ರಾಮಮಂದಿರ ಉದ್ಘಾಟನೆ ನಿಮಿತ್ಯ-ರಾಮಾಯಣ, ಮಹಾಭಾರತ ಪರೀಕ್ಷೆ
ಗಂಗಾವತಿ. : ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಅಂಗವಾಗಿ ನಗರದಲ್ಲಿ ಮಾತೆಯರಿಗಾಗಿ ರಾಮಾಯಣ ಮತ್ತು ಮಹಾಭಾರತದ ಪರೀಕ್ಷೆಯನ್ನು ಆಯೋಜಿಸಲಾಗಿದೆ.
ಸದ್ಭಾವನಾ ಸೇವಾ ಸಂಸ್ಥೆ ಮತ್ತು ಭಾರತಿ ಸಂಸ್ಕೃತಿ ಪ್ರತಿಷ್ಟಾನ ಬೆಂಗಳೂರು ಸಹಯೋಗದಲ್ಲಿ ಈ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಶಾಂತಾ ಸುಬ್ರಮಣ್ಯಭಟ್ ರಾಯ್ಕರ್ ತಿಳಿಸಿದ್ದಾರೆ. ಭಾರತದ ಸನಾತನ ಸಂಸ್ಕೃತಿಯ ತಿರುಳಾಗಿರುವ ರಮಾಯಣ ಮತ್ತು ಮಹಾಭಾರತ ಗ್ರಂಥಗಳು ಪ್ರತಿಯೊಬ್ಬರು ಅಧ್ಯಯನ ಮಾಡಬೇಕು. ಈ ಎರಡು ಭಾರತದ ಪವಿತ್ರ ಗ್ರಂಥಗಳಾಗಿದ್ದು, ಈ ಗ್ರಂಥಗಳಲ್ಲಿ ಬರುವ ಹಲವು ಪಾತ್ರಗಳು ಜೀವನಕ್ಕೆ ಆದರ್ಶವಾಗಿವೆ. ಜೊತೆಗೆ ಬದುಕುವನ್ನು ಕಲಿಸುತ್ತವೆ. ಜಗತ್ತು ಇಂದು ಅಧ್ಯಾತ್ಮಕದ ಕಡೆ ಹೊರಳುತ್ತಿರುವ ಸಂದರ್ಭದಲ್ಲಿ ಭಾರತೀಯರು ವಿದೇಶಿ ಸಂಸ್ಕೃತಿಗೆ ಮಾರು ಹೊಗದೇ ಭಾರತೀಯ ಸಂಸ್ಕೃತಿಯನ್ನು ಇನ್ನಷ್ಟು ಅಳವಡಿಸಿಕೊಳ್ಳುವ ಉದ್ದೇಶದಿಂದ ರಾಮಾಯಣ ಮಹಾಭಾರತ ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಮತ್ತು ಜ.೨೨ ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಿಮಿತ್ಯ ಸಂಸ್ಥೆ ಜೂನ್.೨ ರಂದು ನಗರದ ಲಯನ್ಸ್ ಶಾಲೆಯಲ್ಲಿ ಫೆಬ್ರವರಿ-೨೯ ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಪರೀಕ್ಷೆಯಲ್ಲಿ ಪ್ರಥಮ, ದ್ವೀತಿಯ ಮತ್ತು ತೃತಿಯ ಸ್ಥಾನದ ನಗದು ಮಹುಮಾನ ನೀಡಲಾಗುತ್ತದೆ. ಹೆಚ್ಚಿನ ಮಹಾತಿಗಾಗಿ ಸಂಯೋಜಕರಾದ ರೂಪಾ ಗಿರೀಶ್ ರಾಯ್ಕರ್(೯೭೪೩೨೧೪೯೨೪) ಮತ್ತು ಗಾಯತ್ರಿ ಮಂಜುನಾಥ ವರ್ಣೆಕರ್(೮೬೬೦೪೭೫೯೬೬) ಅವರನ್ನು ಸಂಪರ್ಕಿಸಲು ಕೊರಿದ್ದಾರೆ.
Comments are closed.