ಶ್ರೀಮಠದ ಜಾಗೃತಿ ಜಾಥಾದ ಪೂರ್ವಭಾವಿ ಸಭೆ

Get real time updates directly on you device, subscribe now.


ಸಂಸ್ಥಾನ ಶ್ರೀ ಗವಿಮಠದಜಾತ್ರಾಮಹೋತ್ಸವವೆಂದರೆಧಾರ್ಮಿಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕಜಾಗೃತಿಕಾರ್ಯಕ್ರಮಜಾತ್ರಾಮಹೋತ್ಸವದ ವಿಶೇಷತೆ. ಈ ವರ್ಷವೂ ಸಹ ವಿನೂತನವಾದಜಾಗೃತಿ ಮೂಡಿಸಲು ಶ್ರೀಮಠವು ಹೊಸ ಸಂಕಲ್ಪದೊಂದಿಗೆ ಸಿದ್ಧವಾಗಿದೆ. ಈ ಒಂದು ಸತ್ಕಾರ್ಯಕ್ಕೆ ಭಕ್ತರು, ಜಿಲ್ಲಾಡಳಿತ, ಜಿಲ್ಲೆಯ ವಿವಿಧ ಇಲಾಖೆಗಳು, ಸಂಘ-ಶಾಲಾ ಸಂಸ್ಥೆಗಳ ಸಹಕಾರ ಮರೆಯುವಂತಿಲ್ಲ. ಶ್ರೀಮಠದ ಜಾಗೃತಿಜಾಥಾ ಈ ವರ್ಷವೂ ಸಹ ಸಾರ್ವತ್ರಿಕ ಸಹಕಾರ ಪ್ರೋತ್ಸಾಹದೊಂದಿಗೆ ‘ಸ್ವಯಂಉದ್ಯೋಗ’ ಹಾಗೂ ‘ವೃತ್ತಿಕೌಶಲ್ಯದ ಸಂಕಲ್ಪ’ ಜಾಗೃತಿಅಭಿಯಾನ, ‘ಕಾಯಕದೇವೋಭವ’ ಎಂಬ ಜಾಗೃತಿಜಾಥಾವು’ಸ್ವಾವಲಂಬಿ ಬದುಕು, ಸಮೃದ್ಧಿ ಬದುಕು, ಸಂತೋಷದ ಬದುಕು’ ಎಂಬ ಘೋಷವಾಕ್ಯದೊಂದಿಗೆ ದಿನಾಂಕ ೨೪.೦೧.೨೦೨೪ರ ಬೆಳಿಗ್ಗೆ ೮.೩೦ ಗಂಟೆಗೆ ಬುಧವಾರಜಾಥಾವು ಕೊಪ್ಪಳದ ಬಾಲಕಿಯರ ಸರಕಾರಿಕಾಲೇಜಿನ ಮೈದಾನ(ತಾಲೂಕುಕ್ರೀಡಾಂಗಣ) ದಿಂದ ಚಾಲನೆಗೊಂಡುಆರಂಭವಾಗಿ ಅಶೋಕ ವೃತ್ತ, ಜವಾಹರರಸ್ತೆ, ಗಡಿಯಾರಕಂಬದ ಮೂಲಕ ಶ್ರೀಗವಿಮಠದ ಜಾತ್ರಾ ಮಹಾದಾಸೋಹಕ್ಕೆತಲುಪಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ.
ಈ ಒಂದುಜಾಗೃತಿಜಾಥಾಕಾರ್ಯಕ್ರಮದ ನಿಮಿತ್ಯಕಾರ್ಯಕ್ರಮ ಯಶಸ್ವಿಗೂಳಿಸಲು ಇಂದು ದಿನಾಂಕ ೧೯.೦೧.೨೦೨೪ರಂದು ಬೆಳಗ್ಗೆ ೧೦:೩೦ಕ್ಕೆ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಪಂಚಾಯತಕೊಪ್ಪಳ, ಪದವಿ ಪೂರ್ವ ಶಿಕ್ಷಣ ಇಲಾಖೆ ಕೊಪ್ಪಳ, ಸಾರ್ವಜನಿಕಶಾಲಾ ಶಿಕ್ಷಣ ಇಲಾಖೆ ಕೊಪ್ಪಳ, ಜಿಲ್ಲಾಕೌಶಲ್ಯಾಭಿವೃದ್ದಿ ಇಲಾಖೆ ಕೊಪ್ಪಳ, ಭಾರತೀಯರೆಡ್‌ಕ್ರಾಸ್ ಸಂಸ್ಥೆ ಕೊಪ್ಪಳ ಹಾಗೂ ಸ್ಥಳಿಯ ಸಂಘಗಳು ಮತ್ತುಶಿಕ್ಷಣ ಸಂಸ್ಥೆಗಳು ಇವುಗಳ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!