ಕೊಪ್ಪಳ ಬಿಜೆಪಿಗೆ ನೂತನ ಸಾರಥಿ
ಕೊಪ್ಪಳ : ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರ ನೇಮಕವಾಗಿದ್ದು ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ನವೀನ್ ಗುಳಗಣ್ಣನವರ ನೇಮಕವಾಗಿದ್ದಾರೆ. ಈ ಕುರಿತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ಮಾಜಿ ಶಾಸಕ ಈಶಣ್ಣ ಗುಳಗಣ್ಣವರ ಪುತ್ರರಾಗಿರುವ ನವೀನ್ ಪಕ್ಷ ಸಂಘಟನೆ ಯ ಮೂಲಕ ಜನಪ್ರಿಯರಾಗಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಹೇಶ ಅಂಗಡಿ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ್ ದಡೆಸೂಗೂರ ಸೇರಿದಂತೆ ಇತರರ ಹೆಸರು ಕೇಳಿ ಬಂದಿತ್ತು. ಕೊನೆಗೆ ಪಕ್ಷದ ಹೈಕಮಾಂಡ್ ನವೀನ್ ಗುಳಗಣ್ಣನವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
Comments are closed.