ಚುನಾವಣಾ ರಾಯಭಾರಿ ಮಹೆಬೂಬ್ ಕಿಲ್ಲೇದಾರ ಅವರಿಂದ ಮತದಾನ ಜಾಗೃತಿ

Get real time updates directly on you device, subscribe now.

ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದಲ್ಲಿ ಮೇ 01 ರಂದು ನಡೆದ ಕೊಪ್ಪಳ ಕುಟುಂಬದ ಇಮಾಂಬಿ ಹಾಗೂ ಮಹಮ್ಮದ್ ರಫೀ ಇವರ ವಿವಾಹ ಸಮಾರಂಭದಲ್ಲಿ ಕೊಪ್ಪಳ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿವಾಹ ಸಮಾಂಭದಲ್ಲಿ ಹಾಜರಿದ್ದ ನವ ವಧು-ವರರು ವೇದಿಕೆಯಲ್ಲಿ ಮೇ-7ರಂದು ಲೋಕಸಭಾ ಚುನಾವಣೆ ಜರುಗಲಿರುವ ಪ್ರಯುಕ್ತ ನಮ್ಮ ಮತ, ನಮ್ಮ ಹಕ್ಕು ಪೋಸ್ಟರ್ ಗಳ ಮೂಲಕ ಮತದಾನ ಜಾಗೃತಿ ಮೂಡಿಸಿದ್ದು ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ಖುಷಿ ನೀಡಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿ ಮಹೆಬೂಬ್ ಕಿಲ್ಲೇದಾರ ಕಡ್ಡಾಯವಾಗಿ ಮೇ-7ರಂದು ತಪ್ಪದೇ ಮತ ಚಲಾಯಿಸಿರೆಂದು ಹಾಜರಿದ್ದವರಿಗೆ ಕರೆ ನೀಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿ ಪೂರ್ಣಿಮಾ ಯೋಳುಬಾವಿ ಮಾತನಾಡಿ, ಮತದಾನ ನಮ್ಮೆಲ್ಲರ ಹಕ್ಕು. ಅದನ್ನು ಯಾರಿಗೂ ಮಾರಿಕೊಳ್ಳಬೇಡಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಇನ್ನೋರ್ವ ಜಿಲ್ಲಾ ಚುನಾವಣಾ ರಾಯಭಾರಿ ರಮ್ಯಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ, ಶಿಕ್ಷಕಿ ತಾರಾಬಾನು ಕಿಲ್ಲೇದಾರ, ಸಲ್ಮಾ, ಆಸ್ಮಾ, ರಫಿ, ಶಬಾನಾ ಬಳಿಗಾರ, ಖಾಜಹುಸೇನ, ಮಹೆಬೂಬ್ ಚಿಕ್ಕಬಗನಾಳ ಭಾಗವಹಿಸಿದ್ದರು ಹಾಗೂ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: