ಹನುಮಾಮಾಲಾ ಕಾರ್ಯಕ್ರಮ  ಪಾರ್ಕಿಂಗ್ ಹಾಗೂ ಬಂದೋಬಸ್ತ್ ವ್ಯವಸ್ಥೆ-SP ಯಶೋಧಾ ವಂಟಗೋಡಿ

Get real time updates directly on you device, subscribe now.

ಆಂಜನೇಯ ಬೆಟ್ಟದಲ್ಲಿ ಹನುಮಮಾಲಾ ಕಾರ್ಯಾಕ್ರಮದ ನಿಮಿತ್ಯ ಡಿ.23 ಮತ್ತು 24 ರಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಶ್ರೀ ಅಂಜನಾದ್ರಿ ಬೆಟ್ಟಕ್ಕೆ ಬರುವ ಹನುಮ ಮಾಲಾಧಾರಿಗಳು ಮತ್ತು ಭಕ್ತಾದಿಗಳು ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಮಾಡಲಾಗಿರುವ ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಅಂಜನಾದ್ರಿ ಬೆಟ್ಟಕ್ಕೆ ಹೋಗಲು ಕೆ.ಕೆ.ಆರ್.ಟಿ.ಸಿ. ಯಿಂದ ಮಿನಿ ಬಸ್‌ಗಳ ವ್ಯವಸ್ಥೆಯನ್ನು ಮಾಡಿದ್ದು, ಆ ಬಸ್‌ಗಳ ಮೂಲಕ ದೇವಾಲಯಕ್ಕೆ ತೆರಳಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಹೇಳಿದರು.
ಗುರುವಾರದಂದು ಗಂಗಾವತಿ ಉಪ ವಿಭಾಗ ಕಚೇರಿಯಲ್ಲಿ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಕುರಿತು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹನುಮಮಾಲಾ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳು, ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌ಗಾಗಿ ನಿರ್ದಿಷ್ಠ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಸ್ ಹಾಗೂ ಭಾರಿ ವಾಹನಗಳಿಗೆ, ಕ್ರೂಷರ್ ಹಾಗೂ ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳ ನಿಗದಿಪಡಿಸಲಾಗಿದೆ.
ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟ, ಬೆಳಗಾವಿ, ವಿಜಯಪುರ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟç ರಾಜ್ಯಗಳಿಂದ ಶ್ರೀ ಅಂಜನಾದ್ರಿ ಬೆಟ್ಟಕ್ಕೆ ಭಾರಿ ವಾಹನಗಳಾದ ಬಸ್, ಲಾರಿ, ಕ್ಯಾಂಟರ್‌ಗಳು ಬೂದಗುಂಪಾ ಕ್ರಾಸ್, ಆರ್.ಟಿ.ಓ ಸರ್ಕಲ್, ಹೊಸಪೇಟೆ, ಕಮಲಾಪುರ, ಬುಕ್ಕಸಾಗರ, ಕಡೆಬಾಗಿಲು ಮಾರ್ಗವಾಗಿ ಆನೆಗುಂದಿಗೆ ಬಂದು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುವ ಆನೆಗುಂದಿ ಗ್ರಾಮದ ಆನೆಗುಂದಿ ಉತ್ಸವ ಸ್ಥಳದಲ್ಲಿ ಹನುಮ ಮಾಲಾಧಾರಿಗಳು ಮತ್ತು ಭಕ್ತಾದಿಗಳು ಬಸ್ ಮತ್ತು ಭಾರಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಅಂಜನಾದ್ರಿ ಬೆಟ್ಟಕ್ಕೆ ಹೋಗಬೇಕು. ವಿವಿಧ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟç ರಾಜ್ಯಗಳಿಂದ ಬರುವ ಕ್ರೂಷರ್, ಮಿನಿ ಬಸ್, ಕಾರು ಜೀಪು, ಟೆಂಪೋ ಟ್ರಾವೆಲ್ಸ್ಗಳು ಬೂದಗುಂಪಾ ಕ್ರಾಸ್, ಆರ್.ಟಿ.ಓ ಸರ್ಕಲ್, ಅಗಳಕೇರಾ, ಶಿವಪುರ ಮಾರ್ಗವಾಗಿ ಸಣಾಪೂರ ಹಾಗೂ ಹನುಮನಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಿ ಅಂಜನಾದ್ರಿ ಬೆಟ್ಟಕ್ಕೆ ಹೋಗಬೇಕು ಎಂದು ಅವರು ತಿಳಿಸಿದರು.
