ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ- ೨೦೨೪ರ ದಿನಗಣನೆ ಆರಂಭ

Get real time updates directly on you device, subscribe now.

 

 

ವಾಗಿದ್ದು ಶ್ರೀಮಠದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಲಕ್ಷೆಪಲಕ್ಷ ಭಕ್ತರ ಭಕ್ತಿ-ಭಾವದತಾಣವಾಗಿರುವ ಸಂಸ್ಥಾನ ಶ್ರೀ ಗವಿಮಠ ಗವಿಸಿದ್ಧನನ್ನು ನಂಬಿ ಆಗಮಿಸುವ ಭಕ್ತಸಮೂಹಕ್ಕೆ ವಿಶೇಷ ಅನುಕೂಲವಾಗಲೆಂದು ಸಾಕಷ್ಟು ಸಿದ್ಧತೆಗಳನ್ನು ಶ್ರೀಮಠವು ಕೈಗೊಳ್ಳುತ್ತಿದೆ. ಮಹಾರಥೋತ್ಸವದಮೈದಾನದಆವರಣ ಗೋಡೆಗಳಿಗೆ ಈಗಾಗಲೇ ಬೃಹದಾಕಾರದ ನಾಲ್ಕು ದ್ವಾರಗಳಿದ್ದರೂ ಜನದಟ್ಟಣೆಯ ಅನುಕೂಲಕ್ಕಾಗಿ ಹೆಚ್ಚುವರಿಯಾಗಿಇನ್ನೂಎರಡು ದ್ವಾರಗಳನ್ನು ಶ್ರೀಮಠವು ಸಿದ್ಧಗೊಳಿಸುತ್ತಿದೆ.ಇದರಿಂದಾಗಿರಥೋತ್ಸವಕ್ಕೆ ಆಗಮಿಸುವ ಭಕ್ತಸ್ತೋಮಕ್ಕೆಸುಲಭವಾಗಿ ಸಂಚರಿಸಲುತುಂಬಾ ಅನುಕೂಲವಾಗುತ್ತದೆಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದೆ.

 

