ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಮಹಾದಾಸೋಹದ ಸೇವೆಯ ಸಿದ್ಧತೆ
ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆಆರಂಭವಾಗಿದ್ದು, ಜಾತ್ರಾ ಮಹಾದಾಸೋಹದ ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಭಕ್ತರ ಸೇವೆಯಲ್ಲಿ ಭಗವಂತನನ್ನುಕಾಣುವ, ಸದ್ದುಗದ್ದಲವಿಲ್ಲದೆಅನ್ನ, ಅಕ್ಷರ, ಆಧ್ಯಾತ್ಮ ಹಾಗೂ ಆರೋಗ್ಯದಾಸೋಹಗೈಯುತ್ತ ಭಕ್ತರಜ್ಞಾನ ಮತ್ತು ಹಸಿವಿನ ಅಂಗಳಕ್ಕೆ ಕೃಪೆಯಾಗುವಕೈಂಕರ್ಯ ಶ್ರೀ ಗವಿಮಠವು ಮಾಡುತ್ತಿದೆ. ೩೫೦೦ ಸಾವಿರಕ್ಕಿಂತ ಹೆಚ್ಚು ಮಕ್ಕಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಆರಂಭಿಸಿ ದಾಸೋಹ ಪರಂಪರೆಯನ್ನು ನಿರಂತರವಾಗಿಸಿಕೊಂಡು ಬಂದಿದೆ.ಕಳೆದ ವರ್ಷದಿಂದ ೬ ಎಕರೆ ಪ್ರದೇಶ ವಿಸ್ತಾರಗೊಂಡಿದೆ.ಸುಮಾರು ೫ ರಿಂದ ೬ ಸಾವಿರ ಭಕ್ತಾದಿಗಳು ಏಕಕಾಲದಲ್ಲಿ ಪ್ರಸಾದ ಸೇವಿಸಲು ಸಜ್ಜಾಗಿದೆ.ಜನದಟ್ಟಣೆಯಾಗದಂತೆಇರಲು ಪ್ರತ್ಯೇಕ ಮಹಾದ್ವಾರ, ವಿಶಾಲವಾದ ಮಾರ್ಗದಾರಿ ವ್ಯವಸ್ಥೆ ಮಾಡಿದ್ದು ಈ ದಾಸೋಹದ ವಿಶೇಷತೆಯಾಗಿದೆ. ಈ ವರ್ಷದಜಾತ್ರಾ ಮಹೋತ್ಸವದಲ್ಲಿ ದಿನಾಂಕ೨೧.೦೧.೨೦೨೪ ಬುಧವಾರದಿಂದ ದಿನಾಂಕ
೦೯-೦೨-೨೦೨೪ರ ಶುಕ್ರವಾರ ರಾತ್ರಿ ಅಮಾವಾಸ್ಯೆಯವರೆಗೆ ಲಕ್ಷಾಂತರ ಭಕ್ತಾದಿಗಳಿಗೆ ಪ್ರಸಾದಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ವಿಶೇಷ ವ್ಯವಸ್ಥೆ:ಪುರುಷರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ವಿಶೇಷಚೇತನರಿಗೆ, ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ದಾಸೋಹ ಸೇವೆ ಸ್ಥಳದ ವಿಶೇಷತೆಗಳು:
ಶ್ರೀ ಗವಿಮಠದಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್‌ಗಾರ್ಡನ್‌ನಲ್ಲಿಇರುವ ಸುಮಾರುಆರುಎಕರೆಯಷ್ಟು ವಿಶಾಲವಾದಆವರಣದಲ್ಲಿ (೨೬೧೩೬೦ ಚದುರ ಅಡಿ) ಭವ್ಯವಾದಅಡುಗೆಮನೆ, ಆಹಾರ ಸಂಗ್ರಹಣೆಕೊಠಡಿ, ತರಕಾರಿ ಸಂಗ್ರಹಣೆಕೊಠಡಿ, ತರಕಾರಿ ಹೆಚ್ಚುವ ಸ್ಥಳ, ಹಾಗೂ ಪ್ರಸಾದ ಸ್ವೀಕರಿಸಲು ಈ ಬಾರಿಇನ್ನೂ ಹೆಚ್ಚು ವಿಶಾಲವಾದ ಸ್ಥಳಾವಕಾಶವನ್ನು ಕಲ್ಪಿಸಿದೆ. ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲುಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿದೆ.