ಬೆಂಗಳೂರ, ಮಂಗಳೂರ, ದಾವಣಗೆರೆ, ತುಮಕೂರ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಿಂದ ಅಂಜನಾದ್ರಿ ಬೆಟ್ಟಕ್ಕೆ ಬಸ್ ಮತ್ತು ಭಾರಿ ವಾಹನಗಳ ಮೂಲಕ ಬರುವ ಹನುಮ ಮಾಲಾಧಾರಿಗಳು ಮತ್ತು ಭಕ್ತಾದಿಗಳು ಹೊಸಪೇಟೆ, ಕಮಲಾಪೂರ, ಬುಕ್ಕಸಾಗರ, ಕಡೆಬಾಗಿಲು ಮಾರ್ಗವಾಗಿ ಆನೆಗುಂದಿಗೆ ಬಂದು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುವ ಆನೆಗುಂದಿ ಗ್ರಾಮದ ಆನೆಗುಂದಿ ಉತ್ಸವ ಸ್ಥಳದಲ್ಲಿ ಬಸ್ ಮತ್ತು ಭಾರಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಅಂಜನಾದ್ರಿ ಬೆಟ್ಟಕ್ಕೆ ಹೋಗಬೇಕು ಎಂದು ಅವರು ತಿಳಿಸಿದರು.
ಬೀದರ, ಕಲಬುರಗಿ, ಯಾದಗಿರಿ, ರಾಯಚೂರ, ಬಳ್ಳಾರಿ ಜಿಲ್ಲೆಗಳಿಂದ ಅಂಜನಾದ್ರಿ ಬೆಟ್ಟಕ್ಕೆ ಬಸ್, ಲಾರಿ, ಕ್ರೂಷರ್, ಕಾರ್ ಮತ್ತು ದ್ವಿಚಕ್ರ ವಾಹನಗಳ ಮೂಲಕ ಬರುವ ಹನುಮ ಮಾಲಾಧಾರಿಗಳು ಮತ್ತು ಭಕ್ತಾದಿಗಳು ಗಂಗಾವತಿ ಮಹಾರಾಣಾ ಪ್ರತಾಪ ಸರ್ಕಲ್, ಕಂಪ್ಲಿ ವೃತ್ತ, ಕನಕದಾಸ ವೃತ್ತ, ನೀಲಕಂಠೇಶ್ವರ ವೃತ್ತ, ಬಸ್‌ಸ್ಟಾö್ಯಂಡ್, ಕಡೇಬಾಗಿಲು ಮಾರ್ಗವಾಗಿ ಆನೆಗುಂದಿಗೆ ಬಂದು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುವ ಆನೆಗುಂದಿ ಗ್ರಾಮದ ಆನೆಗುಂದಿ ಉತ್ಸವ ಸ್ಥಳದಲ್ಲಿ ಬಸ್ ಮತ್ತು ಭಾರಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಸೂಚಿಸಲಾಗಿದೆ. ಹಾಗೂ ಕ್ರೂಷರ್, ಕಾರ್ ಮತ್ತು ದ್ವಿಚಕ್ರ ವಾಹನಗಳ ಮೂಲಕ ಬಂದ ಹನುಮ ಮಾಲಾಧಾರಿಗಳು ಮತ್ತು ಭಕ್ತಾದಿಗಳಿಗೆ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಮಾಡಲಾಗಿರುವ ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಅಂಜನಾದ್ರಿ ಬೆಟ್ಟಕ್ಕೆ ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಕಡೆಬಾಗಿಲು, ಆನೆಗೊಂದಿ ಕಡೆಯಿಂದ ಬರುವ ವಾಹನಗಳಿಗೆ ಆನೆಗುಂದಿ ಪೆಟ್ರೋಲ್ ಬಂಕ್ ಹತ್ತಿರ,  ಕ್ರೂಷರ್/ಕಾರ್ ಪಾರ್ಕಿಂಗ್ ಪಾಯಿಂಟ್-01,   ಆನೆಗುಂದಿ ಉತ್ಸವದ ಸ್ಥಳದ ಹತ್ತಿರ ಬಸ್ ಮತ್ತು ಮಿನಿ ಬಸ್ ಪಾರ್ಕಿಂಗ್ ಪಾಯಿಂಟ್-02,  ಡಿ.