ದೇಶದಲ್ಲಿ ಎಸ್ ಸಿ ಪಿ ಟಿ ಎಸ್ ಪಿ ಕಾನೂನು ಜಾರಿ ಮಾಡಲು ತೊಂದರೆಗಳಿವೆ- ಎ ನಾರಾಯಣಸ್ವಾಮಿ
ಕೊಪ್ಪಳ : ದೇಶದಲ್ಲಿ ಎಸ್ ಸಿ ಪಿ ಟಿ ಎಸ್ ಪಿ ಕಾನೂನು ಜಾರಿ ಮಾಡಲು ತೊಂದರೆಗಳಿವೆ
ದೇಶದಲ್ಲಿ ಎಲ್ಲಾ ರಾಜ್ಯದಲ್ಲಿ ಶೇಕಡಾ 50 ರಷ್ಟು ಎಸ್ಸಿ ಎಸ್ಟಿ ಜನರಿಲ್ಲಾ ಕೆಲ ರಾಜ್ಯಗಳಲ್ಲಿ ಶೇಕಡಾ 2 ರಷ್ಟು ಮಾತ್ರ ಎಸ್ಸಿ ಗಳಿದ್ದಾರೆ ಎಂದು ಕೇಂದ್ರ ಸಚಿವ ಎ ನಾರಯಣಸ್ವಾಮಿ ಹೇಳಿದರು.
ಅವರು ಇಂದು ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ
ಕೇಂದ್ರ ಸರ್ಕಾರ ಎಸ್ ಸಿ ಪಿ ಟಿ ಎಸ್ ಪಿ ಕಾನೂನು ಜಾರಿ ಮಾಡಿಲ್ಲಾ ಅದನ್ನು ರಾಜ್ಯಗಳಿಗೆ ಬಿಟ್ಟು ಕೊಡಲಾಗಿದೆ
ಕೇಂದ್ರ ಸರ್ಕಾರ ದಲಿತ ವಿರೋಧಿ ಅನ್ನೋ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿ ಇದೇ ಸಿದ್ದರಾಮಯ್ಯ ಬಜೆಟ್ ನಲ್ಲಿ ಹದಿನಾಲ್ಕು ಸಾವಿರ ಕೋಟಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ದಲಿತರಿಗೆ ಮೀಸಲಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿಕೊಂಡರು ದಲಿತ ಮಕ್ಕಳಿಗೆ ಹಾಸ್ಟೆಲ್ ಕಟ್ಟಲಿಲ್ಲಾ ಹಾಸ್ಟೇಲ್ ಸಿಗದ ಮಕ್ಕಳಿಗೆ ಹಣ ನೀಡುತ್ತಿದ್ದ ವಿದ್ಯಾಸಿರಿ ಯೋಜನೆ ನಿಲ್ಲಿಸಿದ್ದಾರೆ.
ಸಿದ್ದರಾಮಯ್ಯ ಯಾಕೆ ಬರಿ ದಲಿತರ ಬಗ್ಗೆ ಕಣ್ಣೀರು ಹಾಕೋ ಮಾತುಗಳನ್ನು ಹೇಳುತ್ತಾರೆ.
ವಿಷ್ಣು ಭಕ್ತರು, ಈಶ್ವರ ಭಕ್ತರು ಅಂತ ಮಲ್ಲಿಕಾರ್ಜುನ ಖರ್ಗೆ ಅವರು ದೇಶವನ್ನು ಇಬ್ಬಾಗ ಮಾಡಲು ಹೊರಟಿದ್ದಾರೆ ಇದನ್ನು ಬಿಟ್ಟು ಅಭಿವೃದ್ಧಿ ಮೇಲೆ ಮತ ಕೇಳಬೇಕು ಮತ್ತೊಮ್ಮೆ ಮೋದಿ ಅನ್ನೋದನ್ನು ಅನೇಕರಿಗೆ ಜೀರ್ಣಿಸಿಕೊಳ್ಳಲು ಆಗ್ತಿಲ್ಲಾ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದವರಿಗೆ ಟಿಕೆಟ್ ನ್ನೇ ನೀಡಿಲ್ಲಾ. ಹೀಗಾಗಿ ಈ ಬಾರಿ ಅನಂತಕುಮಾರ್ ಹೆಗಡೆಗೆ ಟಿಕೆಟ್ ನೀಡಿಲ್ಲ. ರಾಜಕೀಯ ಪಕ್ಷಗಳು ಧರ್ಮಗಳನ್ನು ಇಬ್ಬಾಗ ಮಾಡಬಾರದು ನಮ್ಮ ಸರ್ಕಾರದ ಸಮಯದಲ್ಲೇ ಎಸ್ ಸಿ ಪಿ ಟಿ ಎಸ್ ಪಿ ಕಾನೂನು ಜಾರಿಗೆ ಮುಂದಾಗಿದ್ದೆವು
ಆದ್ರೆ ಕೊನೆಯ ಹಂತದಲ್ಲಿ ಅದು ಆಗಿರಲಿಲ್ಲಾ
ಎಂದಿಗೂ ಸಿದ್ದರಾಮಯ್ಯ ಸ್ಕಾಲರ್ಶಿಪ್ ಹೆಚ್ಚು ಮಾಡಲಿಲ್ಲಾ
ರಾಜ್ಯ ಸರ್ಕಾರದ ಎಸ್ ಸಿ ಪಿ ಟಿ ಎಸ್ ಪಿ ಯೋಜನೆಯಿಂದ ಲಾಭ ವಾಗ್ತಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ಅನೇಕ ನಿಗಮಗಳಿಗೆ ಅನುಧಾನ ಕಡಿಮೆ ಮಾಡಿದ್ದಾರೆ ಗಂಗಾ ಕಲ್ಯಾಣ ಇಲ್ಲಾ, ಅನೇಕ ಯೋಜನೆಗಳ ಸಬ್ಸಿಡಿ ನಿಲ್ಲಿಸಿದ್ದಾರೆ
ಒಳ ಮೀಸಲಾತಿಯಿಂದ ನಾವು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿರಲಿಲ್ಲಾ ಈ ವಿಚಾರ ಇದೀಗ ಸುಪ್ರೀಂ ಕೋರ್ಟ್ ನಲ್ಲಿದೆ
ಮುಂದಿನ ತಿಂಗಳು ತೀರ್ಪು ಬರುತ್ತದೆ
ದಕ್ಷಿಣ ಭಾರತದಲ್ಲಿ ಒಳ ಮೀಸಲಾತಿ ಜಾರಿಯಾಗುತ್ತದೆ
ಪ್ರಜ್ವಲ್ ಪ್ರಕರಣ ತನಿಖೆ ಹಂತದಲ್ಲಿದೆ, ಅದರ ಬಗ್ಗೆ ವ್ಯಾಖ್ಯಾನ ಮಾಡೋದು ಸರಿಯಲ್ಲಾ ಎಂದು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ್ ಹಾಗೂ ಬಿಜೆಪಿ ಮುಖಂಡ ಮಹಾಂತೇಶ್ ಪಾಟೀಲ್ ಜಿಲ್ಲಾ ಎಸ್ ಸಿ ಘಟಕದ ಅಧ್ಯಕ್ಷ ಗಣೇಶ್ ಹೊರತಡ್ನಾಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.