ಕೊಪ್ಪಳ ವಿಶ್ವವಿದ್ಯಾಲಯ-ನಿಫ್ಟೆಮ್ ಸಂಸ್ಥೆ, ತಂಜಾವೂರು ಜೊತೆಗೆ ಒಪ್ಪಂದ

Get real time updates directly on you device, subscribe now.

—-
ಕೊಪ್ಪಳ ಜನವರಿ 11 (ಕರ್ನಾಟಕ ವಾರ್ತೆ): ತಮಿಳುನಾಡಿನ ತಂಜಾವೂರಿನಲ್ಲಿರುವ ಭಾರತ ಸರ್ಕಾರದ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯೊಂದಿಗೆ ಕೊಪ್ಪಳ ವಿಶ್ವವಿದ್ಯಾಲಯ ಶೈಕ್ಷಣಿಕ, ಸಂಶೋಧನೆ, ಕೌಶಲ್ಯ, ಔದ್ಯೋಗಿಕ ಕ್ಷೇತ್ರಗಳಲ್ಲಿ ಸಹಕಾರ, ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳಲು ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ.ರವಿ ಅವರು ಹಾಗೂ ನಿಫ್ಟೆಮ್ ( NIFTEM – National Institute of Food Technology, Entrepreneurship and Management) ಸಂಸ್ಥೆ, ತಂಜಾವೂರಿನ ನಿರ್ದೇಶಕರಾದ ಡಾ. ವಿ.ಪಳನಿಮುತ್ತು ಅವರು ಇತ್ತೀಚೆಗೆ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಡಂಬಡಿಕೆಯ ಫಲವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೊಪ್ಪಳ ವಿಶ್ವವಿದ್ಯಾಲಯ ಆಹಾರ ತಂತ್ರಜ್ಞಾನ, ಆಹಾರ ನಿರ್ವಹಣೆ ಮತ್ತು ಆಹಾರಕ್ಕೆ ಸಂಬಂಧಿಸಿದ ಉದ್ಯಮಶೀಲತೆ ಕುರಿತ ಪದವಿ ಹಾಗೂ ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಲಿದೆ.
ತಂಜಾವೂರಿನ ಈ ನಿಫ್ಟೆಮ್ ಜೊತೆಗಿನ ನೂತನ ಒಪ್ಪಂದದಿಂದಾಗಿ ಈ ಹಿಂದುಳಿದ ಕೊಪ್ಪಳ ಭಾಗದ ವಿದ್ಯಾರ್ಥಿಗಳು ಆಹಾರ ತಂತ್ರಜ್ಞಾನ, ಕೈಗಾರಿಕೆ, ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಉನ್ನತ ಜ್ಞಾನ ಸಂಪಾದಿಸಲು ಅನುಕೂಲವಾಗುತ್ತದೆ. ಸಂಶೋಧನೆಗೆ ಹೊಸ ದಿಕ್ಕು, ಹೊಸ ಆವಿಷ್ಕಾರ ಹಾಗೂ ಉದ್ಯೋಗ ಸೃಷ್ಟಿಗೊಳ್ಳಲು ವರದಾನವಾಗಲಿದೆ.
ಮುಂಬರುವ ದಿನಗಳಲ್ಲಿ ಕೊಪ್ಪಳ ವಿಶ್ವವಿದ್ಯಾಲಯವು ಇನ್ನೂ ಅನೇಕ  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ಭಾಗದ ಪ್ರಗತಿಗೆ ಅವಿರತವಾಗಿ ಶ್ರಮಿಸುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!