ಸಂಸ್ಥಾನ ಶ್ರೀ ಗವಿಮಠದಜಾತ್ರಾಮಹೋತ್ಸವವೆಂದರೆ ವಿನೂತನ ವಿಶೇಷತೆಯ ಹೊಸತನದಆಧುನಿಕ ಸ್ಪರ್ಷತೆಯ ಸಂಗಮ.ಶ್ರೀಮಠವು ತನ್ನಧಾರ್ಮಿಕಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕಜಾಗೃತಿಕಾರ್ಯಕ್ರಮಜಾತ್ರಾಮಹೋತ್ಸವದ ವಿಶೇಷತೆ. ಪ್ರತಿ ವರ್ಷಒಂದಲ್ಲಾಒಂದುರೀತಿಯಜನಜೀವನದ ಪ್ರಗತಿಗೆಜಾಗೃತಿ ಮೂಡಿಸಲುಅಗತ್ಯವಾದಉಪಯುಕ್ತಜನಜಾಗೃತಿಕಾರ್ಯಕ್ರಮವಾಗಿದೆ.ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷಜಾಗೃತಿಕಾರ್ಯಕ್ರಮಆಯೋಜಿಸಲಾಗಿದೆ.ಜಾತ್ರೋತ್ಸವದಜಾಗೃತಿಯೆಂದರೆಜನರಿಗೆಕುತೂಹಲ, ಉತ್ಸಾಹ ನಂಬಿಕೆ ಸದಾಇದ್ದೇಇರುತ್ತದೆ. ವರ್ಷದಿಂದ ವರ್ಷಕ್ಕೆಜಾಗೃತಿ ಕಾರ್ಯಕ್ರಮಗಳು ನಿರೀಕ್ಷೆ ಮೀರಿಯಶಸ್ಸುಕಂಡಿದ್ದು ಐತಿಹಾಸಿಕ ಸತ್ಯ ಸಂಗತಿ.ಈ ವರ್ಷವೂ ಸಹ ವಿನೂತನವಾದಜಾಗೃತಿ ಮೂಡಿಸಲು ಶ್ರೀಮಠವು ಹೊಸ ಸಂಕಲ್ಪದೊಂದಿಗೆ ಸಿದ್ಧವಾಗಿದೆ. ಈ ಒಂದು ಸತ್ಕಾರ್ಯಕ್ಕೆ ಭಕ್ತರು, ಜಿಲ್ಲಾಡಳಿತ, ಜಿಲ್ಲೆಯ ವಿವಿಧ ಇಲಾಖೆಗಳು, ಸಂಘ-ಶಾಲಾ ಸಂಸ್ಥೆಗಳ ಸಹಕಾರ ಮರೆಯುವಂತಿಲ್ಲ. ಎಲ್ಲರ ವಿಶ್ವಾಸ ಸಹಕಾರದೊಂದಿಗೆಜನಮನಗೆದ್ದು ಬಂದಿರುವ ಶ್ರೀಮಠದ ಜಾಗೃತಿಜಾಥಾ ಈ ವರ್ಷವೂ ಸಹ ಸಾರ್ವತ್ರಿಕ ಸಹಕಾರ ಪ್ರೋತ್ಸಾಹದೊಂದಿಗೆ’ಸ್ವಯಂಉದ್ಯೋಗ’ ಹಾಗೂ ‘ವೃತ್ತಿಕೌಶಲ್ಯದ ಸಂಕಲ್ಪ’ ಜಾಗೃತಿಅಭಿಯಾನ’ಕಾಯಕದೇವೋಭವ’ ಎಂಬ ಜಾಗೃತಿಜಾಥಾ’ಸ್ವಾವಲಂಬಿ ಬದುಕು, ಸಮೃದ್ಧಿ ಬದುಕು, ಸಂತೋಷದ ಬದುಕು’ ಎಂಬ ಘೋಷವಾಕ್ಯದೊಂದಿಗೆ ದಿನಾಂಕ ೨೪.೦೧.೨೦೨೪ರ ಬೆಳಿಗ್ಗೆ ೮.೦೦ ಗಂಟೆಗೆ ಬುಧವಾರಜಾಥಾವುಕೊಪ್ಪಳದ ಬಾಲಕಿಯರ ಸರಕಾರಿಕಾಲೇಜಿನ ಮೈದಾನ(ತಾಲೂಕುಕ್ರೀಡಾಂಗಣ)ದಿಂದ ಚಾಲನೆಗೊಂಡುಆರಂಭವಾಗಿ ಅಶೋಕ ವೃತ್ತ, ಜವಾಹರರಸ್ತೆ, ಗಡಿಯಾರಕಂಬದ ಮೂಲಕ ಶ್ರೀಗವಿಮಠದ ಜಾತ್ರಾ ಮಹಾದಾಸೋಹಕ್ಕೆತಲುಪಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ.

 

