ಬಿಜೆಪಿಯವರು ಶೋಕಿಲಾಲರು ಎಂದು ಜನ ಮಾತನಾಡುತ್ತಿದ್ದಾರೆ-ಬಯ್ಯಾಪೂರ

Get real time updates directly on you device, subscribe now.


ಕುಷ್ಟಗಿ.ಮೇ.01: ಮೋದಿ ಎಂದರೆ ಖಾಲಿ ಚಂಬು ಎಂದು ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪೂರ ಲೇವಡಿ ಮಾಡಿದರು. ಲೋಕಸಭಾ ಚುನಾವಣೆ ಪ್ರಯುಕ್ತ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಷ್ಟಗಿ – ಹನುಮಸಾಗರ ವತಿಯಿಂದ ತಾಲೂಕಿನ ದೋಟಿಹಾಳ ಗ್ರಾಮದ ಶುಖಮುನಿ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಲೋಕಸಭಾ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿಯವರ 10 ವರ್ಷದ ತಮ್ಮ ಆಡಳಿತ ಅವಧಿಯಲ್ಲಿ ಶೂನ್ಯ ಶಾಧನೆ ಮಾಡಿದ್ದಾರೆ. ಹಿಂದಿನ ಹಾಗೂ ಇಂದಿನ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ತುಲನೆ ಮಾಡುವ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಡ್ಯಾಂ ನಿರ್ಮಾಣ ಮಾಡಿದ ಕೀರ್ತಿ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಪಕ್ಷ, ಬಡವರ ಪಕ್ಷ ಎಂದು ಹೇಳಿದರು. ನೇರ ನಿಷ್ಠರು ರಾಜಕಾರಿಣಿ ಸಿ.ಎಂ ಸಿದ್ದರಾಮಯ್ಯನವರು. ಅಚ್ಚೇದಿನ್ ಯಾವಾಗ ಬರುತ್ತೇ ಮೋದಿಯರೇ.
ಅಬ್ಕಿಬಾರ್ 200 ನೈ ಹೋತಾ ಎಂದು ಮೋದಿಯವರನ್ನು ಜರಿದರು. ಬಿಜೆಪಿಯವರು ಶೋಕಿಲಾಲರು ಎಂದು ಜನ ಮಾತನಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಶೇಖರಗೌಡ ಮಾಲಿ ಪಾಟೀಲ್, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ವೆಂಕಟೇಶ್ ಚೌಹಾಣ್, ವಿಜಯನಾಯಕ್, ಉಮೇಶ ಮಂಗಳೂರು, ಗವಿಸಿದ್ದಯ್ಯ ಮಳಿಮಠ, ಶಿವಪುತ್ರಪ್ಪ ಶೆಟ್ಟರ್, ಮುತ್ತಣ್ಣ ಗರ್ಜನಾಳ, ರಾಮನಗೌಡ, ಯಂಕನಗೌಡ ಬಸಾಪೂರ ಹಾಗೂ ದೋಟಿಹಾಳ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!