ಶ್ರೀ ಗವಿಮಠ ಆವರಣದಲ್ಲಿ ಸುಂದರಮಂಟಪ ಹಾಗೂ ಹಸಿರು ಹಾಸಿಗೆ

Get real time updates directly on you device, subscribe now.


ಭಕ್ತರ ಏಳಿಗೆಗಾಗಿ ಸಾಮಾಜಮುಖಿ ಕಾರ್ಯಗಳಿಂದ ಹೆಸರುವಾಸಿಯಾದ ಶ್ರೀಗವಿಮಠ ಭಕ್ತರಲ್ಲಿ ಭಗವಂತನನ್ನು ಕಾಣುತ್ತಿದೆಎನ್ನುವುದಕ್ಕೆ ಮಹಾ ಜಾತ್ರೋತ್ಸವ ಹಾಗೂ ಮಹಾದಾಸೋಹ ಶೈಕ್ಷಣಿಕ ಕೊಡುಗೆಗಳೇ ಸಾಕ್ಷಿ.ಮತ್ತೆಇನ್ನೊಂದು ಹೆಜ್ಜೆಎಂಬಂತೆ ಶ್ರೀಮಠಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತರು ಮಠದ ಸಂಪತ್ತು, ಭಾವಿಸಿರುವ ಸಂಸ್ಥಾನ ಶ್ರೀ ಗವಿಮಠವುಆಗಮಿಸಿದ ಭಕ್ತರಿಗೆ ಭಕ್ತಿಯಜೊತೆಗೆಅಕರ್ಷಣೆಯಅನಂದತುಂಬಲು ಶ್ರೀ ಮಠದಆವರಣವು ಹಸಿರು ಹಾಸಿಗೆಯಿಂದ ಶೃಂಗಾರಗೊಂಡಿರುವುದುಪ್ರಸ್ತುತ ವರ್ಷದಬಹಳ ವಿಶೇಷತೆಯಾಗಿದೆ.ಶ್ರೀಮಠದ ಮುಂಭಾಗದ ಮಹಾದ್ವಾರ ಪ್ರವೇಶಿಸುತ್ತಿದ್ದಂತೆ ಒಳ ಆವರಣವು ಸಂಪೂರ್ಣ ಸುಂದರವಾದ ಹಸಿರು ಹೊದಿಕೆಯಿಂದ ಮಧುವಣಗಿತ್ತಿಯಂತೆಅಲಂಕೃತಗೊಂಡು ಶ್ರೀ ಮಠದಅತ್ಯಾಕರ್ಷಣೆಯಾಗಿದೆ.ಈಗಾಗಲೇ ಸುಂದರಮಹಾಮಂಟಪದ್ವಾರಬಾಗಿಲಿನ ಮುಂಭಾಗದಆವರಣ ಮಧ್ಯದಲ್ಲಿ ನಿರ್ಮಾಣಗೊಂಡಿದ್ದು,ಅದರ ಸುತ್ತಲು ಹಸಿರು ಹುಲ್ಲಿನಅಕರ್ಷಣೆ ಮಂಟಪವನ್ನು ಮತ್ತಷ್ಟು ಸುಂದರಗೂಳಿಸಿದೆ.ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದಆವರಣ, ಶ್ರೀ ಗವಿಸಿದ್ಧೇಶ್ವರರ ಕರ್ತೃಗದ್ದುಗೆದರ್ಶನದ ಪ್ರವೇಶದ್ವಾರಮುಂಬಾಗ, ನೂತನವಾಗಿಆಕರ್ಷಕವಾಗಿ ನಿರ್ಮಾಣಗೊಂಡತೆಂಗಿನ ಕಾಯಿ ಒಡೆಯು ಮಂಟಪದಆವರಣ, ಕೆರೆಯ ಮುಂಭಾಗ, ದಾಸೋಹದಎದುರಿಗೆಇರುವಆವರಣಎಲ್ಲವು ಶ್ರೀಮಠದ ಸೊಬಗನ್ನು ಹೆಚ್ಚಿಸಿವೆ. ಅಲ್ಲದೇ ಪ್ರವೇಶದ್ವಾರ ಸಾಗುತ್ತಿದ್ದಂತೆಎಡ ಮತ್ತು ಬಲದಲ್ಲಿಎರಡು ಮತ್ತು ಶ್ರೀ ಮಠಕ್ಕೆ ಪ್ರವೇಶ ಪಡೆಯುವ ಮೂಲ ರಸ್ತೆಯಆರಂಭದಲ್ಲಿಎಡ ಮತ್ತು ಬಲದಲ್ಲಿಎರಡು ಸುಂದರ ಮಂಟಪಗಳು ನೂತನವಾಗಿ ನಿರ್ಮಿಸಿರುವುದು ಶ್ರೀ ಮಠದ ಸೌಂದರ್ಯದುಪ್ಪಟ್ಟು ಹೆಚ್ಚಿಸಿದೆ. ಎಲ್ಲ ಮಂಟಪಗಳು ಮಲ್ಲಿಗೆಯ ಬಿಳುಪಿನ ಸುಂದರ ಕೆತ್ತನೆಗಳಾಗಿದ್ದು ಶ್ರೀ ಮಠಕ್ಕೆ ಆಗಮಿಸಿದ ಭಕ್ತರ ಮನಸ್ಸುಆಕರ್ಷಿಸದೆಇರವು.ಇನ್ನೂ ಶ್ರೀ ಮಠದ ಸೌಂದರಿಕರಣದ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಇನ್ನೂ ಸುಂದರ ಹೂ ಗಿಡಗಳಿಂದ ಆವರಣಅಲಂಕೃತಗೊಂಡು ಈ ವರ್ಷದಜಾತ್ರೆಯ ಮತ್ತಷ್ಟು ಕಹಳೆ ಹೆಚ್ಚಿಸಲಿವೆ.

Get real time updates directly on you device, subscribe now.

Comments are closed.

error: Content is protected !!