳನ್ನು ಅಯೋಧ್ಯೆಗೆ ತಲುಪಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಹಲವು ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ: ಹನುಮನ ವಿಶೇಷ ಪೂಜೆಗೂ ಪೂರ್ವದಲ್ಲಿ ಸಚಿವರು, ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದ ರಥಕ್ಕೆ ಚಾಲನೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!