ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು

Get real time updates directly on you device, subscribe now.

ಸಂಪರ್ಕಿಸುವ ಮೊಬೈಲ್ ಸಂಖ್ಯೆ
೧. ಡಾ. ಪ್ರವೀಣ ಕುಮಾರ – ೯೯೬೪೮೯೯೭೮೪
೨. ಡಾ ಗುರುರಾಜ್ – ೯೪೮೦೧೯೩೩೭೩
೩. ಡಾ ಎಂ ಸೂರ್ಯನಾರಾಯಣ – ೯೮೪೫೬೩೧೪೪೨
೪. ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ದೂರವಾಣಿ ಸಂಖ್ಯೆ :೦೮೫೩೯ -೨೨೧೯೮೯
ವೈದ್ಯಕೀಯ ಸೇವೆಯನ್ನು ಕಲ್ಪಿಸುತ್ತಿದೆ.ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಶ್ರೀ ಮಠವು ಉಚಿತ ವೈದ್ಯಕೀಯ ಸೇವೆಗೆ ಹೆಚ್ಚು ಒತ್ತು ಕೊಟ್ಟು ಬಂದಿರುವ ಭಕ್ತಾದಿಗಳಲ್ಲಿ ಕಂಡು ಬಂದ ರೋಗಕ್ಕೆ ಅನುಗುಣವಾಗಿ ಪರಿಣಿತ ವೈದ್ಯರಿಂದ ಚಿಕಿತ್ಸೆ ಹಾಗೂ ಸಲಹೆಯನ್ನು ಕೊಡುವ ಕಾರ್ಯವನ್ನು ಮಾಡುತ್ತಿದೆ.ಕಳೆದ ವರ್ಷ ೨೦೨೩ರ ಜಾತ್ರೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ರೋಗಿಗಳ ತಪಾಸಣೆ ಮಾಡಿ ಉಚಿತ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡಲಾಗಿದೆ.
ಈ ವರ್ಷದ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸ್ಥಳೀಯ ವೈದ್ಯಕೀಯ ಸಿಬ್ಬಂದಿಗಳ ಸಹಯೋಗದೊಂದಿಗೆ ಬರುವಂತಹ ಭಕ್ತಾದಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು.ಇದರ ಜೊತೆಗೆ ಔಷಧಿಯ ವ್ಯವಸ್ಥೆ, ಪ್ರಥಮ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಲಾಗಿದೆ.ವಿಶೇಷವಾಗಿ ಜಾತ್ರೆಯ ಆವರಣ, ಪ್ರಸಾದ ನಿಲಯ ಹಾಗೂ ಪೋಲಿಸ್ ಚೌಕಿ ಹತ್ತಿರ ಸದರಿ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು ೨೪ ಘಂಟೆ ತುರ್ತು ವೈದ್ಯಕೀಯ ಚಿಕಿತ್ಸೆ ಲಭ್ಯವಿರುತ್ತದೆ.ಸದರಿ ವ್ಯವಸ್ಥೆಯು ೨೫/೦೧/೨೦೨೪ರಿಂದ ೦೯/೦೨/೨೦೨೪ರವರೆಗೆ ಬೆಳಿಗ್ಗೆ ೮.೦೦ ಗಂಟೆಯಿಂದ ರಾತ್ರಿ ೧೧.೦೦ ಗಂಟೆಯವರೆಗೆ ವೈಧ್ಯಕೀಯ ಸೇವಾ ಕಾರ್ಯ ಲಭ್ಯವಾಗಿರುತ್ತದೆ. ರಾತ್ರಿ ೧೧ಗಂಟೆಯ ನಂತರ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿರುತ್ತದೆ ಹಾಗೂ ಕೆ.ಎಸ್ ಹಾಸ್ಪಿಟಲ್ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಸಹ  ಸೇವಾಕಾರ್ಯವಿರುತ್ತದೆ. ಹಾಗೆಯೇ ಅಂಬುಲೆನ್ಸ ಸೇವೆ ಸಹ ೨೪ ಗಂಟೆ ಲಭ್ಯವಿರುತ್ತದೆ.ದಾಸೋಹದಲ್ಲಿ ನಿರಂತರ ವೈಧ್ಯಕೀಯ ಸೌಲಭ್ಯಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳ ವಿವರವನ್ನು ಲಗತ್ತಿಸಲಾಗಿದೆ
ವೈದ್ಯಕೀಯ ಸೌಲಭ್ಯ ಸ್ಥಳಗಳು
ಜಾತ್ರೆಯ ಆವರಣ
ಮಹಾದಾಸೋಹ
ಪೋಲಿಸ್ ಚೌಕಿ ಪಕ್ಕದಲ್ಲಿ
ನಿಯೋಜಿತ ವಸತಿ ಸ್ಥಳಗಳು
ಲಭ್ಯವಿರುವ ಸೌಲಭ್ಯಗಳು
ತುರ್ತು ವೈದ್ಯಕೀಯಚಿಕಿತ್ಸೆ
ಪ್ರಥಮಚಿಕಿತ್ಸೆ
ಉಚಿತಚಿಕಿತ್ಸಾ ಸಲಹೆ ಮತ್ತುಔಷಧಿ ವಿತರಣೆ
ದಿನಾಂಕ ೨೫/೦೧/೨೦೨೪ರಿಂದ ೦೯/೦೨/೨೦೨೪ರವರೆಗೆ
ಸಮಯ ಬೆಳಿಗ್ಗೆ ೮.೦೦ ರಿಂದ ರಾತ್ರಿ ೧೧.೦೦ರವರೆಗೆ
೨೪ ಗಂಟೆ ತುರ್ತು ವೈದ್ಯಕೀಯ ಚಿಕಿತ್ಸೆ
ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯ ಚಿಕಿತ್ಸಕರು
ಆಯುರ್ವೇದ ಮಹಾವಿದ್ಯಾಲಯದ ವೈದ್ಯರು ೫೩
ಸ್ನಾತಕೋತ್ತರ ವಿದ್ಯಾರ್ಥಿಗಳು ೬೫
ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಪರಿಣಿತ ವೈದ್ಯರು (ಕಿಮ್ಸ ಕೊಪ್ಪಳ) – ೧೫
ಅಂಬುಲೆನ್ಸ ವ್ಯವಸ್ಥೆ ಸಹ ಇರುತ್ತದೆ ೦೩
ಅಂಬುಲೆನ್ಸ ವ್ಯವಸ್ಥೆಗಾಗಿ ಡಾ.ಪ್ರವೀಣಕುಮಾರ- ೯೯೬೪೮೯೯೭೮೪,
ಡಾ.ರಾಜು ೮೪೫೦೮೨೦೨೭೧, ಡಾ.ಸುನೀಲಕುಮಾರ-೮೩೦೯೫೪೫೦೫೬
ಕೆ ಎಸ್ ಹಾಸ್ಪಿಟಲ್ ಸಿಬ್ಬಂದಿ ನುರಿತ ತಜ್ಞ ವೈದ್ಯರು ಎಲ್ಲ ವಿಧದ ತುರ್ತು ಸೇವೆ ೨೪ x ೭ ಲಭ್ಯವಿರುತ್ತದೆ
ಡಾ|| ಬಸವರಾಜ ಕ್ಯಾವಟರ್ – ೯೦೦೮೧೬೬೩೩.

Gavimath Jatra Mahotsav 2024

Get real time updates directly on you device, subscribe now.

Comments are closed.

error: Content is protected !!