ಮಾದಿಗ/ಚಲುವಾದಿ ಸಮಾಜಗಳಿಗೆ ರುದ್ರಭೂಮಿ ಮಂಜೂರಾತಿಗಾಗಿ ಒತ್ತಾಯ
ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ
– ಯಲ್ಲಪ್ಪ ಕಟ್ಟಿಮನಿ.
* * * * *
ಗಂಗಾವತಿ: ತಾಲೂಕಿನ ಮರಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಾಗರಹಳ್ಳಿ, ವಿನೋಬನಗರ, ಚಿಕ್ಕಜಂತಕಲ್ ಗ್ರಾಮಗಳ ಮಾದಿಗ ಹಾಗೂ ಚಲುವಾದಿ ಸಮಾಜಗಳಿಗೆ ರುದ್ರಭೂಮಿಯನ್ನು ಮಂಜೂರು ಮಾಡಲು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ಗಂಗಾವತಿ ತಹಶೀಲ್ದಾರರಿಗೆ ಒತ್ತಾಯಿಸಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಈ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಮಾದಿಗ ಮತ್ತು ಚಲುವಾದಿ ಸಮಾಜದ ಜನಾಂಗದವರು ವಾಸ ಮಾಡುತ್ತಾ ಬಂದಿದ್ದು, ಇಂದಿನವರೆಗೆ ಅಧಿಕೃತವಾಗಿ ರುದ್ರಭೂಮಿ ಇಲ್ಲದ ಕಾರಣ ತುಂಗಭದ್ರಾ ನದಿ ಪಕ್ಕದ ಉಳಿದ ಜಾಗದಲ್ಲಿ ಶವಸಂಸ್ಕಾರ ಮಾಡುತ್ತಾ ಬರುತ್ತಿದ್ದಾರೆ. ನದಿ ತುಂಬಿದ ಸಮಯದಲ್ಲಿ ಶವಸಂಸ್ಕಾರ ಮಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರವಾಹದ ಸಮಯದಲ್ಲಿ ೨-೩ ದಿನಗಳ ಕಾಲ ಶವವನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೬ ವರ್ಷಗಳಾದರೂ ಮೇಲಿನ ಗ್ರಾಮಗಳಲ್ಲಿನ ಮಾದಿಗ ಹಾಗೂ ಚಲುವಾದಿ ಸಮಾಜಗಳಿಗೆ ಶವಸಂಸ್ಕಾರ ಮಾಡಲು ರುದ್ರಭೂಮಿ ಇಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಖೇದ ವ್ಯಕ್ತಪಡಿಸಿ, ಕೂಡಲೇ ತಾಲೂಕಾಡಳಿತ ಈ ಗ್ರಾಮಗಳ ಮಾದಿಗ/ಚಲುವಾದಿ ಸಮಾಜಗಳಿಗೆ ರುದ್ರಭೂಮಿಗಾಗಿ ಭೂಮಿಯನ್ನು ಮಂಜೂರು ಮಾಡಲು ಒತ್ತಾಯಿಸಲಾಗಿದೆ ಎಂದು ತಿಳಿಸುತ್ತಾ, ಅಲ್ಲದೇ ಭಟ್ಟರಹಂಚಿನಾಳ ಸೀಮಾ ಸ.ನಂ: ೬೮ ವಿಸ್ತೀರ್ಣ ೦೧-೦೦ ಎಕರೆ ಭೂಮಿ ಗಾಳೆಮ್ಮಗುಡಿ ಕ್ಯಾಂಪಿನ ಮಾದಿಗ ಸಮಾಜದ ರುದ್ರಭೂಮಿಯನ್ನು ಸರ್ವೇ ಮಾಡಿ ಸುತ್ತಲೂ ಫಿನ್ಸ್ ಅಳವಡಿಸಿ ಹದ್ದುಬಸ್ತು ಮಾಡಿಕೊಡಬೇಕೆಂದು ತಹಶೀಲ್ದಾರರಲ್ಲಿ ಒತ್ತಾಯಿಸಲಾಗಿದೆ ಎಂದು ತಿಳಿಸಿದರು ಮತ್ತು ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಚಿಕ್ಕಜಂತಕಲ್, ವಿನೋಬನಗರ, ನಾಗರಹಳ್ಳಿ ಗ್ರಾಮಗಳಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪಾದಯಾತ್ರೆ ನಡೆಸುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ರಮೇಶ ಅಂಗಡಿ, ಸುಮಿತ್ರಕುಮಾರ, ಯಂಕೋಬ ಮೈಲಾಪುರ, ಹನುಮೇಶ ಸುಳೇಕಲ್, ನೀಲಪ್ಪ ಡಣಾಪುರ, ಮರಿಸ್ವಾಮಿ ಹೊಸಕೇರಿಡಗ್ಗಿ, ನಾಗರಾಜ ಕಾಮದೊಡ್ಡಿ ವಿನೋಬನಗರ, ದೇವದಾಸ ಚಿತ್ತಲಕುಂಟ, ಮಂಜುನಾಥ ಬಡಿಗೇರ, ಅಶೋಕ ವೆಂಕಟಗಿರಿ, ಮರಿಸ್ವಾಮಿ ಸಣಾಪುರ, ಮಹಾದೇವ ಕಾಟಾಪುರ, ಯಮನೂರ ಈಳಿಗನೂರು, ವೀರೇಶ ದೇವರಮನಿ, ನಾಗರಾಜ ಗೋಡಿನಾಳ, ಶಿವಲಿಂಗ ಭಂಡಾರಿ, ಸಂತೋಷ ನಾಗೇನಹಳ್ಳಿ ಸೇರಿದಂತೆ ಗ್ರಾಮಗಳ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.
Comments are closed.