ಶ್ರೀಮಠವು ಹಿಂದೆ ನಡೆದ ಜಾತ್ರೋತ್ಸವಗಳಲ್ಲಿ ಹಮ್ಮಿಕೊಂಡಿರುವಜಾಗೃತಿ ಜಾಥಾಗಳ ಮಾಹಿತಿ

ಮಹಾರಕ್ತದಾನ ಶಿಬಿರ: ಜಾಥಾಪರಂಪರೆ ಮೊದಲ ಬಾರಿಗೆಆರಂಭವಾಗಿದ್ದು ೨೦೧೫ರಲ್ಲಿ ಮಹಾರಕ್ತದಾನ ಶಿಬಿರ ಆಯೋಜಿಸಿ ಚಿಂತನೆಯಕಲರವಅಧಿಕೃತವಾಗಿ ಪ್ರಾರಂಭ ಮಾಡಲಾಯಿತು. ಜಾಥಾ ಉದ್ಧೇಶಿಸಿ ಆಶೀರ್ವಚನ ನೀಡಿದ ಗವಿಮಠದ ಪೂಜ್ಯ ಶ್ರೀಗಳು ಕರೆ ನೀಡಿದಸತ್ತವರನ್ನು ಬದುಕಿಸುವ ಶಕ್ತಿ ನಮಗಿಲ್ಲಆದರೆ ಸಾಯುತ್ತಿರುವವರನ್ನು ಬದುಕಿಸುವ ಶಕ್ತಿ ದೇವರು ನಮಗೆ ಕರುಣಿಸಿದ್ದಾನೆ. ಅದುರಕ್ತದಾನ ಮಾಡುವುದರ ಮೂಲಕ ಜೀವ ಉಳಿಸುವ ಪುಣ್ಯಕಾರ್ಯದಲ್ಲಿ ಭಾಗಿಯಾಗೋಣ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಕೃಪೆಯಿಂದ ಪ್ರೇರೆಣೆಗೊಂಡು ಕೊಪ್ಪಳ ಜಿಲ್ಲೆಯ ಸುತ್ತ ಮುತ್ತಲಿನ ತಾಲೂಕು ಮತ್ತು ಗ್ರಾಮಗಳಲ್ಲಿನ ಯುವಕ ಸಂಘ, ಸ್ಥಳಿಯ ಸಂಘ ಸಂಸ್ಥೆಗಳಿಂದ ರಕ್ತದಾನ ಶಿಭಿರಗಳನ್ನು ಏರ್ಪಡಿಸಿ ಅತಿ ಹೆಚ್ಚು ಜನರು ಶಿಬಿರಗಳಲ್ಲಿ ರಕ್ತದಾನ ಮಾಡುತಿದ್ದಾರೆ. ಇದರಿಂದ ಅನೇಕ ರೋಗಿಗಳಿಗೆ ಸುಲಭವಾಗಿರಕ್ತ ಲಭ್ಯವಾಗುತ್ತಿದೆ.

ಬಾಲ್ಯ ವಿವಾಹ ತಡೆಜಾಗೃತಿ ನಡಿಗೆ:  ೨೦೧೬ರ ಜಾಥಾಇದಾಗಿದ್ದುಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ನಮ್ಮ ಭಾಗದಲ್ಲಿಸಾಮಾಜಿಕ ಪಿಡುಗಾಗಿಕಾಡುತ್ತಿರುವ ಸಮಸ್ಯ ಬಾಲ್ಯ ವಿವಾಹ ಒಂದಾಗಿದೆ. ಮದುವೆಯಂಬ ಅಕ್ಷರಅರ್ಥವೇಅರಿಯದ ಕಂದಗಳಿಗೆ ಮದುವೆಅಪ್ರಾಪ್ತ ವಯಸ್ಸಿನಲ್ಲಿ ಮದುವೇಮಾಡಿ ಸಂಪ್ರದಾಯದ ಹೆಸರಿನಲ್ಲಿ ಮಕ್ಕಳ ಬದುಕು ಕಸಿಯುತಿದ್ದರು.ಇವರನ್ನು ಮಾನವೀಯತೆ ನೆಲೆಯಲ್ಲಿ ಬಾಳಲು ಬಿಡುವಂತೆಜನರಿಗೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಶ್ರೀಮಠದ ಜಾಗೃತಿಜಾಥಾ ಮಹತ್ವದ ಪಾತ್ರವನ್ನು ನಿರ್ವಹಿಸಿದೆ.

