ಪ್ರಕಾಶ ಕಂದಕೂರಗೆ ಎಫ್‌ಐಪಿ ಚಿನ್ನದ ಪದಕ

Get real time updates directly on you device, subscribe now.


ಕೊಪ್ಪಳ: ಬಿಹಾರದ ಪಾಟ್ನಾದಲ್ಲಿನ ಫೆಡರೇಷನ್‌ ಆಫ್‌ ಇಂಡಿಯನ್‌ ಫೊಟೋಗ್ರಫಿ ವತಿಯಿಂದ ನಡೆದ 38ನೇ ಎಫ್‌ಐಪಿ ಇಂಟರ್‌ಕ್ಲಬ್‌ ಕಾಂಟೆಸ್ಟ್‌ನಲ್ಲಿ ಕೊಪ್ಪಳದ ಪ್ರಕಾಶ ಕಂದಕೂರಗೆ ಫೆಡರೇಷನ್‌ ಆಫ್‌ ಇಂಡಿಯನ್‌ ಫೊಟೋಗ್ರಫಿಯ ಚಿನ್ನದ ಪದಕ(FIP Gold Medal) ಲಬಿಸಿದೆ.
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ʻಗವಿಸಿದ್ಧೇಶ್ವರ ರಥೋತ್ಸವʼ ಶೀರ್ಷಿಕೆಯ ಅವರ ಚಿತ್ರ ಟ್ರಾವೆಲ್‌ ವಿಭಾಗದಲ್ಲಿ ಈ ಪ್ರಶಸ್ತಿಗೆ ಭಾಜನವಾಗಿದೆ. ಒಟ್ಟು 46 ಅಂತರಾಷ್ಟ್ರೀಯ ಕ್ಲಬ್‌ಗಳ 2,000 ಕ್ಕೂ ಹೆಚ್ಚು ಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರಕಾಶ ಬೆಂಗಳೂರಿನ ಯೂತ್‌ ಫೊಟೋಗ್ರಫಿಕ್‌ ಸೊಸೈಟಿಯೊಂದಿಗೆ ಭಾಗವಹಿಸಿದ್ದರು. ಇದೇ ಸ್ಪರ್ಧೆಯಲ್ಲಿ ಸೊಸೈಟಿ ಕೂಡ ಅಗ್ರ ಸ್ಥಾನ ಪಡೆದುಕೊಂಡಿರುವುದು ವಿಶೇಷ.

Get real time updates directly on you device, subscribe now.

Comments are closed.

error: Content is protected !!
%d bloggers like this: