ಸರಕಾರಿ ಕಛೇರಿಗಳನ್ನು ಸರಕಾರಿ ಕಟ್ಟಡಗಳಿಗೆ ಸ್ಥಳಾಂತರ ಹಾಗೂ ಸಿಟಿ ಮಾರ್ಕೇಟ್ ಪ್ರಾರಂಭಿಸಲು ಒತ್ತಾಯಿಸಿ ಸಚಿವರಿಗೆ ಮನವಿ

Get real time updates directly on you device, subscribe now.

ಗಂಗಾವತಿ: ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ  ಶಿವರಾಜ ಎಸ್. ತಂಗಡಗಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಮಿತಿಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಮ್ಯಾಗಳಮನಿಯವರು ಗಂಗಾವತಿ ತಾಲೂಕು ಆದಾಗಿನಿಂದಲೂ ಕೆಲವು ಸರ್ಕಾರಿ ಕಛೇರಿಗಳು ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿವೆ. ಅವುಗಳಲ್ಲಿ ಪ್ರಮುಖವಾದವುಗಳು ಅಬಕಾರಿ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜನಜೀವನ್ ಮಿಷನ್, ನಗರ ಯೋಜನಾ ಪ್ರಾಧಿಕಾರ ಕಛೇರಿಗಳು ಬಾಡಿಗೆ ಕಟ್ಟಡದಲ್ಲಿಯೇ ಇರುವುದರಿಂದ ಸರ್ಕಾರಕ್ಕೆ ಸಾಕಷ್ಟು ನಷ್ಟವುಂಟಾಗಿದೆ. ಇದುವರೆಗೂ ಯಾವ ಶಾಸಕರೂ ಮತ್ತು ಯಾವುದೇ ಸರ್ಕಾರಗಳು ಈ ಕುರಿತು ಕ್ರಮ ಕೈಗೊಂಡಿರುವುದಿಲ್ಲ. ಹಳೆ ತಹಶೀಲ್ ಕಛೇರಿ ಕಟ್ಟಡಗಳ ಸಂಕೀರ್ಣ, ಪಶುಸಂಗೋಪನಾ ಇಲಾಖೆಯ ಕಟ್ಟಡಗಳು ಖಾಲಿ ಇದ್ದು, ಇಲ್ಲಿಗೆ ಸರ್ಕಾರಿ ಕಛೇರಿಗಳನ್ನು ಸ್ಥಳಾಂತರಿಸಬೇಕು. ಜೊತೆಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಸಿ.ಟಿ ಮಾರ್ಕೇಟ್ ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಹಾಗೂ ಸರ್ಕಾರಕ್ಕೂ ಆರ್ಥಿಕ ನಷ್ಟವುಂಟಾಗುವುದರ ಜೊತೆಗೆ ಅಕ್ರಮ/ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈ ಸಿಟಿ ಮಾರ್ಕೇಟ್ ಪ್ರಾರಂಭವಾಗುವುದರಿಂದ ಗಂಗಾವತಿಯ ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗಲಿದೆ. ಕಾರಣ ಶೀಘ್ರದಲ್ಲಿಯೇ ಸಿ.ಟಿ ಮಾರ್ಕೇಟ್ ಪ್ರಾರಂಭಿಸಬೇಕು. ಆದರೆ ಸಿ.ಟಿ ಮಾರ್ಕೇಟ್ ಪ್ರಾರಂಭಿಸಲು ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಸದರಿ ಕಟ್ಟಡವನ್ನು ನಿರ್ಗತಿಕರಿಗೆ, ವಸತಿ ರಹಿತರಿಗೆ ಹಸ್ತಾಂತರಿಸಲು ಒತ್ತಾಯಿಸಿದರು, ಬೇಡಿಕೆಗಳ ಬಗ್ಗೆ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
 ಈ ಸಂದರ್ಭದಲ್ಲಿ ಅತಿಥಿ ಸಮಿತಿಯ ಸದಸ್ಯರಾದ ಜಡಿಯಪ್ಪ ಹಂಚಿನಾಳ, ಕೃಷ್ಣ ಮೆಟ್ರಿ, ದುರುಗೇಶ ಹೊಸಳ್ಳಿ, ಪಂಪಾಪತಿ ಕುರಿ, ರಾಮಣ್ಣ ಗಂಗಾವತಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!