ನನ್ನ ಭಾರತ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಯುವಜನರಿಗೆ ಕರೆ

Get real time updates directly on you device, subscribe now.

: ನನ್ನ ಭಾರತ (ಮೇರಾ ಯುವ ಭಾರತ) ಇದು ಪ್ರಧಾನ ಮಂತ್ರಿಗಳ ಉದ್ದೇಶಿತ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮವು ಅಕ್ಟೋಬರ್ 31 ರಂದು ದೆಹಲಿಯಲ್ಲಿ ಉದ್ಘಾಟನೆಗೊಂಡಿರುತ್ತದೆ.
ವಿಕಸಿತ ಭಾರತ ಕಾರ್ಯಕ್ರಮಕ್ಕೆ, ಯುವಜನರ ಸಬಲೀಕರಣ, ಯುವ ಮುಂದಾಳತ್ವ, ವಿವಿಧ ಅಭಿವೃದ್ಧಿ ಯೋಜನೆಗಳು, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ ಕಾರ್ಯಕ್ರಮಗಳು, ಸಚಿವಾಲಯಗಳ/ಇಲಾಖೆಗಳ ಮಾಹಿತಿಗಳನ್ನು ಈ ಪೋರ್ಟಲ್ ಮೂಲಕ ತಿಳಿದುಕೊಳ್ಳುವುದು ಯುವಜನರಿಗೆ ಮುಖ್ಯವಾಗಿರುತ್ತದೆ ಎಂದು ಕೇಂದ್ರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಸಚಿವರಾದ ಅನುರಾಗ್‌ಸಿಂಘ ಠಾಕೂರ ರವರು ಸಭೆಯ ಮೂಲಕ ತಿಳಿಸಿರುತ್ತಾರೆ.
ಆದ್ದರಿಂದ ನನ್ನ ಭಾರತ ( My Bharat Portal ) ಪೋರ್ಟಲ್‌ನಲ್ಲಿ ಯುವ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮುಕ್ತ ಅವಕಾಶವಿದ್ದು, ಆಸಕ್ತರು ಪೋರ್ಟಲ್  www.mybharat.gov.in     ಗೆ ಲಾಗಿನ್ ಆಗಿ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಅಧಿಕಾರಿ, ನೆಹರು ಯುವ ಕೇಂದ್ರ, ಕೊಪ್ಪಳ, ಮೋ: 08539-230116 ಇಲ್ಲಿಗೆ ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕರಿ ಮಾಂಟು ಪತ್ತಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!