ಜಲದೀಕ್ಷೆ:೨೦೧೭ರ ಜಾಥಾಇದಾಗಿದೆ. ಸತತ ಬರದಿಂದಕಂಗಾಲಾಗಿದ್ದ ಈ ಭಾಗವುಇಲ್ಲಿನ ನಾಗರಿಕರಲ್ಲಿ, ನೀರಿನ ಮಿತವ್ಯಯ ಮತ್ತು ಮಳೆ ನೀರುಕೊಯ್ಲು, ಬರದ ನಾಡನ್ನು ಸಮೃದ್ದಿಯನ್ನಾಗಿಸಲುಅರಿವು ಮೂಡಿಸುವ ಸಂಕಲ್ಪವೇ ಜಲದೀಕ್ಷೆಕಾರ್ಯಕ್ರಮ.ಶ್ರೀಮಠದ ಜಲ ಸಂರಕ್ಷಣೆಜಾಗೃತಿಅಭಿಯಾನಇಂದು ಹಲವು ಮೈಲುಗಳನ್ನು ಸೃಷ್ಟಿಸಿದೆ. ೨೦೧೯ರಲ್ಲಿ ಇತಿಹಾಸ ಪ್ರಸಿದ್ಧ ಹಾಗೂ ಈ ಭಾಗದಜೀವನಾಡಿಯಾಗಿದ್ದ ಕೊಪ್ಪಳದ ಹಿರೇಹಳ್ಳದ ಸರಿ ಸುಮಾರು ೨೬ ಕಿಲೋಮಿಟರ್‌ಉದ್ದದ ಹಳ್ಳವನ್ನು ಗಾಳಿ, ಬಿಸಿಲು ಎನ್ನದೆಅತ್ಯಂತಕಡಿಮೆಅವಧಿಯಲ್ಲಿಆಧುನಿಕ ಭಗಿರಥನಂತೆ ಪುನಶ್ಚೇತನಗೊಳಿಸುವ ಮೂಲಕ ಹಳ್ಳ ನದಿಯಾಗಿ ಹರಿಯುವಂತೆ ಮಾಡಿದ್ದುಒಂದು ಪವಾಡವೇ ಸರಿ.

ಸಶಕ್ತ ಮನ- ಸಂತೃಪ್ತಜೀವನ:  ೨೦೧೮ರ ಶ್ರೀಮಠದ ಜಾಗೃತಿಯಾಗಿದೆ. ಆಧುನಿತೆಯ ಭರಾಟೆಯಲ್ಲಿಅನೇಕರುಒತ್ತಡದ ಬದುಕು, ಖಿನ್ನತೆ, ಹಲವು ಮಾನಸಿಕ ರೋಗಗಳಿಂದ ಬಿ.ಪಿ, ಸಕ್ಕರೆ ಕಾಯಿಲೆಗಳಂತಹ ರೋಗಗಳಿಗೆ ತುತ್ತಾಗುತಿದ್ದಾರೆ.ಸ್ವಾಸ್ಥ್ಯ ಸಮಾಜದಲ್ಲಿ ಸದೃಡ ಮನಸ್ಸುಗಳನ್ನು ನಿರ್ಮಾಣ ಮಾಡುವ, ಜಾಗೃತಿ ಮೂಡಿಸುವದಾಗಿತ್ತು.ಸದರಿಕಾರ್ಯಕ್ರಮದಿಂದ ನಮ್ಮಕಛೇರಿಗೆ ಮಾನಸಿಕ ಅಸ್ವಸ್ಥರ ಭೇಟಿ ಮತ್ತುಅವರಿಗೆ ಆಪ್ತ ಸಮಾಲೋಚನೆ ನೀಡುವಕಾರ್ಯವು ಮೊದಲಿಗಿಂತಲೂಉತ್ತಮವಾಗಿದೆ.ಇದಕ್ಕೆ ಈ ಜಾಥಾವೇ ಪ್ರೇರಣೆ.

