ಜಿಲ್ಲೆಗೆ ವಿಭಾಗೀಯ ಅಂಚೆ ಕಚೇರಿ ಮಂಜೂರು | ಸಂಸದ ಸಂಗಣ್ಣ ಹರ್ಷ

Get real time updates directly on you device, subscribe now.

ದಶಕಗಳ ಕನಸು ಬಿಜೆಪಿಯಿಂದ ನನಸು
ಕೊಪ್ಪಳ: ಜಿಲ್ಲೆಗೆ ವಿಭಾಗೀಯ ಅಂಚೆ ಕಚೇರಿ ಸ್ಥಾಪನೆ ದಶಕಗಳ ಕನಸಾಗಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಕ್ಯಾರೇ ಎಂದಿದ್ದಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ ಪರಿಣಾಮ ಜಿಲ್ಲೆಗೆ ವಿಭಾಗೀಯ ಅಂಚೆ ಕಚೇರಿ ಮಂಜೂರಾಗಿದೆ. ನುಡಿದಂತೆ ನಡೆದುಕೊಂಡಿದ್ದೇನೆ ಎಂದು ಸಂಸದ ಸಂಗಣ್ಣ ಕರಡಿ ಹರ್ಷ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆ ರಜತ ಮಹೋತ್ಸವ ಆಚರಿಸಿಕೊಂಡರೂ, ವಿಭಾಗೀಯ ಅಂಚೆ ಕಚೇರಿ ಇರಲಿಲ್ಲ. ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಬಗ್ಗೆ ಗಮನ ಹರಿಸಿರಲಿಲ್ಲ. ಚುನಾವಣೆ ವೇಳೆಯೇ ವಿಭಾಗೀಯ ಅಂಚೆ ಕಚೇರಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ್ದೆ. ಈ ಬಗ್ಗೆ ಕೇಂದ್ರಕ್ಕೆ ವಾಸ್ತವ ಸ್ಥಿತಿ ತಿಳಿಸಿ ಮನವರಿಕೆ ಮಾಡಿದ್ದೆ. ಇದರ ಪರಿಣಾಮವಾಗಿ ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೊಪ್ಪಳ ಜನತೆ ಪರವಾಗಿ ಅಭಿನಂದನೆಗಳು ಎಂದು ತಿಳಿಸಿದರು.
ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಬದ್ಧತೆ. ಚುನಾವಣೆ ವೇಳೆ ಕೊಟ್ಟ ಭರವಸೆ ಬಳಿಕ ಈಡೇರಿಸದಿರುವ ಚಾಳಿ ಕಾಂಗ್ರೆಸ್ ನವರದ್ದು, ನಾವು ಕೊಟ್ಟ ಭರವಸೆ ಈಡೇರಿಸಿ ಜನರ ಹಾಗೂ ಜಿಲ್ಲಾ ಅಭಿವೃದ್ಧಿ ಗೆ ಶ್ರಮಿಸುತ್ತಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ್ದು ದೇಶ ಮೊದಲು ಪಕ್ಷ ಬಳಿಕ ಎಂಬ ಸಂಕಲ್ಪ ದೊಂದಿಗೆ ಕೆಲಸ ಮಾಡುತ್ತಿದ್ದೇವೆ. ನನ್ನ ಮನವಿಯಂತೆ ವಿಭಾಗೀಯ ಅಂಚೆ ಕಚೇರಿ ಮಂಜೂರು ಮಾಡಲಾಗಿದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಡಿಸಿಸಿ ಬ್ಯಾಂಕ್ ಸ್ಥಾಪನೆ:
ಜಿಲ್ಲೆಯಾಗಿ 26 ವರ್ಷವಾಗದೂ, ಇದುವರೆಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸ್ಥಾಪನೆಯಾಗುವ ಆಸೆ ಮಾತ್ರ ಕೈಗೂಡಿಲ್ಲ. ಈ ಬ್ಯಾಂಕ್‌ ಕೊಪ್ಪಳ ನಗರದಲ್ಲಿ ಎರಡು, ಗಂಗಾವತಿ, ಯಲಬುರ್ಗಾ, ಕುಕನೂರು, ಕುಷ್ಟಗಿ, ಹನುಮಸಾಗರ, ಕಾರಟಗಿ, ಮುನಿರಾಬಾದ್‌ ಹಾಗೂ ತಾವರಗೇರಾದಲ್ಲಿ ತಲಾ ಒಂದು ಶಾಖೆಗಳನ್ನು ಹೊಂದಿದೆ. ಕೊಪ್ಪಳ ಜಿಲ್ಲೆಯಲ್ಲಿ 102 ವ್ಯವಸಾಯ ಸೇವಾ ಸಹಕಾರ ಸಂಘಗಳು (ವಿಎಸ್ಎಸ್ಎನ್) ಇದ್ದು, ಆರ್‌ಡಿಸಿಸಿ ಬ್ಯಾಂಕ್‌ 600ಕೂ ಅಧಿಕ ಕೋಟಿ ಸಾಲ ನೀಡುವ ಗುರಿ ಹೊಂದಿದೆ. 1,000 ಕೋಟಿ ಠೇವಣೆಯಿದೆ. ಕಾಂಗ್ರೆಸ್ ಇಚ್ಛಶಕ್ತಿ ಕೊರತೆಯಿಂದ ಡಿಸಿಸಿ ಬ್ಯಾಂಕ್ ಜಿಲ್ಲೆಯಲ್ಲಿ ಸ್ಥಾಪನೆಯಾಗಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯಗಳಿಸಿದ ತಕ್ಷಣವೇ ಡಿಸಿಸಿ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆ ರಚನೆಯಾದಾಗ ನಾನು ಶಾಸಕನಾಗಿದ್ದೆ. ಅಂದಿನಿಂದಲೂ ಜಿಲ್ಲೆಗೆ ವಿಭಾಗೀಯ ಅಂಚೆ ಕಚೇರಿ ಆರಂಭದ ಕೂಗು ಕೇಳಿಬರುತ್ತಿತ್ತು. ನಾನು ಸಂಸದನಾದ ಬಳಿಕ ಕೇಂದ್ರಕ್ಕೆ ವಾಸ್ತವ ಸ್ಥಿತಿ ತಿಳಿಸಿ ಮನವರಿಕೆ ಮಾಡಿದ್ದೆ. ಕೇಂದ್ರ ಸರ್ಕಾರ ಕಚೇರಿ ಮಂಜೂರು ಮಾಡಿದೆ.
– ಸಂಗಣ್ಣ ಕರಡಿ, ಸಂಸದ.

Get real time updates directly on you device, subscribe now.

Comments are closed.

error: Content is protected !!
%d bloggers like this: