ವಿದ್ಯಾರ್ಥಿಗಳಲ್ಲಿ ಸಂಗೀತದ ಅಭಿರುಚಿ ಬೆಳೆಸಬೇಕು : ಶೈಲಜಶ್ರೀ

Get real time updates directly on you device, subscribe now.

ಕೊಪ್ಪಳ, 4- ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯು ಒಂದು ಸುಪ್ತ ಮನಸ್ಸು ಅಡಗಿರುತ್ತದೆ. ಅದು ಹೊರಗಡೆ ಬಂದಾಗ ವಿದ್ಯಾರ್ಥಿಯ ಪ್ರತಿಭೆ ಮುಖ್ಯವಾಹಿನಿಗೆ ಬರಲು ಸಾಧ್ಯ ಇದರಲ್ಲು ವಿದ್ಯಾರ್ಥಿಗಳು ಸಂಗೀತದ ಕಡೆ ಒಲವು ತೋರಿದಲ್ಲಿ ಮುಂದೆ ಅವರಿಗೆ ಒಂದು ಒಳ್ಳೆಯ ಅಡಿಪಾಯ ಆಗುವು ದರಲ್ಲಿ ಯಾವುದೇ ಸಂದೇಹವಿಲ್ಲ. ವಿದ್ಯಾರ್ಥಿಗಳಲ್ಲಿ ಸಂಗೀತದ ಅಭಿರುಚಿಗೆ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ಹಿರಿಯ ಶಿಕ್ಷಕರಾದ ಶ್ರೀಮತಿ  ಶೈಲಜಶ್ರೀ ಅಭಿಪ್ರಾಯಪಟ್ಟರು
ಇಂದು ನಗರದಲ್ಲಿ  ಅವರು ಗದಗ ರಸ್ತೆಯಲ್ಲಿರುವ ಮೊರಾರ್ಜಿವಸತಿ ಶಾಲೆಯಲ್ಲಿ ಶ್ರೀ ಗುರು ಪುಟ್ಟರಾಜ ಸಾಂಸ್ಕೃತಿಕ ಕಲಾ ಸಂಘ  (ರಿ) ಕಾಟ್ರಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸುಗಮ ಸಂಗೀತಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತನಾಡುತ್ತಾ,  ಪಂಚಾಕ್ಷರಿ ಗವಾಯಿಗಳು ಸಂಗೀತದಿಂದಲೇ ವಿಶ್ವ ವಿಖ್ಯಾತಿಯನ್ನು ಪಡೆದು ಗಾನಯೋಗಿ ಹೆಸರಿನಿಂದ  ಎಂಬ ಪ್ರಸಿದ್ದಿ ಪಡೆದರು. ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತದಿಂದಲೇ ವಿಶ್ವ ಮನ್ನಣೆ ಪಡೆದರು.   ಇಂದಿಗೂ ಹಲವಾರು ಅನಾಥ ಮತ್ತು ಅಂಧ ಮಕ್ಕಳಿಗೆ ಸಂಗೀತಾಭ್ಯಾಸ ಕಲಿಸಿಕೊಡುವ ಗದಗನ ವೀರೇಶ್ವರ ಪುಣ್ಯಾಶ್ರಮದ ಸೇವೆ ಅವಿಸ್ಮ ರಣೀಯಎಂದು ಶಿಕ್ಷಕಿ ಶೈಲಜಶ್ರೀ ಹೇಳಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಸತಿ ಶಾಲೆಯ ಪ್ರಾಚಾರ್ಯರಾದ ಗೌರಮ್ಮ ಕುಂಬಾರ  ನೆರವೇರಿಸಿದರು. ವಸತಿ ಶಾಲೆಯ ಶಿಕ್ಷಕರಾದ ಶ್ರೀಮತಿ ಭಾಗ್ಯಶ್ರೀ, ಶ್ರೀಮತಿ ಮಂಜುಳಾ, ಪುಂಡಲೀಕಪ್ಪ, ಮಹೇಶಪ್ಪ, ಶರಣಪ್ಪ, ಸಂತೋಷ ಸೇರಿದಂತೆ ಮತ್ತಿತರರು ಪಾಲ್ಗೊಂಡಿ ದ್ದರು. ಸಂಗೀತಕಲಾವಿದರಾದ ಕಳಕಯ್ಯ ಎನ್. ಬಲವಂಚಿಮಠ ಇವರಿಂದ ಸುಗಮ ಸಂಗೀತ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಇದಕ್ಕೆ ಚನ್ನಯ್ಯ ವಿ.ಮಠದ ಹಾರ್ಮೊನಿಯಂ, ಗ್ಯಾನೇಶ್ ಗನ್ನಲ್ಲಿ ತಬಲಾ ಹಾಗೂ ಪುಟ್ಟರಾಜ ಹಿರೇಮಠ ತಾಳಾ ಸಾಥ್ ನೀಡಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: