ಲೋಕ ಅದಾಲತ್ ಬಗ್ಗೆ ಕಕ್ಷಿದಾರರಲ್ಲಿ ತಿಳುವಳಿಕೆ ಅಗತ್ಯ : ಹಿರಿಯ ಸಿವಿಲ್ ನ್ಯಾಯಾಧೀಶರು ರಮೇಶ್ ಗಾಣಿಗೇರ್

ನ್ಯಾಯಾಲಯಗಳಲ್ಲಿ ನಡೆಯುವ ಲೋಕ ಅದಾಲತ್ ಗಳ ಬಗ್ಗೆ ಕಕ್ಷಿದಾರರಲ್ಲಿ ತಿಳುವಳಿಕೆ ಅಗತ್ಯವಾಗಿದೆ. ಲೋಕ ಅದಾಲತ್ ಮೂಲಕ ವ್ಯಾಜ್ಯಗಳನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳುವುದರಿಂದ ಕಕ್ಷಿದಾರರಲ್ಲಿ ಸಾಮರಸ್ಯ ಉಂಟಾಗುತ್ತದೆ ಎಂದು ತಿಳಿಸಿದರು.
ದಿನಾಂಕ 29-11-23 ರಂದು ಗ್ರಾಮೀಣ ಭಾರತಿ 90.4ಎಫ್ಎಂ ರೇಡಿಯೋ ಕೇಂದ್ರಕ್ಕೆ ಭೇಟಿ ನೀಡಿ, ಮೊದಲ ಬಾರಿ ರೇಡಿಯೋ ಮೂಲಕ ಲೋಕ ಅದಾಲತ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.
ಡಿ.09ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದರು.
ಲೋಕ ಅದಾಲತ್ ಕುರಿತಾಗಿ ರೇಡಿಯೋ ಮೂಲಕ ವಿಶೇಷ ಮಾಹಿತಿಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ರಮೇಶ್ ಗಾಣಿಗೇರ್ ಅವರು ಹಂಚಿಕೊಂಡರು.
ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಹೆಚ್ಎಂ ಮಂಜುನಾಥ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಅದಾಲತ್ ಗಳು ಯಶಸ್ವಿಯಾಗಬೇಕಾದರೆ ಕಕ್ಷಿದಾರರ ಸಹಕಾರ ಮುಖ್ಯವಾಗಿರುತ್ತದೆ. ಲೋಕ ಅದಾಲತ್ ಮೂಲಕ ವ್ಯಾಜ್ಯಗಳನ್ನು ಪರಿಹರಿಸಿಕೊಂಡರೆ ಕಕ್ಷಿದಾರರಿಗೆ ಬಹಳಷ್ಟು ಅನುಕೂಲವಾಗಲಿದೆ. ಮರೆಯದೆ ಡಿ.09ರಂದು ಆಯೋಜಿಸಲಾಗಿರುವ ಲೋಕ ಅದಾಲತ್ ನಲ್ಲಿ ಭಾಗವಹಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿಸಿದರು.
ಈ ವೇಳೆ ರೇಡಿಯೋ ನಿಲಯದ ನಿರ್ದೇಶಕರಾದ ರಾಘವೇಂದ್ರ ತೂನ, ನಿಲಯದ ವ್ಯವಸ್ಥಾಪಕಿ ಲಾವಣ್ಯ ಅಂಚಕಟ್ಲು ಇದ್ದರು.
Comments are closed.