ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ – ಮಹಾದಾಸೋಹ ಸಿದ್ಧತೆ

Get real time updates directly on you device, subscribe now.


ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು ಜಾತ್ರಾ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಲಕ್ಷೆಪಲಕ್ಷ ಭಕ್ತರ ಆಧ್ಯಾತ್ಮಿಕ ನೆಲೆ, ಮೆಮ್ಮದಿಯ ತಾಣ ಸಂಸ್ಥಾನ ಶ್ರೀ ಗವಿಮಠ. ಇಂದು ಹೊಸ ವರುಷದ ನಿಮಿತ್ಯ ಭಕ್ತ ಸಮೂಹವೇ ಹರಿದು ಬಂದಿದೆ. ಶಾಲಾ ವಿದ್ಯಾರ್ಥಿಗಳ ದಂಡಂತು ನಿತ್ಯವು ಇರುವುದು ಸ್ವಾಭಾವಿಕವಾಗಿದೆ. ಬೆಳಗ್ಗೆಯಿಂದಲೇ ಆಗಮಿಸಲು ಅರಂಭಿಸಿದ ಭಕ್ತ ಸಮೂಹವು ಶ್ರೀ ಗವಿಸಿದ್ಧೇಶ್ವರರ ಕರ್ತೃ ಗದ್ದುಗೆಯ ದರ್ಶನವನ್ನು ಪಡೆದು ಮಹಾದಾಸೋಹದಲ್ಲಿ ಪ್ರಸಾದ ಸೇವಿಸಿ ಪುನಿತರಾದರು.

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂಭ ಖ್ಯಾತಿಯ ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು ಮಹಾದಾಸೋಹ ಸಿದ್ಧತೆಯ ನಿಮಿತ್ಯ ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್ ಗಾರ್ಡನ್‌ನಲ್ಲಿ (ಮಲಿಯಮ್ಮ ದೇವಸ್ಥಾನದ ಪಕ್ಕದಲ್ಲಿ) ಇರುವ ಸುಮಾರು ಆರು ಎಕರೆಯಷ್ಟು ವಿಶಾಲವಾದ ಆವರಣದಲ್ಲಿ ಮಹಾದಾಸೋಹ ಮಂಟಪದ ಸಿದ್ಧತೆ ಭರದಿಂದ ಸಾಗಿದೆ. ಪರಿಸರ ಸ್ನೇಹಿ ಭವ್ಯವಾದ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ, ಮುಂತಾದವುಗಳು ಪ್ರತಿವರ್ಷದಂತೆ ಈ ವರ್ಷವು ಸಿಧ್ಧಗೊಳ್ಳುತ್ತಿವೆ. ಭಕ್ತರಿಗೆ ಪ್ರಸಾದ ಸೇವನೆಗೆ ತೊಂದರೆಯಾಗದಂತೆ ಸಾಲಾಗಿ ಬರಲು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಶ್ರೀ ಮಠದ ಆವರಣದಲ್ಲಿ ಸೌಂದರಿಕರಣ
ಕೊಪ್ಪಳ:ಉತ್ತರ ಕರ್ನಾಟಕದ ಆಧ್ಯಾತ್ಮಿಕ, ಸಾಂಸ್ಕೃತಿಕತೆಯ ಅದಮ್ಯ ಕ್ಷೇತ್ರವಾಗಿರುವ ಸಂಸ್ಥಾನ ಶ್ರೀ ಗವಿಮಠವು ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ. ಪ್ರಸ್ತುತ ಶ್ರೀ ಮಠದ ಆವರಣ ಸೌಂದರಿಕರಣದಲ್ಲಿಯೂ ಗಮನಾರ್ಹವಾದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಭಕ್ತರ ಆಕರ್ಷಣೆಯ ಕೇಂದ್ರವಾಗಿ ಆಧ್ಯಾತ್ಮೀಕ ಆಸಕ್ತರ ಪ್ರವಾಸಿಗರ ತಾಣವಾಗಿದೆ. ಶ್ರೀ ಮಠದ ಒಳ ಆವರಣ ಹಾಗೂ ಹೊರ ಆವರಣದಲ್ಲಿ ಸುಂದರವಾದ ಬಿಳಿಶಿಲೆಗಳಂದ ನೆಲಹಾಸು ರಚನೆಗೊಳ್ಳುತ್ತಿವೆ. ಜೊತೆಗೆ ಅಲ್ಲಲ್ಲಿ ಚಿಕ್ಕ ಚಿಕ್ಕ ಶಿಲಾಮಂಟಪಗಳು ಹಾಗೂ ಲತಾ ಮಂಟಪಗಳು ಎದ್ದು ನಿಲ್ಲುತ್ತಿರುವುದು ಶ್ರೀಮಠದ ಸೊಬಗನ್ನು ಇಮ್ಮಡಿಗೊಳಿಸಲಿವೆ.

Get real time updates directly on you device, subscribe now.

Comments are closed.

error: Content is protected !!