ಪಿ. ಕ್ರಾಸ್ ಹಿಂದೆ, ತಳವಾರಘಟ್ಟ ರಸ್ತೆ   ಕ್ರೂಷರ್/ಕಾರ್ ಪಾರ್ಕಿಂಗ್ ಪಾಯಿಂಟ್-03, ಡಿ.ಪಿ. ಕ್ರಾಸ್ ದುರ್ಗಾಬೆಟ್ಟ ರಸ್ತೆಯ ಮಂಟಪದ ಮುಂದಿನ ಕ್ರೂಷರ್/ಕಾರ್ ಪಾರ್ಕಿಂಗ್ ಪಾಯಿಂಟ್-04, ಸೇಮ್ ಪ್ಲೆಸ್ ರೆಸ್ಟೋರೆಂಟ್ ಹಿಂದೆ ಕ್ರಷರ್/ಕಾರ್ ಪಾರ್ಕಿಂಗ್ ಪಾಯಿಂಟ್-05, ಪಂಪಾಸರೋವರ  ಕ್ರಾಸ್ ಹತ್ತಿರ ರಸ್ತೆಯ ಇಲ್ಲೂರ ರಾಮಕೃಷ್ಣ ರವರ ಹೋಲದಲ್ಲಿ  ಕ್ರಷರ್/ಕಾರ್ ಪಾರ್ಕಿಂಗ್ ಪಾಯಿಂಟ್-06, ಬೈಕ್ ರೈಡ್ ಸ್ಥಳದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಪಾಯಿಂಟ್-07, ಗೋವಿಂದಪ್ಪನ ಹೊಲದಲ್ಲಿ ವಿ.ಐ.ಪಿ ಕಾರ ಮತ್ತು ಬೈಕ್ ಪಾರ್ಕಿಂಗ್ ಪಾಯಿಂಟ್-08,  ಅಂಜನಾದ್ರಿ ಬೆಟ್ಟದ ಮುಂದಿರುವ ಒ.ಪಿ ಹತ್ತಿರ ಪಾರ್ಕಿಂಗ್ ಸ್ಥಳದಲ್ಲಿ ಸರಕಾರಿ ವಾಹನ ಮತ್ತು ವಿವಿಐಪಿ ಕಾರ್ ಪಾರ್ಕಿಂಗ್ ಪಾಯಿಂಟ್-09, ಪುನೀತ ವೃತ್ತದ ಹತ್ತಿರ ಪಾರ್ಕಿಂಗ್ ಸ್ಥಳ-15 ( ಕ್ರೂಷರ್/ಕಾರ್) ದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಶಿವಪುರ ಕಡೆಯಿಂದ ಬರುವ ವಾಹನಗಳಿಗೆ ಸರಕಾರಿ ಜಾಗೆ ಶಿವುನ ಗದ್ದೆಯ ಹತ್ತಿರ ಕ್ರೂಷರ್/ಕಾರ್, ಶಿವುನ ಗದ್ದೆಯಲ್ಲಿ ಪಾರ್ಕಿಂಗ್ ಸ್ಥಳ-11 (ಕ್ರೂಷರ್/ಕಾರ್),  ಗ್ರೀನ್ ಸ್ಟೋನ್ ರೇರ್ಸಾಟ್ ನ ಹಿಂದೆ ಪಾರ್ಕಿಂಗ್ ಸ್ಥಳ-12 (ಬೈಕ್ ಪಾರ್ಕಿಂಗ್),  ಆಂಜನಪ್ಪರವರ ಹೊಲದ ಹತ್ತಿರ ಪಾರ್ಕಿಂಗ್ ಸ್ಥಳ-13 (ಕ್ರಷರ್/ಕಾರ್),  ಹನುಮನಹಳ್ಳಿ ನಂತರ ರಾಮರೆಡ್ಡಿ ಹೊಲದಲ್ಲಿ ಪಾರ್ಕಿಂಗ್ ಸ್ಥಳ-14 (ಕ್ರಷರ್/ಕಾರ್) ದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಬುಕ್ಕಸಾಗರ, ಕಡೆಬಾಗಿಲು ಕ್ರಾಸ್, ಆನೆಗುಂದಿ ಹತ್ತಿರದ ಡಿ.ಪಿ ಕ್ರಾಸ್, ಸಣಾಪೂರ ಗ್ರಾಮ ಪಂಚಾಯತ ಹತ್ತಿರ ಹಾಗೂ ಶಿವಪುರ ಕ್ರಾಸ್ ಹತ್ತಿರ ಭಾರಿ ವಾಹನಗಳು ಮತ್ತು ಬಸ್‌ಗಳನ್ನು ಅಂಜನಾದ್ರಿ ಬೆಟ್ಟದ ಕಡೆಗೆ ಬಿಡದಂತೆ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿರುತ್ತದೆ.  