ಪವಾರ್ ಕುಟುಂಬದ ಸಹಕಾರದೊಂದಿಗೆ ಎಸ್ ಎಸ್ ಕೆ ಸಮಾಜದ  ಸಾಮೂಹಿಕ ಉಪನಯನ ಕಾರ್ಯಕ್ರಮ

Get real time updates directly on you device, subscribe now.

ಭಾಗ್ಯನಗರ : ಭಾಗ್ಯನಗರದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ದಿನಾಂಕ 22 12 2023 ರಂದು ಶುಕ್ರವಾರ ಬೆಳಿಗ್ಗೆ 9.45ಕ್ಕೆ ಭುಜಂಗಸಾ ಸ್ವಾ ಮಿಸಾ ಪವಾರ್ ಹಾಗೂ ಶಾಂತಾಬಾಯಿ ಭುಜಂಗಸಾ ಪವಾರ್ ಇವರ ಸ್ಮರಣಾರ್ಥ ಇವರ ಮಕ್ಕಳಾದ  ನಾಗರಾಜ್ ಪವಾರ್ ಹಾಗೂ ದಿನೇಶ್ ಪವಾರ್ ಹಾಗು ವಸಂತ್ ಪವಾರ್ ಇವರ ಕುಟುಂಬ ವರ್ಗ ಸಹಿತವಾಗಿ ಎಸ್ ಎಸ್ ಕೆ ಸಮಾಜದ ಸಹಯೋಗದೊಂದಿಗೆ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಸುಮಾರು 66 ಗಂಡು ಮಕ್ಕಳಿಗೆ ಯಜ್ಞೋಪವಿತ ಜನಿವಾರ ಧಾರಣೆ ಯನ್ನು ಹೋಮ ಹವನಗಳ ಹಾಗೂ ಮಂತ್ರೋಪದೇಶ ಪಟಣವನ್ನು ಮಾಡಿಸಿ ಉಪನಯನ ಕಾರ್ಯಕ್ರಮವನ್ನು ಸಾವಿರಾರು ಸಮಾಜದ ಗಣ್ಯರು ಅತಿಥಿಗಳು ಮತ್ತು ಪರಿವಾರ ವೃಂದ ಆಗಮಿಸಿ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಶೀರ್ವಾದದೊಂದಿಗೆ ನಡೆಸಿಕೊಟ್ಟರು.

ಉಪನಯನದ ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಪಾದಯಾತ್ರೆಗಳನ್ನು ಮಾಡಿ ಜಗದಂಬಾ ದೇವಸ್ಥಾನದಲ್ಲಿ ಸಾಲಾಗಿ ಕೂಡಿಸಿ ಬಂದಂತಹ ಸಾರ್ವಜನಿಕರು ವಟುಗಳಿಗೆ ಆಶೀರ್ವದಿಸಿದರು ಎಗ್ನೋಪೋವಿತ ಮುಖಾಂತರ ನಡೆಸಿದ ಸನಾತನ ಧರ್ಮದ ಮುಂಜೀವಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಎಸ್ ಎಸ್ ಕೆ ಸಮಾಜದ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಎನ್ ವಿ ಮೇಘರಾಜ್ ಹಾಗೂ ಎಲ್ಲ ಪದಾಧಿಕಾರಿಗಳು ತರುಣ ಸಂಘದ ಅಧ್ಯಕ್ಷರಾದ ಪರಶುರಾಮ್ ಎಚ್ ಪವಾರ್ ಹಾಗೂ ಪದಾಧಿಕಾರಿಗಳು ಮಹಿಳಾಮಂಡಳದ ಅಧ್ಯಕ್ಷರಾದ ಲಕ್ಷ್ಮೀಬಾಯಿ  ನಾಗುಸಾ ಮೇಘರಾಜ್ ಹಾಗೂ ಪದಾಧಿಕಾರಿಗಳು ಗೆಳೆಯರ ಬಳಗ ಕೆ ಎಸ್ ಎಸ್ ಬಳಗ ಹಾಗೂ ಎಸ್ ಎಸ್ ಕೆ ಸಮಾಜದ ಎಲ್ಲ ಪರಿವಾರದಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿಸಿಕೊಟ್ಟರು ಎಲ್ಲ ಸಂಘಟನೆಗಳಿಗೆ ಹಾಗೂ ಸಮಾಜದ ಪರಿವಾರವೊಂದಕ್ಕೆ ನಾಗರಾಜ್ ಬಿ ಪವಾರ್ ಹಾಗೂ ಸಹೋದರರು ಅಭಿನಂದನೆಗಳನ್ನು ಸಲ್ಲಿಸಿದರು ಕಾರ್ಯಕ್ರಮವನ್ನು ಆಯೋಜಿಸಿದ ಪ ವಾರ್ ಕುಟುಂಬ ವರ್ಗಕ್ಕೆ ಸಮಾಜವು ಅಭಿನಂದನೆಯನ್ನು ಸಲ್ಲಿಸಿತು ಶ್ರೀ ಜಗದಂಭಾ ದೇವಿ ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸಲಾಯಿತು

Get real time updates directly on you device, subscribe now.

Comments are closed.

error: Content is protected !!