ಹಣವನ್ನು ಹೂಡಿಕೆ ಮಾಡುವಾಗ ಜನರು ಬಹಳ ಜಾಗೃತಿಯಿಂದ ಇರಬೇಕು-ರವಿ ಹುಚ್ಚಣ್ಣ

Get real time updates directly on you device, subscribe now.

ಅತೀ ಬೇಗ ಮತ್ತು ಹೆಚ್ಚು ಲಾಭದ ದೃಷ್ಠಿಯಿಂದ ಜನರು ನಕಲಿ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡಬಾರದು. ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡುವಾಗ ಜನರು ಬಹಳ ಜಾಗೃತಿಯಿಂದ ಇರಬೇಕು ಎಂದು ಗದಗಿನ ನವರು ಹೇಳಿದರು.
ನಗರದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರದಂದು ಭಾರತೀಯ ಷೇರು ವಿನಿಮಯ ನಿಯಂತ್ರಣ ಮಂಡಳಿ(ಸೆಬಿ), ಕಾಲೇಜಿನ ಅಂತರಿಕ ಬರವಸೆ ಕೋಶ, ಉದ್ಯೋಗ ಕೋಶ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡ ಸಣ್ಣ ಹೂಡಿಕೆದಾರರ ಜಾಗೃತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೋಂಡು ಮಾತನಾಡಿದರು.
ಜನರು ಹಣವನ್ನು ಹೂಡಿಕೆ ಮಾಡುವಾಗ ಕಂಪನಿಗಳ ಕುರಿತು ಹಿನ್ನೆಲೆಯನ್ನು ಮತ್ತು ಅದರ ಕುರಿತು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಹಣ ಹೂಡಿಕೆದಾರರ ರಕ್ಷೆಣೆಯನ್ನು ಸೆಬಿಯು ಮಾಡುತ್ತದೆ. ಷೇರು ಮಾರುಕಟ್ಟೆಯಲ್ಲಿ ನಮ್ಮ ದೇಶದಲ್ಲಿ ಎಂಟು ಕೋಟಿ (ಶೇ ೩ ರಷ್ಟು) ಜನರು ಮಾತ್ರ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಅದರೆ ಅಮೇರಿಕದಲ್ಲಿ ಶೇ. ೭೫ ರಷ್ಟು ಜನರು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಕಂಪನಿಗಳು ದಿವಾಳಿಯಾಗುತ್ತವೆ ಎಂಬ ಭಯದಿಂದ ಜನರು ಹಣವನ್ನು ಹೂಡಿಕೆ ಮಾಡುವುದಕ್ಕೆ ಹಿಂಜೆರಿಯುತ್ತಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ಅಂತರಿಕ ಬರವಸೆ ಕೋಶದ ಸಂಚಾಲಕರು ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ತರಾದ  ವಿಠೋಬ ಅವರು ನಿಮ್ಮ ಪಾಲಕರಿಗೆ ಹಣದ ಹೂಡಿಕೆ ಕುರಿತು ತಿಳುವಳಿಕೆ ಮೂಡಿಸಬೇಕು. ನೀವು ಅನಗತ್ಯವಾಗಿ ಹಣವನ್ನು ಖರ್ಚು ಮಾಡಬಾರದು. ಸೆಬಿಯು ಹೂಡಿಕೆದಾರರ ಸಂಪೂರ್ಣವಾದ ಜವಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಹಣವನ್ನು ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭ ಪಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚರ್ಯರಾದ ಡಾ. ಗಣಪತಿ ಲಮಾಣಿಯವರು ವಿದ್ಯಾರ್ಥಿದೆಸೆಯಿಂದಲೇ ಹಣವನ್ನು ಸಂಪಾದನೆ ಮಾಡುವುದನ್ನು ಕಲಿಯಬೇಕು. ಹಣವನ್ನು ಅನಾವಶ್ಯವಾಗಿ ವೆಚ್ಚ ಮಾಡಬಾರದು ಎಂದು ಹೆಳಿದರು.
ವಿದ್ಯಾರ್ಥಿನಿಯರು ಕಾರ್ಯಗಾರದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಉದ್ಯೋಗ ಕೋಶದ ಸಂಚಾಲಕರಾದ ಡಾ. ಅಶೋಕ ಕುಮಾರು, ಡಾ. ನರಸಿಂಹ, ಶ್ರೀಮತಿ ಸುಮಿತ್ರ ಅವರಿದ್ದರು. ಗೀತಾ ಪ್ರಾರ್ಥಿಸಿದರು. ಸುಮಿತ್ರಾ ನಿರೂಪಿಸಿದರು.   ವಿಠೋಬ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!