ಅರುಣಕುಮಾರ ಎ.ಜಿಯವರಿಗೆ ವಿ.ಎಸ್.ಕೆ ವಿವಿಯಿಂದ ಪಿಎಚ್.ಡಿ ಪದವಿ
ಕೊಪ್ಪಳ;- ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕಳೆದ ಹತ್ತು ವರ್ಷಗಳಿಂದ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅರುಣಕುಮಾರ ಎ.ಜಿಯವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ದೊರಕಿದೆ. ‘ಎ ಸ್ಟಡಿ ಆಫ್ ಪೋಸ್ಟ್ಕಲೋನಿಯಲ್ ಡಿಸ್ಕರ್ಸಿವ್ ಸ್ಟಾçಟಜಿಸ್ ಇನ್ ದ ಫಿಕ್ಷನ್ ಆಫ್ ಭಾರತಿ ಮುಖರ್ಜಿ’ ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿದ್ದರು. ಸದರಿ ವಿಷಯಕ್ಕೆ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾದ ಡಾ.ರಾಬರ್ಟ್ ಜೋಸ್‌ರವರು ಮಾರ್ಗದರ್ಶನ ಮಾಡಿದ್ದರು. ಪಿಎಚ್.ಡಿ ಪದವಿ ಪಡೆದ ಅರುಣಕುಮಾರ ಎ.ಜಿಯವರನ್ನು ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ದಕ ಸಂಸ್ಥೆಯ ಆಡಳಿತ ಮಂಡಳಿ, ಮಹಾವಿದ್ಯಾಲಯದ ಪ್ರಾಚಾರ್ಯರು, ಉಪನ್ಯಾಸಕರು, ಸಕಲ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಬಳಗ ಅಭಿನಂದಿಸಿದ್ದಾರೆ.
Comments are closed.