ಮಹಾದಾಸೋಹದಲ್ಲಿ ೪೦೦ ಬಾಣಸಿಗರಿಂದ ಮಿರ್ಚಿಯ ತಯಾರಿಕೆ

Get real time updates directly on you device, subscribe now.

ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆಆರಂಭವಾಗಿದ್ದುಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಪ್ರತಿ ವರ್ಷದಂತೆಜಾತ್ರಾ ಮಹಾದಾಸೋಹದಲ್ಲಿ ಈ ವರ್ಷವೂಜಾತ್ರಾ ಮಹೋತ್ಸವದಎರಡನೇ ದಿನವಾದ ೨೮.೦೧.೨೪ರ ರವಿವಾರದಂದುಉತ್ತರಕರ್ನಾಟಕದ ವಿಶೇಷ ಖಾದ್ಯವಾದ ಮಿರ್ಚಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಿರ್ಚಿತಯಾರಿಕೆಗೆ ೨೫ಕ್ವಿಂಟಾಲ್ ಹಸೆ ಹಿಟ್ಟು, ೧೦ಬ್ಯಾರಲ್ ಎಣ್ಣೆ, ೨೦ಕ್ವಿಂಟಾಲ್ ಮೆಣಸಿನಕಾಯಿ, ೬೦ಕೆಜಿ ಅಜಿವಾನ, ೬೦ಕೆಜಿ ಸಣ್ಣಉಪ್ಪು, ೬೦ಕೆಜಿ ೫೦ಗ್ಯಾಸ್‌ಸಿಲಿಂಡರ್, ಸೊಡಾಪುಡಿ ಬಳಸಲಾಗುತ್ತದೆ.ಮಿರ್ಜಿತಯಾರಿಕೆಗೆ ನೂರುಜನರ ನಾಲ್ಕು ತಂಡದಂತೆಒಟ್ಟು ೪೦೦ಜನ ಬಾಣಸಿಗರು ಮಿರ್ಚಿತಯಾರಿಕೆಯ ಸೇವೆಯಲ್ಲಿತೊಡಗಲಿದ್ದಾರೆ. ಮಿರ್ಚಿ ಸೇವೆಗೆ ಮೈನಳ್ಳಿ, ಶಿರಗುಪ್ಪ, ಓತಗೇರಿ, ಬಿಸರಳ್ಳಿ, ಗೊಂಡಬಾಳ, ವೀರಾಪುರ, ಇರಕಲ್ಲಗಡ, ತಾಳಕನಕಾಪುರ, ಲಕಮಾಪುರ ಬೇಟಗೇರಿ, ಡಂಬ್ರಳ್ಳಿ ಗ್ರಾಮದ ಬಾಣಸಿಗರು ಸೇವೆಗೈಯ್ಯುತ್ತಿದ್ದಾರೆ.ಸುಮಾರುಎರಡು-ಮೂರು ಲಕ್ಷಜನರು ಮಿರ್ಚಿಯನ್ನು ಪ್ರಸಾದದಲ್ಲಿ ಸವಿಯುತ್ತಾರೆಎಂದುಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: