ಇಲಾಖಾವಾರು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಸಕಾಲ ಬಗ್ಗೆ ಜಾಗೃತಿ ಮೂಡಿಸಿ : ಎಡಿಸಿ ಸಾವಿತ್ರಿ ಬಿ.ಕಡಿ

Get real time updates directly on you device, subscribe now.

): ಸಕಾಲದಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ ಬಹಳಷ್ಟು ಸಾರ್ವಜನಿಕರಿಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಇಲಾಖಾವಾರು ಕಾರ್ಯಕ್ರಮ, ಸಭೆಗಳಲ್ಲಿ ಸಾರ್ವಜನಿಕರಿಗೆ ಸಕಾಲ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸಕಾಲ ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಾವಿತ್ರಿ ಬಿ.ಕಡಿ ಅವರು ಅಧಿಕಾರಿಗಳಿಗೆ ಹೇಳಿದರು.

ಶುಕ್ರವಾರದಂದು ಜಿಲ್ಲಾ ಪಂಚಾಯತ್‌ನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸಕಾಲ ಕಾಯ್ದೆಯ ಕುರಿತು ಹಾಗೂ ಸಕಾಲ ಕಾಯ್ದೆಯ ಅಡಿಯಲ್ಲಿ ಸಾರ್ವಜನಿಕರಿಗೆ ಒದಗಿಸಲಾದ ಹಕ್ಕುಗಳ ಹಾಗೂ ಸಕಾಲ ಕಾಯ್ದೆಯಡಿ ಅಧಿಸೂಚಿಸಲಾದ ಸೇವೆಗಳ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕುರಿತು ಸಕಾಲ ಅನುಷ್ಠಾನಾಧಿಕಾರಿಗಳು, ವಿಷಯ ನಿರ್ವಾಹಕರಿಗೆ ಆಯೋಜಿಸಲಾಗಿದ್ದ ಸಕಾಲ ಅರಿವು ಹರಿವು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಕಾಲ ಕಾಯ್ದೆಯ ಸಮರ್ಪಕ ಅನುಷ್ಠಾನ ಕುರಿತು ಅನುಷ್ಠಾನಾಧಿಕಾರಿಗಳಿಗೆ, ಇಲಾಖಾ ಅಧಿಕಾರಿಗಳಿಗೆ ಸೂಕ್ತ ತರಬೇತಿನ್ನು ನೀಡಲಾಗಿದೆ. ಅದರಂತೆ ಇಲಾಖಾ ಅಧಿಕಾರಿಗಳು ಸಕಾಲ ಅರ್ಜಿಗಳನ್ನು ವಿಲೇ ಮಾಡಲು ಕ್ರಮ ವಹಿಸಿದ್ದೀರಿ. ಆದರೆ ಇಂದಿಗೂ ಬಹುತೇಕ ಸಾರ್ವಜನಿಕರು ವಿವಿಧ ಸೌಲಭ್ಯಗಳನ್ನು ಪಡೆಯಲು ಭೌತಿಕವಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಸಕಾಲದಲ್ಲಿ ಅರ್ಜಿ ಸಲ್ಲಿಸುವ ಕುರಿತು ಬಹುತೇಕರಿಗೆ ಮಾಹಿತಿ ಇಲ್ಲ. ಆದ್ದರಿಂದ ಪ್ರತಿ ಇಲಾಖೆಗಳ ಅಧಿಕಾರಿಗಳು ನಿಮ್ಮ ಇಲಾಖೆಯ ಯಾವುದೇ ಕಾರ್ಯಕ್ರಮ, ಸಭೆಗಳನ್ನು ಆಯೋಜಿಸಿದಾಗ, ಗ್ರಾಮ ಪಂಚಾಯತಿವಾರು ತಳಮಟ್ಟದಿಂದ ಸಾರ್ವಜನಿಕರಿಗೆ ಸಕಾಲ ಕಾಯ್ದೆ, ಸಕಾಲದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಸಕಾಲದಲ್ಲಿ ಸಾರ್ವಜನಿಕರಿಗೆ ಒದಗಿಸಲಾದ ಹಕ್ಕುಗಳು, ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಕಾಲದಲ್ಲಿ ಅರ್ಜಿ ಸಲ್ಲಿಸುವಂತೆ ಕಾರ್ಯಕ್ರಮ ರೂಪಿಸಿ ಎಂದು ಅವರು ಹೇಳಿದರು.
ಸಕಾಲ ಅನುಷ್ಠಾನಾಧಿಕಾರಿಗಳು ಯಾವುದೇ ಕಾರಣಕ್ಕೂ ಅರ್ಜಿ ವಿಲೇ ಮಾಡಲು ನಿಗದಿಪಡಿಸಿದ ಅವಧಿಯನ್ನು ಮೀರಬಾರದು. ಅವಧಿ ಮೀರಿದರೆ ಅಥವಾ ತಪ್ಪು ಹಾಗೂ ವಿಳಂಬ ಮಾಹಿತಿ ನೀಡಿದರೆ ಸಂಬAಧಿಸಿದವರಿAದ ದಂಡ ವಸೂಲಾತಿ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಿಳಂಬ ಮಾಡಿದಷ್ಟು ಋಣಾತ್ಮಕ ಅಂಕಗಳು ಸೇರ್ಪಡೆಯಾಗುತ್ತವೆ. ಇದರಿಂದ ಅಧಿಕಾರಿ ಹಾಗೂ ವಿಷಯ ನಿರ್ವಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಆದ್ದರಿಂದ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ನಿಗದಿತ ಅವಧಿಯಲ್ಲಿ ಸಕಾಲ ಅರ್ಜಿ ವಿಲೇ ಮಾಡಲು ಕ್ರಮ ಕೈಗೊಳ್ಳಿ ಎಂದು ಅಪರ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಸಕಾಲ ಮೇಲ್ವಿಚಾರಕರಾದ ಕಾಮಾಕ್ಷಿ ಹಾಗೂ ಸಕಾಲ ಕನ್ಸಲ್ಟಂಟ್ ವಿಶ್ವನಾಥ ಅವರು ಸಕಾಲ ಕಾಯ್ದೆ, ಸಕ್ಷಮ ಹಾಗೂ ಅಪೀಲು ಅಧಿಕಾರಿ, ನಾಗರಿಕರ ಸೇವಾ ಖಾತರಿ ಅಧಿನಿಯಮ, ಪರಿಹಾರಾತ್ಮಕ ವೆಚ್ಚ ಮುಂತಾದವುಗಳ ಬಗ್ಗೆ ತರಬೇತಿ ಮೂಲಕ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ತಾಲ್ಲೂಕುಗಳ ಗ್ರೇಡ್-2 ತಹಶೀಲ್ದಾರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: