ಶ್ರೀ ಗವಿಸಿದ್ಧೇಶ್ವರ ಮಹಾತ್ಮೆ ನಾಟಕ ಪ್ರದರ್ಶನ
ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಿನವಾದಜನೆವರಿ ೨೭ ಹಾಗೂ೨೮ ರಂದುಪ್ರತಿ ದಿನ ರಾತ್ರಿ ೧೦.೩೦ ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಸೇವಾ ನಾಟ್ಯ ಸಂಘ ಹಿರೇಬಗನಾಳ ಇವರಿಂದಶ್ರೀ ಗವಿಸಿದ್ಧೇಶ್ವರ ಮಹಾತ್ಮೆನಾಟಕವು ಪ್ರದರ್ಶನಗೊಳ್ಳಲಿದೆ. ಈ ಭಕ್ತಿ ಪ್ರಧಾನವುಳ್ಳ ನಾಟಕವುಜಾತ್ರಾ ಮೈದಾನದಲ್ಲಿರುವ ಪಾದಗಟ್ಟಿ( ಶ್ರೀ ಶಿವಶಾಂತವೀರ ಪಬ್ಲಿಕ್ ಸ್ಕೂಲ್ ಮುಂಬಾಗ) ಆವರಣದಲ್ಲಿ ಪ್ರದರ್ಶನಗೊಳ್ಳಲಿದ್ದು ಕೊಪ್ಪಳ ಹಾಗೂ ಸುತ್ತಮುತ್ತಲಿನ ಭಕ್ತಜನಸ್ತೋಮಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್ ಮೊಬೈಲ್ ಸಂಖ್ಯೆ ೯೪೪೮೫೭೦೩೪೦ ಸಂಪರ್ಕಿಸಬಹುದು.
ಭರದಿಂದ ಸಾಗಿದ ಶ್ರೀಮಠದ ಸ್ವಚ್ಚತಾಕಾರ್ಯ
ಕೊಪಳ : ನಗರದ ಶ್ರೀಗವಿಮಠದ ಜಾತ್ರಾ ಮಹಾರಥೋತ್ಸವಕ್ಕೆ ದಿನಗಣನೆ ಪ್ರಾರಂಭವಾದ ನಿಮಿತ್ಯಮಠದಲ್ಲಿ ಸಿದ್ಧತೆಯ ಕಾರ್ಯಗಳು ಭರದಿಂದ ಸಾಗುತ್ತಲಿವೆ. ಬೆಳಿಗ್ಗೆಯಿಂದ ಮಠದ ಸ್ವಚ್ಚತಾ ಸಿಬ್ಭಂದಿಗಳು ಸ್ವಚ್ಚತಾಕಾರ್ಯದಲ್ಲಿತೊಡಗಿದ್ದರು.ಶ್ರೀಮಠದ ಆವರಣ, ಕೆರೆ-ಕೆರೆಯಂಗಳ, ಗುಡ್ಡ-ಗವಿ, ಜಾತ್ರಾಮೈದಾನ , ರಸ್ತೆ- ರಥಬೀದಿ ನಾನಾ ಕಡೆಗಳಲ್ಲಿ ಸ್ವಚ್ಚತಾ ಸಿಬ್ಭಂದಿದಣಿವರಿಯದೇಕಾಯಕದಲ್ಲಿ ನಿರತರಾಗಿದ್ದುಕಂಡು ಬಂದಿತು. ಇದರಿಂದಶ್ರೀಮಠದ ಆವರಣಇದೀಗ ಶುಭ್ರವಾಗಿ ನಳನಳಿಸುತ್ತಿದೆ.ಸ್ವಚ್ಚತಾ ಸಮಿತಿಯ ಅನೇಕ ಸಿಬ್ಬಂಧಿಗಳು ಈ ಕಾರ್ಯದಲ್ಲಿ ನಿರತರಾಗಿದ್ದರು.
ಸಹಸ್ರಾರು ಭಕ್ತರು ಶ್ರೀಗವಿಮಠಕ್ಕೆ ಆಗಮನ
ಶ್ರೀ ಗವಿಮಠಕ್ಕೆಇಂದುಬೆಳಿಗ್ಗೆಯಿಂದ ಸಾಯಂಕಾಲದವರೆಗೂಭಕ್ತರುಮಕರಸಂಕ್ರಾಂತಿಯ ನಿಮಿತ್ಯನಾಡಿನ ನಾನಾ ಭಾಗಗಳಿಂದ ಸಹಸ್ರಾರು ಮಹಿಳೆಯರು, ಮಕ್ಕಳು ಹಾಗೂ ಭಕ್ತಾಧಿಗಳು ಗವಿಮಠಕ್ಕೆ ಆಗಮಿಸಿ ಕರ್ತೃ ಶ್ರೀ ಗವಿಸಿದ್ಧೇಶ್ವರನಗದ್ದುಗೆ ಹಾಗೂ ಪೂಜ್ಯ ಶ್ರೀಗಳ ದರ್ಶನಾಶಿರ್ವಾದ ಪಡೆದು ಪ್ರಸಾದ ಸ್ವೀಕರಿಸಿ ಧನ್ಯತೆಯ ಭಕ್ತಿ ಭಾವವನ್ನುಅರ್ಪಿಸುತ್ತಿರುವುದುಕಂಡುಬಂದಿತು. ಬೆಳಿಗ್ಗೆಯಿಂದ ಸಂಜೆಯವರೆಗೂ ನಿರಂತರವಾಗಿ ಭಕ್ತರು ಬರತೊಡಗಿದ್ದರಿಂದ ಶ್ರೀಮಠದಲ್ಲಿ ಭಕ್ತಿ-ಭಾವದ ಕಳೆ ತುಂಬಿತ್ತು.
Comments are closed.