ಏಸುಕ್ರಿಸ್ತನ ಜನನದ ಸುವಾರ್ತೆ ಯೊಂದಿಗೆ ಮನೆ ಮನೆಗಳಿಗೆ ಭೇಟಿ
ಕೊಪ್ಪಳ : ಕ್ರಿಸ್ಮಸ್ ಹಬ್ಬದ ಪೂರಕವಾಗಿ ಏಸುಕ್ರಿಸ್ತನ ಜನನದ ಶುಭವಾರ್ತೆಯನ್ನು ಮನೆ ಮನೆಗೆ ತೆರಳಿ ಭಜನೆ ಮುಖಾಂತರ ಹಾಡುಗಳನ್ನು ಹಾಡುತ್ತಾ. ಪ್ರವಚನಗಳನ್ನು ನುಡಿಯುತ್ತ. ಕ್ರಿಸ್ಮಸ್ ಹಬ್ಬದ ಹಾಡುಗಳನ್ನು ಹಾಡುತ್ತಾ. ಯೇಸು ಕ್ರಿಸ್ತನ ಜನನದ ಶುಭವಾರ್ತೆಯನ್ನು ಸಾರಿದರು.
ಭಾಗ್ಯನಗರದ ನವ ನಗರದ ಇರುವಾತನು ಚರ್ಚಿನಿಂದ ಶನಿವಾರ ಸಂಜೆ ಪ್ರಾರಂಭವಾಗಿ ಕೊಪ್ಪಳ ನಗರದ ಮೂರನೇ ವಾರ್ಡಿನ ನಿರ್ಮಿತಿ ಕೇಂದ್ರದ ಬಡಾವಣೆಯಲ್ಲಿ ಮನೆ ಮನೆಗೆ ಭೇಟಿ ನೀಡಿದ ನಂತರ ಭಾಗ್ಯನಗರದ ಕಿನ್ನಾಳ ರಸ್ತೆ ಮುಖಾಂತರವಾಗಿ ಅಂಬೇಡ್ಕರ್ ನಗರದ ಪ್ರಮುಖ ಮನೆಗಳಿಗೆ ತೆರಳಿದ ಬಳಿಕ ಕೀರ್ತಿ ಕಾಲೋನಿ. ಮರಿಯಮ್ಮ ದೇವಸ್ಥಾನದ ಮುಂಭಾಗದಿಂದ ಓಜಿನಹಳ್ಳಿ ರಸ್ತೆಯಲ್ಲಿರುವ ಹಮಾಲರ ಕಾಲೋನಿಯಿಂದ ಶಾಸ್ತ್ರಿ ಕಾಲೋನಿಯ ತುಕಾರಾಮ್ ಬಿ. ಪಾತ್ರೋಟಿ ಅವರ ನಿವಾಸದಲ್ಲಿ ಮುಕ್ತಾಯಗೊಳಿಸಲಾಯಿತು.
ರವಿವಾರ ಸಂಜೆ ಪ್ರಮುಖ ಬೀದಿಗಳಲ್ಲಿ ನವನಗರದ ಪ್ರಮುಖ ಬೀದಿಗಳಲ್ಲಿ ಭಜನೆ. ನೃತ್ಯದೊಂದಿಗೆ ಮೆರವಣಿಗೆ ನಡೆಸಿ ನವ ನಗರದ ಇರುವಾತನು ಚರ್ಚಿಗೆ ಬಂದು ಪ್ರಾರ್ಥನೆಯೊಂದಿಗೆ ಸಮರೋಪಗೊಂಡಿತು.
ಶಾಸ್ತ್ರಿ ಕಾಲೋನಿಯಲ್ಲಿಯ ತುಕಾರಾಮ್ ಬಿ.ಪಾತ್ರೋಟಿ ಅವರ ನಿವಾಸದಲ್ಲಿ ರವಿವಾರ ಮಧ್ಯಾಹ್ನ ಕೇಕ್ ಕತ್ತರಿಸುವ ಮೂಲಕ ಏಸುಕ್ರಿಸ್ತನ ಜನನದ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೊಪ್ಪಳದ ಇ.ಸಿ.ಐ. ಚರ್ಚಿನ ಫಾದರ್ ಜೆ.ರವಿಕುಮಾರ್ ಮಾತನಾಡಿ ಒಬ್ಬ ತಂದೆಗೆ ಇಬ್ಬರು ಗಂಡು ಮಕ್ಕಳು ಇರುತ್ತಾರೆ. ಹಿರಿಯ ಮಗನು ತಂದೆಯ ಮಾತನ್ನು ತಿರಸ್ಕರಿಸಿ. ಪಟಿಂಗ ನಾಗಿ ತನಗಿರುವ ಆಸ್ತಿಗಳನ್ನು ಕಳೆದುಕೊಂಡು ನಂತರ ಪಶ್ಚತಾಪ ಪಟ್ಟು. ತಿರುಗಿ ತಂದೆ ಬಳಿ ಬಂದು ನಾನು ನಿನಗೆ ಮತ್ತು ದೇವರಿಗೆ ವಿರೋಧವಾಗಿ ಪಾಪ ಮಾಡಿದ್ದೇನೆ ಎಂದು ತನ್ನನ್ನು ತಗ್ಗಿಸಿಕೊಂಡು ದೇವರಿಗೆ ಒಪ್ಪಿಸಿಕೊಡುತ್ತಾನೆ. ಆಗ ತಂದೆಯಾದ ದೇವರು ಅವನಿಗೆ ಬಿಳಿಯ ವಸ್ತ್ರವನ್ನು.ಜೋಡನ್ನು ತೊಡಿಸಿ. ಉಂಗುರವನ್ನು ಹಾಕಿ ಇವನು ತಪ್ಪು ಹೋಗಿದ್ದನು.ಈಗ ಪಶ್ಚಾತಾಪದಿಂದ ತಿರುಗಿ ಬಂದಿದ್ದಾನೆ.ಇವತ್ತು ಈ ಲೋಕದ ಜನರಾದ ನಾವುಗಳು ನಮ್ಮ ತಪ್ಪುಗಳನ್ನು ಒಪ್ಪಿಕೊಂಡು ದೇವರ ಮುಂದೆ ಬರುವುದಾದರೆ. ಆತನು ನಮಗೋಸ್ಕರ ಹಬ್ಬವನ್ನು. ಔತಣವನ್ನು ಸಿದ್ಧ ಮಾಡುತ್ತಾನೆ. ಇದೆ ಕ್ರಿಸ್ಮಸ್ ಹಬ್ಬದ ಸಾರಾಂಶ ಎಂದು ನುಡಿದರು.
ನವ ನಗರದ ಇರುವಾತನು ಚರ್ಚಿನ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್. ಚರ್ಚಿನ ಸದಸ್ಯರಾದ ರಾಘು ಮದಕಟ್ಟಿ. ಬೀರಪ್ಪ ಕಿನ್ನಾಳ. ಮಹಿಳಾ ಪ್ರತಿನಿಧಿಗಳಾದ ರೇಷ್ಮಾ.ಸಿ. ಅಪ್ಪಣ್ಣವರ್. ತುಕಾರಾಮ್ ಬಿ. ಪಾತ್ರೋಟಿ ಮುಂತಾದವರು ತಮ್ಮ ಕುಟುಂಬ ಪರಿವಾರ ಸಮೇತ ಪಾಲ್ಗೊಂಡಿದ್ದರು.
Comments are closed.