ಕೃಪಾದೃಷ್ಟಿ: ೨೦೧೯ರ ಜಾಥಾ

ನೇತ್ರದಾನಕುರಿತುಜಾಗೃತಿಯನ್ನು ಮೂಡಿಸುವ ಸಂಕಲ್ಪದಿಂದ”ಕೃಪಾದೃಷ್ಟಿ” ಎಂಬ ಶೀರ್ಷಿಕೆಯ ಅಂಧರಿಗೆ ನೀಡಿದರೆ ನಿಮ್ಮದೃಷ್ಟಿ,ಅದರಿಂದಆಗುವುದು ಸುಂದರ ಲೋಕಸೃಷ್ಟಿ. ಇರುವಾಗ ಪ್ರಪಂಚವನ್ನು ನೋಡಿ ಆನಂದಿಸುತ್ತೆವೆ. ಸತ್ತ ಮೇಲೂ ಪ್ರಪಂಚ ನೋಡಬೇಕಾದರೆ ನೇತ್ರದಾನ ಮಾಡಿ, ಜಗತ್ತೆಕತ್ತಲಾದ ಸಾವಿರಾರುಅಂಧರಿಗೆ ನಮ್ಮದ್ರಷ್ಟಿ ಬೆಳಕು ಕೊಡುವುದಾದರೆ ಈ ಹುಟ್ಟು ಸಾವಿನಲ್ಲೂ ಸಾರ್ಥಕವಾಗುವಕ್ಷಣ ನಮ್ಮದಾಗಲಿ ಹೇಳಿದ ಆಶೀರ್ವಚನ ನೀಡಿಅರಿವುಆಚಾರವಾಗಬೇಕೆ ಹೊರತು ವಿಚಾರವಾಗಬಾರದೆಂದುಜೊತೆಗೆ ಸ್ವತಃ ಸ್ವಯಂಪ್ರೇರಿತರಾಗಿ ಸುಮಾರು ೧೮೦೦ಕ್ಕಿಂತಜನರು ನೇತ್ರದಾನ ಮಾಡುವ ವಾಗ್ದಾನಕ್ಕೆ ಸಹಿ ಮಾಡಿರುವದುಜಾಥಾದ ಮಹತ್ವ ತಿಳಿಯಬಹುದು.

ಲಕ್ಷ ವೃಕ್ಷೋತ್ಸವ: ೨೦೨೦ರ “ದೈವ ಸಾಕ್ಷಾತ್ಕಾರಕ್ಕೆ ಲಕ್ಷದೀಪೋತ್ಸವ, ಪ್ರಕೃತಿ ಸಾಕ್ಷಾತ್ಕಾರಕ್ಕೆ ಲಕ್ಷ ವೃಕ್ಷೋತ್ಸವ” ಎಂಬ ಘೋ?ವಾಕ್ಯದೊಂದಿಗೆ ಶ್ರೀ ಮಠದ ವತಿಯಿಂದಉಚಿತವಾಗಿ ಸಸಿ ವಿತರಿಸಿ ಆ ಎಲ್ಲಾ ಸಸಿಗಳನೆಲ್ಲಾ ಮರಗಳಾಗಿ ಬೆಳೆಯು ಹಾಗೆ ಮಾಡುವದೇ ಈ ಕಾರ್ಯಕ್ರಮದ ಮೂಲ ಉದ್ಧೇಶವಾಗಿದೆ.  ಹಿರೇಹಳ್ಳದ ಎಡ -ಬಲದಲ್ಲಿ ಸಸಿಗಳನ್ನು ನೆಡುವುದರಿಂದಉತ್ತಮ ಪರಿಸರ ಹಾಗೂ ರೈತರಿಗೆಉತ್ತಮಆದಾಯದ ಮೂಲಗಳನ್ನು ಕಂಡುಕೊಳ್ಳುವಲ್ಲಿ ಇಂದು ಪ್ರಮುಖ ಪಾತ್ರ ವಹಿಸಿತು.

 

‘ಅಂಗಾಂಗ ದಾನ’ ಕಾರ್ಯಕ್ರಮ-೨೦೨೩ :೨೦೨೩ರ ಜಾತ್ರಾ ಮಹೋತ್ಸವ ನಿಮಿತ್ಯ ಸಾಮಾಜಿಕಧ್ಯೇಯ ವಿಷಯವಾಗಿಪರೋಪಕಾರಾರ್ಥಮ್‌ಇದಮ್ ಶರೀರಂ-ಅಂಗಾಂಗ ದಾನದಜಾಗೃತಿಜಾಥಾ ‘ಸತ್ತ ಮೇಲೂ ಬದುಕುವಯೋಗ, ಸಾಯುವವನಿಗೆ ಅಂಗಾಂಗ ಯೋಗ’ ಎಂಬ ಘೋಷ ವಾಕ್ಯದೊಂದಿಗೆಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 

Get real time updates directly on you device, subscribe now.

Comments are closed.

error: Content is protected !!