ಪದವಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮಗಳ ಪಾಲನಯ ಮತ್ತು ಬಗ್ಗೆ ಬಿತ್ತಿ ಪತ್ರಗಳ ಬಿಡುಗಡೆ
Koppal : ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಘಟಕ, ಕೊಪ್ಪಳ ಜಿಲ್ಲಾ ಪೊಲೀಸ ಆಡಳಿತ ಹಾಗೂ ಜಿಲ್ಲಾ ಸಾರಿಗೆ ಇಲಾಖೆ, ಕೊಪ್ಪಳ ಇವರಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ರಸ್ತೆ ಸುರಕ್ಷತಾ ಮಾಸಿಕ ಜನವರಿ ೨೦೨೪’ ಕುರಿತು ಬಿತ್ತಿ ಪತ್ರಗಳ ಬಿಡುಗಡೆ ಸಮಾರಂಭ ಹಾಗೂ ಕಲಿಕಾ ಲೈಸನ್ಸಗಾಗಿ ಅರ್ಜಿ ಸಲ್ಲಿಸುವ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಶ್ರೀಮತಿ ಯಶೋಧ ವಂಟಗೋಡಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಯಾರಿ ಕುರಿತಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಸರಿಯಾದ ಬಳಕೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಶ್ರೀ ಲಕ್ಷ್ಮಿಕಾಂತ ಬಿ ನಾಲ್ವರ್ ಅವರು ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ನಿಯಮಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು ಮತ್ತು ಕಲಿಕಾ ಲೈಸನ್ಸಗಾಗಿ ಅರ್ಜಿ ಸಲ್ಲಿಸು ವಿಧಾನವನ್ನು ಕುರಿತು ಪ್ರಾತ್ಯಕ್ಷಿಕವಾಗಿ ಮಾಹಿತಿ ನೀಡಲಾಯಿತು. ಶ್ರೀ ಬಿ ಪಿ ಕೃಷ್ಣೆಗೌಡ ಮತ್ತು ಶ್ರಿ ಜಿ ಎನ್ ಸುರೇಶ ಹಿರಿಯ ಮೊಟಾರ್ ವಾಹನಗಳ ನಿರೀಕ್ಷಕರು ಮತ್ತು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಚನ್ನಬಸವ ಎ ಹಾಗೂ ಮಹಾವಿದ್ಯಾಲಯದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಘಟಕದ ಸಂಯೋಜಕರಾದ ಶ್ರೀ ಪ್ರವೀಣ ಹಾದಿಮನಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕು. ಕಾವೇರಿ ಕಿಲಾರಿ ನಿರೂಪಿಸಿದರು, ಕು. ಕವಿತಾ ಪ್ರಾರ್ಥಿಸಿದರು, ಡಾ. ಪ್ರಶಾಂತ ಕೊಂಕಲ್ ಸ್ವಾಗತಿಸಿದರು ಹಾಗೂ ಶ್ರೀ ಪ್ರವೀಣ ಹಾದಿಮನಿ ವಂದಿಸಿದರು.
Comments are closed.