ಕೌಂಟರ್ ವ್ಯವಸ್ಥೆ : ಈ ವರ್ಷ ಸುಮಾರು ೭೬ ಕೌಂಟರಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ೪೦ ಕೌಂಟರಗಳು ಅನ್ನ ಸಾರು, ೩೬ ಕೌಂಟರ ಗಳು ಸಿಹಿ ಪದಾರ್ಥ ವಿತರಣೆಗೆ ನಿರ್ಮಿಸಲಾಗಿದೆ.
ರೊಟ್ಟಿಕೋಣೆ :ಅಜ್ಜನಜಾತ್ರೆರೊಟ್ಟಿಜಾತ್ರೆಯೆಂದೆ ಪ್ರಸಿದ್ಧ. ಬೃಹಾದಾಕಾರದ ೪೫*೫೦ ವಿಸ್ತೀರ್ಣದ ಎರಡು ಕೋಣೆಗಳು ನಿರ್ಮಾಣಗೊಂಡಿವೆ. ಈಗಾಗಲೇ ಮಹಾದಾಸೋಹದಲ್ಲಿರೊಟ್ಟಿ ಸಂಗ್ರಹಣಾಕಾರ್ಯ ಭರದಿಂದ ಸಾಗಿದೆ.
ನೀರಿನ ವ್ಯವಸ್ಥೆ : ೭೦ ನೀರಿನ ಕೊಳಾಯಿ(ನಲ್ಲಿ)ಇರುವಎರಡು ನೀರಿನ ಕಟ್ಟೆಗಳು, ೫೦ ನೀರಿನ ಕೊಳಾಯಿ(ನಲ್ಲಿ)ಇರುವಇಂದುಕಟ್ಟೆಯನ್ನು ಸಿದ್ಧಗೊಳಿಸಲಾಗಿದೆ. ೨೫೦-೩೦೦ ಭಕ್ತರು ಏಕಕಾಲಕ್ಕೆ ನೀರನ್ನು ಸೇವಿಸುವ ಬೃಹತ್ ವ್ಯವಸ್ಥೆಕಲ್ಪಿಸಲಾಗಿದೆ.
ಮಾದಲಿ ಕಟ್ಟೆ : ಸಿಹಿ ಪದಾರ್ಥವಾದ ಮಾದಲಿ ಈ ನಾಡಿನ ವಿಶೇಷ ತಿನಿಸಾಗಿದೆ. ಜಾತ್ರೆಯ ವಿಶೇಷವೂ ಹೌದುಅದಕ್ಕೆಂದೇ ೧೬*೬ ಅಡಿ ವಿಸ್ತೀರ್ಣದ ೩, ೨೦*೬ ಅಡಿ ವಿಸ್ತೀರ್ಣದ ೩ ಕಟ್ಟೆಗಳು ಒಟ್ಟು ೬ ಮಾದಲಿ ಕಟ್ಟೆಗಳು ನಿರ್ಮಾಣಗೊಂಡಿವೆ.
ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೆಕವಾಗಿ (೪೦+೩೬) ಕೌಂಟರಗಳನ್ನು ಪ್ರಸಾದ ನೀಡಿಸಿಕೊಳ್ಳಲಿಕ್ಕೆ ವ್ಯವಸ್ಥೆಕಲ್ಪಿಸಲಾಗಿದೆ.ಅಲ್ಲದೇ ೦೪ ಪ್ರವೇಶ ದ್ವಾರಗಳು, ೬೫ ಅಡಿಯಅನ್ನ ಸಂಗ್ರಹಣಾಕಟ್ಟೆ, ಇವುಗಳ ಜೊತೆಗೆ ಪ್ರತಿದಿನ ಪ್ರಸಾದದಉಸ್ತುವಾರಿ ಹಾಗೂ ಪರಿಶೀಲನೆಗಾಗಿ ಆಹಾರಇಲಾಖೆಯ ಅಧಿಕಾರಿಗಳು, ಪೋಲಿಸರುಇರುತ್ತಾರೆ.ಪ್ರಸಾದ ನಿಲಯದ ಸುತ್ತಲೂ ಪೋಲಿಸ್ ಕಣ್ಗಾವಲುಇದ್ದು, ತಂತಿ ಬೇಲಿಯನ್ನೂ ಸಹ ಅಳವಡಿಸಲಾಗಿದೆ.ಮಹಾದಾಸೋಹದಲ್ಲಿ ಭಕ್ತರ ಸುರಕ್ಷತೆಗಾಗಿ ಹೊರ, ಓಳಾಂಗಣ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.ಜಾತ್ರಾಮಹೋತ್ಸವ ಮಹಾದಾಸೋಹದಲ್ಲಿಒಂದು ದಿನಕ್ಕೆ ಸುಮಾರು ೩೦೦ ರಿಂದ ೪೦೦ರವರೆಗೆ ಭಕ್ತರು ಪ್ರಸಾದತಯಾರಿಸುವ ಸೇವೆಯಲ್ಲಿತೊಡಗಿಕೊಂಡರೆ, ಪ್ರಸಾದ ವಿತರಣೆಯಲ್ಲಿ ಸುಮಾರು ೫೦೦ ರಿಂದ ೬೦೦ ಭಕ್ತರು ಪಾಲ್ಗೊಳ್ಳುವರು.ಜಾತ್ರಾಮಹೋತ್ಸವ ಪ್ರಾರಂಭದಿಂದ ಮುಕ್ತಾಯದ ವರೆಗೆ ಪ್ರಸಾದ ನಿಲಯದಲ್ಲಿ ಸುಮಾರು ೨೫ ಸಾವಿರ ಭಕ್ತರು ವಿವಿಧ ಸೇವೆಯಲ್ಲಿ ಪಾಲ್ಗೊಳ್ಳುವರು.ಜಾತ್ರೆಯ ಪ್ರಾರಂಭದಿಂದ ಮುಕ್ತಾಯದವರೆಗೆ ಸುಮಾರು ಲಕ್ಷೆಪಲಕ್ಷ ಭಕ್ತರು ಪ್ರಸಾದ ಸ್ವೀಕರಿಸುವ ನೀರಿಕ್ಷೆಇದೆ.
ದಾಸೋಹ ಪ್ರಸಾದದ ಸವಿಗಳು: s
ಈ ಜಾತ್ರೆಯ ಮಹಾದಾಸೋಹ ಹಸಿದು ಬಂದ ಭಕ್ರರಿಗೆ ಸಂತೃಪ್ತಿಯಾಗುವಂತಹರೊಟ್ಟಿ, ಪಲ್ಯ, ಸಿಹಿ ಪದಾರ್ಥ, ಅನ್ನ, ಸಾಂಬರ್, ಕಡ್ಲಿಚಟ್ನಿ, ಶೇಂಗಾ ಚಟ್ನಿ, ಗುರಳ್ಳ ಚಟ್ನಿ, ಅಗಸಿ ಪುಡಿಚಟ್ನಿಉಪ್ಪಿನಕಾಯಿ ಮುಂತಾದ ಪ್ರಸಾದ ವಿತರಿಸಲಾಗುವುದು.
ದಾಸೋಹದಲ್ಲಿ ಭಕ್ತರ ಶಿಸ್ತು:
ಶಾಂತವಾಗಿ ಅಷ್ಟೇ ಭಕ್ತಿಯಿಂದ ಸದ್ದುಗದ್ದಲವಿಲ್ಲದೆಎಲ್ಲರೂಎಲ್ಲರಿಗಾಗಿಎಂದು ಭಾವಿಸುವ ಅಪರೂಪದದಾಸೋಹ.ರಥೋತ್ಸವ ದಿನದಿಂದಅಮಾವಾಸ್ಯೆಯವರೆಗೆ ನಡೆಯುವ ಈ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಸ್ವಯಂ ಶಿಸ್ತನ್ನು ಕಾಪಾಡಿಕೊಳ್ಳುವದು ಈ ಜಾತ್ರೆಯ ವೈಶಿಷ್ಟ್ಯತೆ ಮತ್ತು ಪವಾಡವೇ ಸರಿ.
