ಜ.27ರಿಂದ ಸಂಜೀವಿನಿ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ವಸ್ತು ಪ್ರದರ್ಶನ, ಮಾರಾಟ ಮೇಳ

Get real time updates directly on you device, subscribe now.

 ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಬೆಂಗಳೂರು ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೌಶಲ್ಯ ಮಿಷನ್ ಕೊಪ್ಪಳ ರವರ ಸಂಯುಕ್ತಾಶ್ರಯದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಕೊಪ್ಪಳ 2024ರ ಅಂಗವಾಗಿ “ಕಾಯಕ ದೇವೋಭವ” ಸ್ವಾವಲಂಭಿ ಬದುಕು, ಸಮೃದ್ದಿ ಬದುಕು, ಸಂತೋಷ ಬದುಕು ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ರೀಯ ಜೀವನೋಪಾಯ ಅಭಿಯಾನದಡಿಯಲ್ಲಿ “ಅಸ್ಮಿತೆ” ನಗರ ಮತ್ತು ಗ್ರಾಮೀಣ ಸಂಜೀವಿನಿ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಜನವರಿ 27 ರಿಂದ ಫಬ್ರವರಿ 09ರ ವರೆಗೆ  ಶ್ರೀ ಗವಿಮಠ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ.
ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸ್ವ-ಉದ್ಯೋಗದಲ್ಲಿ ತೋಡಗಿರುವಂತಹ ಯಶಸ್ವಿ ಉದ್ಯಮಿಗಳ ಸುಮಾರು 100 ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಕೊಪ್ಪಳ ಜಿಲ್ಲೆಯ ನಗರ ಮತ್ತು ಗ್ರಾಮೀಣ ಮಟ್ಟದ ಸ್ವ ಸಹಾಯ ಗುಂಪುಗಳ ಜೊತೆಗೆ ರಾಜ್ಯದ 14 ಜಿಲ್ಲೆಗಳ ಸ್ವ ಸಹಾಯ ಗುಂಪಿನ ಸದಸ್ಯರು, ತಯಾರಿಸಿದ ಕಿನ್ನಾಳ ಗೊಂಬೆಗಳು. ಬಾಳೆ ನಾರಿನ ಉತ್ಪನ್ನಗಳು, ಜೂಟ್ ಬ್ಯಾಗ್ಸ್, ಬಿದರಿನ ಉತ್ಪನ್ನಗಳು, ಕೈ ಕಸೂತಿ ಉತ್ಪನ್ನ, ಗೃಹಲಂಕಾರಿಕ ವಸ್ತುಗಳು, ಮನೆಯಲ್ಲಿ ತಯಾರಿಸಿದ ಆಹಾರ ಉತ್ಪನ್ನಗಳು ಹಾಗೂ ಇತರೆ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗುವುದು.
ಜಿಲ್ಲೆಯ ಸಾರ್ವಜನಿಕರು ಈ ಮೇಳದಲ್ಲಿ ಭಾಗವಹಿಸಿ ಸ್ವ ಸಹಾಯ ಗುಂಪುಗಳು ತಯಾರಿಸಿರುವ ಉತ್ಪನ್ನಗಳನ್ನು ಖರೀದಿಸಿ, ಉತ್ತೇಜಿಸಬೇಕು. ಸ್ವ-ಉದ್ಯೋಗದಲ್ಲಿ ತೋಡಗಿಸಿಕೊಳ್ಳುವ ಆಕಾಂಕ್ಷಿಗಳಿಗೆ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವಂತಹ ಸ್ವ ಉದ್ಯೋಗ ಕಾರ್ಯಕ್ರಮಗಳ ಕುರಿತು ಮಾಹಿತಿ, ಬ್ಯಾಂಕುಗಳಿಂದ ದೊರಕುವಂತಹ ವಿವಿಧ ಸಾಲ ಸೌಲಭ್ಯಗಳ ಮಾಹಿತಿ, ವಿವಿಧ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ನೀಡುವಂತಹ ಮಳಿಗೆಗಳನ್ನು ಸೃಜಿಸಲಾಗುವುದು.
ಈ ಪ್ರಾದೇಶಿಕ ವಸ್ತು ಪ್ರದರ್ಶನ ಹಾಗೂ ಮಾರಟ ಮೇಳದಲ್ಲಿ ಅಜ್ಜನ ಜಾತ್ರೆಗೆ ಬರುವಂತಹ ಎಲ್ಲಾ ಸಾರ್ವಜನಿಕರು ಬಂದು ಭೇಟಿ ಮಾಡಿ, ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಕೊಂಡು ಸ್ವಾವಲಂಭಿ ಬದುಕು, ಸಮೃದ್ದಿ ಬದುಕು, ಸಂತೋಷ ಬದುಕು ಕಟ್ಟಿಕೊಳ್ಳಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!