ವಿದ್ಯಾರ್ಥಿಗಳಲ್ಲಿ ಸಮಾಜಮುಖಚಿಂತನೆಗೆ ಲೋಹಿಯಾರ ವಿಚಾರ ಅಗತ್ಯ: ದಾ. ವಾಸುದೇವ ಬಡಿಗೇರ

Get real time updates directly on you device, subscribe now.

ಡಾ. ರಾಮ ಮನೊಹರ್ ಲೊಹಿಯಾ ಅವರ ಚಿಂತನೆಆರ್ಥಿಕ, ರಾಜಕೀಯ ಹಾಗೂ ಸಮಾಜಮುಖವಾದದ್ದು, ಮನುಷ್ಯ ಹೇಗೆ ಬದುಕಬೇಕು. ಸುಧಾರಣೆ, ಸ್ಥಾನಮಾನ ಗೌರವ ತಂದುಕೊಡುವಲ್ಲಿ  ಲೋಹಿಯಾ ಅವರ ಚಿಂತನೆ ಅಗತ್ಯ. ಹಾಗೂ ವಿದ್ಯಾರ್ತಿಗಳಲ್ಲಿ ಸಮಾಜಮುಖಿಚಿಂತನೆಗೆ ಲೋಹಿಯಾಅವರ ವಿಚಾರಧಾರೆಯನ್ನುತುಂಬುವುದು ಅನಿವಾಯ್ರವಾಗಿದೆಎಂದು ದಾ. ವಾಸುದೇವ ಬಡಿಗೇರಅವರು ಹೇಳಿದರು.

ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗಮತ್ತುಡಾ. ರಾಮಮನೋಹರ್ ಲೋಹಿಯಾಅಧ್ಯಯನ ಪೀಠ, ಕನ್ನಡ ವಿಶ್ರವವಿದ್ಯಾಲಯ, ಹಂಪಿ, ಇವರ ಸಹಯೋಗದಲ್ಲಿ ಆಯೋಜನೆಗೊಂಡ ವಿಶೇಷ ಉಪನ್ಯಾಸಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ಅವರು ಲೋಹಿಯಾಅವರಇಂಗ್ಲಿಷ್ ಭಾಷೆಯ ವಿರೋದಿಯಾಗಿದ್ದರು.ಪ್ರಾದೇಶಿಕ ಭಾಷೆಯಲ್ಲಿ ಚಿಂತನೆಗಳು ಇಲ್ಲವಾ?ಎಂದು ಪ್ರಶ್ನಿಸಿದರು.ನಾವೇಲ್ಲರು ವಂದೇ ಎಂಬ ಪರಿಕಲ್ಪನೆ ಸುಧಾರಿಸಬೇಕಾಗಿದೆ.ಪ್ರಾಣಿಗಳನ್ನು ಮನೆಗೆ ಸೇರಿಸಿಕೊಳ್ಳುವ ನಾವು ಮನುಸ್ಯರನ್ನು ಸೇರಿಸಿಕೊಳ್ಳುವುದಕ್ಕೆ ನಮಗೆ ಜಾತಿ ವ್ಯವಸ್ಥೆಯುದಟ್ಟವಾಗಿಕಾಡುವ ಸ್ಥಿತಿಯಲ್ಲಿ ನಾವು ಇದ್ದೇವೆ. ಎಲ್ಲರಿಗೂ ನ್ಯಾಯದೋರಕಿಸುವಲ್ಲಿ ಲೋಹಿಯಾಅವರಚಿಂತನಾಅಧ್ಯಯನಅಗತ್ಯವೆಂದು ಹೇಳಿದರು.ನಂತರಉಪನ್ಯಾಸ ನೀಡಿದಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಸ್ನಾತಕೋತ್ತರಕೇಂದ್ರ, ಮಂಡ್ಯದ ಪ್ರಾಧ್ಯಾಪಕರಾದಡಾ. ಹೇಮಲತಾ ಹೆಎಚ್ ಎಂ ಅವರು ‘ಲೋಹಿಯಾ ಮತ್ತು ಮಹಿಳೆ’ ವಿಷಯದಕುರಿತು ಮಾತನಾಡಿದಅವರು ಮಹಿಳೆಗೂ ಸಹ ಎಲ್ಲ ಅರ್ಹತೆಗಳಿವೆ. ಸ್ತ್ರೀ-ಪುರುಷರ ನಡುವಿನ ತಾರತಮ್ಯ ಸಲ್ಲದು. ಇಂದಿನ ಸಮಾಜದಲ್ಲಿ ಸ್ತ್ರೀಗೂ ಸಿಗಬೇಕಾದ ಎಲ್ಲಾ ಅವಕಾಶಗಳು ಸಿಗಬೇಕು. ಲೋಹಿಯಾ ಸಮಾಜವಾದಿ ತತ್ವದ ಮೇಲೆ ಜೀವನವನ್ನು ಕಟ್ಟಿಕೊಳ್ಳಬೇಕೆಂದು ಅವರುಹೇಳಿದರು,
ಕಾರ್ಯಕ್ರಮದಅಧ್ಯಕ್ಷತೆಯನ್ನು ಪ್ರಾಂಶುಪಾಲರಾದಡಾ.ಚನ್ನಬಸವಅವರುಅಧ್ಯಕ್ಷಿಯ ನುಡಿಗಳನ್ನು ಹೇಳಿದರು, ಕಾರ್ಯಕ್ರಮದಲ್ಲಿ ಹಂಪಿ ವಿಶ್ವವಿದ್ಯಾಲಯದಡಾ.ರಾಮ ಮನೋಹರ್‌ಅಧ್ಯಯನ ಪೀಠದ ಸಂಚಾಲಕರಾದಡಾ.ಯರ್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಾಧ್ಯಾಪಕರಾದಡಾ.ಬಸವರಾಜ ಪೂಜಾರ್, ಡಾ.ವೆಂಕಟೇಶ ನಾಯ್ಕಆರ್,  ಮಂಜುನಾಥ ಹೀರೆಮಠ,  ಪ್ರವೀಣ ಹಾದಿಮನಿ,   ಶರಣಪ್ಪಚವ್ವಾನ್, ಡಾ.ನಾಗಾರಜ ದಂಡೋತಿ ಉಪಸ್ಥಿತರಿದ್ದು ಡಾ.ಅರುಣಕುಮಾರ ಎ.ಜಿ ವಂದಿಸಿದರು. ಡಾ. ಪ್ರಶಾಂತ ಕೊಂಕಲ್ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!