ರೊಟ್ಟಿಜಾತ್ರೆ: ಎಷ್ಟೋ ಭಕ್ತರುತಮ್ಮ ಮನೆಗಳಿಂದ ಲಕ್ಷಾನುಗಟ್ಟಲೇರೊಟ್ಟಿಯನ್ನು ಸಮರ್ಪಿಸುವಅಪರೂಪದದಾಸೋಹಎಂತಹ ಭಕ್ತರನ್ನು ಮಂತ್ರಮುಗ್ಧಗೊಳಿಸದೇಇರದು. ತರಕಾರಿ, ಸಿಹಿ ಪದಾರ್ಥ ಮುತಾಂದ ಸಾಮಾಗ್ರಿಗಳ ದೇಣಿಗೆ ನೀಡುವರು.
ಮಹಾದಾಸೋಹದಲ್ಲಿ ತೆಗೆದುಕೊಳ್ಳುವ ಮುನ್ನಚ್ಚರಿಕೆ ಕ್ರಮಗಳು:
ಪ್ರತಿದಿನ ದಾಸೋಹದ ಪ್ರಸಾದವನ್ನುಆಹಾರಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗುತ್ತದೆ.
ದಾಸೋಹ ಸಿದ್ದಪಡಿಸುವ ಬಾಣಸಿಗರಿಗೆ ಸೂಕ್ತ ವಸತಿ ಹಾಗೂ ಸ್ನಾನ ಗೃಹ, ಶೌಚಾಲಯದ ಸೌಲಭ್ಯಕಲ್ಪಿಸಲಾಗಿದೆ.
ಪ್ರಸಾದತಯಾರು ಮಾಡುವದಾಸೋಹದಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ ಇರುತ್ತದೆ.
ಮಹಾದಾಸೋಹದಲ್ಲಿಎಲ್ಲಾಕಡೆಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ.
ಮಹಾದಾಸೋಹದಲ್ಲಿಉಚಿತಆರೋಗ್ಯತಪಾಸಣೆ ಲಭ್ಯವಿರುತ್ತದೆ.
ಸ್ವಚ್ಚತೆಗೆ ವಿಶೇಷ ಆಧ್ಯತೆ ನೀಡಲಾಗುವದು.
ದಾಸ್ತಾನು ಕೋಣೆಗಳನ್ನು ನಿರ್ಮಿಸಲಾಗಿರುತ್ತದೆ.
ಕಾಯಿಪಲ್ಲೆ/ತರಕಾರಿಸಂಗ್ರಹಣಾಕೊಠಡಿ
ರೊಟ್ಟಿ ಸಂಗ್ರಹಣಾಕೊಠಡಿ
ಕಿರಾಣಿ ಸಾಮಾನುಗಳ ಸಂಗ್ರಹಣಾಕೊಠಡಿ
ಭಾಂಡೆ ಸಾಮಾನುಗಳ ಸಂಗ್ರಹಣಾಕೊಠಡಿ
ಸ್ವಚ್ಚತಾ ಸಾಮಾಗ್ರಿಗಳ ಸಂಗ್ರಹಣಾಕೊಠಡಿ.
ಈ ಪ್ರಸಾದವನ್ನು ಸಿದ್ಧಗೊಳಿಸಲು ಸುಮಾರು ೧೦೦ ಗಾಡಿಕಟ್ಟಿಗೆ (೫೦೦ ಟನ್) ಬಳಸಲಾಗುತ್ತದೆ.ಇದೆಲ್ಲಾ ಭಕ್ತರ ಭಕ್ತಿ, ಶ್ರದ್ಧೆ ಹಾಗೂ ಸ್ವಯಂ ಪ್ರೇರಣೆಗಳಿಂದ ನಡೆಯುತ್ತಿರುವದು ಗವಿಮಠದಜಾತ್ರೆಯ ವೈಶಿಷ್ಟ್ಯತೆ.ಹೆಚ್ಚಿನ ಮಾಹಿತಿಗಾಗಿ೯೩೪೧೩೬೦೫೪೮,೯೪೪೮೧೨೦೬೧೦, ೯೮೪೫೪೨೯೯೪೪ ಇವರನ್ನುಸಂಪರ್ಕಿಸಲು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.
Comments are closed.