ಅಂಜನಾದ್ರಿ ಬೆಟ್ಟಕ್ಕೆ ಕ್ರ‍್ರೂಷರ್, ಕಾರ್ ಮತ್ತು ದ್ವಿಚಕ್ರ ವಾಹನಗಳ ಮೂಲಕ ಬರುವ ಹನುಮ ಮಾಲಾಧಾರಿಗಳು ಮತ್ತು ಭಕ್ತಾಧಿಗಳು ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು 15 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಹನುಮ ಮಾಲಾಧಾರಿಗಳು ಮತ್ತು ಭಕ್ತಾಧಿಗಳಿಗೆ ಸಹಾಯಕ್ಕಾಗಿ ಆಂಜನೇಯ ಬೆಟ್ಟದ ಮುಂಭಾಗದಲ್ಲಿ ಇರುವ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ಹೊರ ಠಾಣೆಯನ್ನು (ಓ.ಪಿ) ತೆರೆಯಲಾಗಿದೆ. ಹನುಮ ಮಾಲಾಧಾರಿಗಳು ಮತ್ತು ಭಕ್ತಾಧಿಗಳಿಗೆ ಅಂಜನಾದ್ರಿ ಬೆಟ್ಟದ ಹಿಂಭಾಗದಲ್ಲಿರುವ ವೇದಪಾಠ ಶಾಲೆಯ ಹತ್ತಿರ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹನುಮ ಮಾಲಾಧಾರಿಗಳು ಮತ್ತು ಭಕ್ತಾಧಿಗಳು ಅಂಜನಾದ್ರಿ ಬೆಟ್ಟದ ಮುಂಭಾಗದ ಮೆಟ್ಟಿಲುಗಳಿಂದ ಏಕಮುಖವಾಗಿ ಹತ್ತುವುದಕ್ಕೆ ಮತ್ತು ಹಿಂಭಾಗದ ಮೆಟ್ಟಿಲುಗಳಿಂದ ಏಕಮುಖವಾಗಿ ಇಳಿಯುವದಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಹನುಮ ಮಾಲಾಧಾರಿಗಳು ಮತ್ತು ಭಕ್ತಾಧಿಗಳು ಬೆಲೆ ಬಾಳುವ ವಸ್ತುಗಳು, ಮೊಬೈಲ್, ಹಣ ಹಾಗೂ ಇನ್ನಿತರ ವಸ್ತುಗಳನ್ನು ಜಾಗೃತಿಯಿಂದ ಇಟ್ಟುಕೊಳ್ಳಬೇಕು. ನಂತರ ಸಂಚಾರ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.  ಅಂಜನಾದ್ರಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಹಳ್ಳಿಗಳು ಸಿ.ಸಿ.ಕ್ಯಾಮರಗಳು ಮತ್ತು ಡ್ರೋಣ್ ಕ್ಯಾಮರಗಳ ಕಣ್ಗಾವಲಿನಲ್ಲಿ ಇರುತ್ತವೆ. ಡಿ.23 ರಿಂದ 24 ರವರೆಗೆ ದಿನದ 24 ಗಂಟೆಯೂ ಪಾಳೆ ಪ್ರಕಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಂದೋಬಸ್ತ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಬಂದೋಬಸ್ತ್ಗಾಗಿ ಒಬ್ಬರು ಎಎಸ್‌ಪಿ, ಇಬ್ಬರು ಡಿವೈಎಸ್ಪಿ, 11 ಸಿಪಿಐ, 25 ಪಿಎಸ್‌ಐ, 46 ಎಎಸ್‌ಐ, 494 ಎಚ್‌ಸಿ/ಪಿಸಿ, 250 ಹೋಮ್ ಗಾರ್ಡ್, 06 ಡಿಆರ್, 02 ಐಆರ್‌ಬಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೊಪ್ಪಳ ಡಿವೈಎಸ್‌ಪಿ ಶರಣಪ್ಪ ಸುಬೇದಾರ, ಗಂಗಾವತಿ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ, ಗಂಗಾವತಿ ನಗರ ಠಾನೆ ಪಿಐ ಪ್ರಕಾಶ ಮಾಳೆ ಸೇರಿದಂತೆ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!