ಸಂತ ಶ್ರೇಷ್ಠ ಕನಕದಾಸರ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತ

Get real time updates directly on you device, subscribe now.

: ನುಡಿದಂತೆ ನಡೆದು ಬಾಳಿದ ಸಂತ ಕವಿ, ಭಕ್ತ ಕನಕದಾಸರ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಅವರು ಹೇಳಿದರು.
ಜಿಲ್ಲಾಡಳಿತದಿಂದ ನವೆಂಬರ್ 30 ರಂದು ನಗರದ ಸಾಹಿತ್ಯ ಭವನದಲ್ಲಿ ನಡೆದ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂತಶ್ರೇಷ್ಠ ಭಕ್ತ ಕನಕದಾಸರು ಮತ್ತು ಮಹರ್ಷಿ ವಾಲ್ಮೀಕಿ ಇಬ್ಬರು ಮಹನೀಯರು ಸಹ ಹಿಂದುಳಿದ ಸಮುದಾಯದ ಜನರಿಗೆ ಎರಡು ನಕ್ಷತ್ರಗಳಿದ್ದಂತೆ ಎಂದು ಬಣ್ಣಿಸಿದ ಅವರು, ಮಾನವ ಜನುಮ ದೊಡ್ಡದು ಇದನು ಹಾನಿ ಮಾಡಿಕೊಳ್ಳಬೇಡಿರಿ ಎಂದು ಹಾಡಿ, ಸಮಾಜದ ಅಂಕುಡೊAಕುಗಳನ್ನು ತಿದ್ದುವಲ್ಲಿ ಭಕ್ತ ಕನಕದಾಸರು ಶ್ರಮಿಸಿದರು. ಸಮಾಜದಲ್ಲಿ ತಾವು ಕಂಡುAಡ ನೋವು ಅವಮಾನಗಳನ್ನೇ ಕಥೆ ಕವಿತೆಗಳನ್ನಾಗಿಸಿದರು. ಕನಕದಾಸರು ರಚಿಸಿದ ಸಾಹಿತ್ಯ ಹಿಂದಿ, ಇಂಗ್ಲೀಷ್ ಸೇರಿದಂತೆ 14 ಭಾಷೆಗಳಿಗೆ ಭಾಷಾಂತರವಾಗಿರುವುದು ಅವರ ಸಾಹಿತ್ಯದ ಘನತೆಯನ್ನು ತೋರುತ್ತದೆ ಎಂದು ತಿಳಿಸಿದರು.
ಮುಖಂಡರಾದ ರಾಜಶೇಖರ ಹಿಟ್ನಾಳ ಅವರು ಮಾತನಾಡಿ, ಹಾಲುಮತ ಸಮುದಾಯದವರು ಸಹ ಮಾತಿಗೆ ತಕ್ಕಂತೆ ನಡೆಯುತ್ತಾರೆ. ಅಂತಹ ಪ್ರಾಮಾಣಿಕತೆ ಮತ್ತು ವಿಶ್ವಾಸವನ್ನು ಮುಂದುವರೆಸಿಕೊAಡು ಹೋಗಬೇಕು. ಶಿಕ್ಷಣ ಮತ್ತು ಒಗ್ಗಟ್ಟಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಸಲಹೆ ಮಾಡಿದರು.
ಹೊಸಪೇಟೆಯ ಡಾ.ಶಂಕರ ಆನಂದಸಿAಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ನಾಗಣ್ಣ ಕಿಲಾರಿ ಅವರು ವಿಶೇಷ ಉಪನ್ಯಾಸ ನೀಡಿ, ಬದುಕಿನುದ್ದಕ್ಕೂ ಕನಕದಾಸರು ನೋವು ಅವಮಾನವನ್ನು ಉಂಡೇ ಬಾಳಿದರು. ಅದನ್ನೇ ಬರೆದರು. ಹರಿಭಕ್ತಸಾರ, ಮೋಹನ ತರಂಗಿಣಿ, ನಳ ಚರಿತ್ರೆ ಸೇರಿದಂತೆ ವಿವಿಧ ಪ್ರಮುಖ ಕೃತಿಗಳಲ್ಲಿ ಕನಕದಾಸರ ಜೀವನಾನುಭವ ಹಾಸುಹೊಕ್ಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ಸುನೀಲ್ ವಂಟಗೋಡಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರರಾದ ವಿಠ್ಠಲ್ ಚೌಗಲಾ, ತಾಪಂ ಕಾರ್ಯನಿರ್ವಹಣಾಧಿಕಾರು ದುಂಡಪ್ಪ ತುರಾದಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಶ್ರೀಶೈಲ ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ, ಮುಖಂಡರಾದ ಕೆ.ಬಸವರಾಜ ಹಿಟ್ನಾಳ, ಜನಾರ್ಧನ ಹುಲಗಿ, ಭರಮಪ್ಪ ಹಟ್ಟಿ, ಹನುಮೇಶ ಮುರಡಿ, ಹನುಮಂತ ಅರಸೀಕೆರೆ ಸೇರಿದಂತೆ ಇತರರು ಇದ್ದರು. ಸಿ.ವಿ.ಜಡಿಯವರ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!