Sign in
Sign in
Recover your password.
A password will be e-mailed to you.
ಗಂಗಾವತಿ: ಮಹಿಳೆಯು ಶತಮಾನಗಳಿಂದಲೂ ಶೋ?ಣೆಯನ್ನು ಅನುಭವಿಸುತ್ತಾ ಬಂದಿದ್ದಾಳೆ. ಮಹಿಳೆ ಅಬಲೆ ಎಂದು ಹೇಳುತ್ತಲೇ ಆಕೆಯನ್ನು ಪುರು? ಪ್ರಧಾನ ವ್ಯವಸ್ಥೆ ಅಬಲೆ ಮಾಡುತ್ತಿದೆ. ಜನಪದ ಸಾಹಿತ್ಯದ ಪ್ರಕಾರಗಳಾದ ಗಾದೆಗಳಲ್ಲಿಯೂ ಮಹಿಳೆಗೆ ಗೊತ್ತಾಗದಂತೆ ಆಕೆಯನ್ನು ಕೀಳಾಗಿ ಕಾಣಲಾಗಿದೆ ಎಂದು ನಗರದ ಎಸ್.ಕೆ.ಎನ್.ಜಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಜಾಜಿ ದೇವೆಂದ್ರಪ್ಪ ಪ್ರಾಚಾರ್ಯರು ತಿಳಿಸಿದರು.
ಅವರು ಡಿಸೆಂಬರ್-೨ ರಂದು ಬಾಲಕರ ಸರಕಾರಿ ಪದವಿಪೂರ್ವ ಕಾಲೇಜ್ ಗಂಗಾವತಿಯಿಂದ ಎನ್.ಎಸ್.ಎಸ್ ವಾರ್ಷಿಕ ಶಿಬಿರ ಕಾರ್ಯಕ್ರಮವನ್ನು ತಾಲೂಕಿನ ಬಸವನದುರ್ಗ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದು, ಐದನೇ ದಿನವಾದ ಇಂದು ಸಾಯಂಕಾಲ ವಿಶೇ? ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಿದ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು. ದಿನನಿತ್ಯದ ನಮ್ಮ ಬೈಗುಳಗಳಲ್ಲಿಯೂ ಹೆಣ್ಣನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ. ಹೆಣ್ಣು ಕುಟುಂಬ ಹಾಗೂ ಸಾರ್ವಜನಿಕ ವಲಯ ಎರಡರಲ್ಲಿಯೂ ದುಡಿಮೆಗೆ ತಕ್ಕ ಪ್ರತಿಫಲವನ್ನು ಪಡೆದುಕೊಳ್ಳದೆ ಲಿಂಗತಾರತಮ್ಯಕ್ಕೆ ಒಳಗಾಗಿದ್ದಾಳೆ. ಮಹಿಳೆ ಸಬಲೆಯಾಗಬೇಕೆಂದರೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಗಟ್ಟಿಯಾದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಈಗಿನ ಶಕ್ತಿಯೋಜನೆ ಕೂಡ ಮಹಿಳಾ ಸಬಲೀಕರಣದ ಒಂದು ಭಾಗವಾಗಿದೆ. ಭಾಷಿಕ ರಾಜಕಾರಣದಲ್ಲಿಯೂ ಹೆಣ್ಣನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡುತ್ತಿರುವುದು ದುರಂತ. ರಾಜಕೀಯ ಮೀಸಲಾತಿ ಪಡೆದುಕೊಂಡು ಮಹಿಳೆ ಮುಂದೆ ಸಾಗಬೇಕಿದೆ. ಎಲ್ಲಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಹೆಣ್ಣನ್ನು ಗೌರವಿಸುವ ಆಲೋಚನೆಯನ್ನು ಮಾಡಬೇಕಿದೆ. ಮುಖ್ಯವಾಗಿ ವಿದ್ಯಾರ್ಥಿನಿಯರು ಧೈರ್ಯದಿಂದ ಮುಂದೆ ಸಾಗಿ ಗಟ್ಟಿ ಬದುಕನ್ನು ಕಟ್ಟಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ನೆನಪಿಸುತ್ತ ದಿನ ನಿತ್ಯದ ಜೀವನದಲ್ಲಿ ಪಾತ್ರೆ, ಬಟ್ಟೆ ಕೆಲಸಗಳನ್ನು ಕೇವಲ ಮಹಿಳೆ ಮಾಡೋದಲ್ಲ, ಗಂಡುಮಕ್ಕಳು ಮಾಡಬೇಕಿದೆ. ಎಂಬ ಮಹತ್ವದ ಅನೇಕ ಸಂಗತಿಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಲ್.ಐ.ಸಿ ಆಫ್ ಇಂಡಿಯಾದ ಅಧಿಕಾರಿಯಾದ ಕೆ. ಪಣಿರಾಜ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಮಹಿಳಾ ಶಿಕ್ಷಣ ಮಹತ್ವದ ಕುರಿತು ಮಾಹಿತಿ ನೀಡಿದರು.
ಪ್ರಾಸ್ತಾವಿಕ ನುಡಿಯನ್ನು ಡಾ. ಪಾರ್ವತಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪನ್ಯಾಸಕಕರಾಗಿರುವ ಶ್ರೀಮತಿ ಲಲಿತಾ ಕಂದಗಲ್. ಸದರಿ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ನಾಗಪ್ಪ ಎಂ.ಎಲ್.ಎ. ಅಮರೇಶ, ಸೈಯದ್ ನೂರುದ್ದೀನ್ ಖಾದ್ರಿ, ಗೋವಿಂದರಾಜ, ನಾಗರಾಜ, ಶರಣಪ್ಪ, ಛತ್ರಪ್ಪ ತಂಬೂರಿ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಸೋಮಶೇಖರ್ ಗೌಡ ಉಪಸ್ಥಿತರಿದ್ದರು.
ಕುಮಾರ ಹೇಮರಾಜ ನಿರೂಪಿಸಿದ ಈ ಕಾರ್ಯಕ್ರಮವನ್ನು ಕುಮಾರಿ ಲಕ್ಷೀ ಸ್ವಾಗತಿಸಿದರೆ, ಬೀರಪ್ಪ ವಂದಿಸಿದರು.
Get real time updates directly on you device, subscribe now.
Comments are closed.