ಅಜರ್ಬೈಜಾನ್‌ನಲ್ಲಿ ನಡೆದ ಬಾಕು-2023 ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ : ಪ್ರಕಾಶ ಕಂದಕೂರಗೆ ಐಎಎಪಿ (IAAP) ಬೆಳ್ಳಿ ಪದಕ
ಸ್ಪರ್ಧೆಯ ಕಪ್ಪು-ಬಿಳುಪು ವಿಭಾಗದಲ್ಲಿ ಅವರ ʻಫ್ರೆಂಡ್‌ಶಿಪ್ʼ ಶೀರ್ಷಿಕೆಯ ಚಿತ್ರ ಈ ಪ್ರಶಸ್ತಿಗೆ ಭಾಜನವಾಗಿದ್ದು, ಅವರ ʻದಿ ಫಿಯರ್ʼ ಶೀರ್ಷಿಕೆಯ ಮತ್ತೊಂದು ಚಿತ್ರ ಸಹ ಇದೇ ಸ್ಪರ್ಧೆಯಲ್ಲಿ ಗಿಲಾವರ್ ಡಿಪ್ಲೋಮಾ (Gilavar Diploma) ಪ್ರಶಸ್ತಿಯನ್ನೂ ಗಳಿಸಿದೆ. ಜಗತ್ತಿನ 58 ದೇಶಗಳ, 304 ಜನ ಛಾಯಾಗ್ರಾಹಕರ, 4,435 ಛಾಯಾಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಫೊಲೆಂಡ್‌ನ ಕ್ರಿಸ್ಟೋಫ್ ಮಸ್ಕಲ್ಕ್ಸಿ, ಟರ್ಕಿಯ ರೆಹಾ ಬಿಲಿರ್, ಸರ್ಬಿಯಾದ ಎಲ್ಜಿಲ್ಜನಾ ವ್ರಿಕ್ ಮತ್ತು ಅಜರ್ಬೈಜಾನ್‌ನ ಅಲೆಕ್ಸಾಂಡರ್ ಫಿರ್ಸ್ಟೋವ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಕಲಾತ್ಮಕ ಛಾಯಾಗ್ರಹಣ ಕ್ಷೇತ್ರದ ಅಂತರಾಷ್ಟ್ರೀಯ ಸಂಸ್ಥೆಗಳಾದ ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಫೊಟೋಗ್ರಫಿಕ್ ಆರ್ಟ್ (FIAP), ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಆರ್ಟ್ ಫೊಟೋಗ್ರಫಿ(IAAP), ಫೊಟೋಗ್ರಫಿಕ್ ಸೊಸೈಟಿ ಆಫ್ ಅಮೆರಿಕಾ(PSA), ಗಿಲಾವರ್ ಫೊಟೋ ಕ್ಲಬ್, ಸಿಲ್ಲೇ ಸನತ್ ಸರಯೀ (SSS) ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಅಜರ್ಬೈಜಾನ್‌ನ ರಾಜಧಾನಿ ಬಾಕುವಿನಲ್ಲಿ ಫೆಬ್ರವರಿ 25 ರಂದು ಪ್ರಶಸ್ತಿ ವಿಜೇತ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಗಿಲಾವರ್ ಫೊಟೋ ಕ್ಲಬ್‌ನ ಚೇರ್‌ಮನ್ ರಷದ್ ಮೆಹ್ದಿಯೆವ್ ತಿಳಿಸಿದ್ದಾರೆ.
Comments are closed.