ಮಕ್ಕಳಿಗೆ ವಿದ್ಯಾರ್ಥಿ ವೇತನ ಕಡಿತ ಆದೇಶ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

Get real time updates directly on you device, subscribe now.

ಕೊಪ್ಪಳ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ  ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಕೊಪ್ಪಳ ತಾಲೂಕು ಕಾರ್ಮಿಕ ಅಧಿಕಾರಿಗಳಾದ ಶಿವಶಂಕರ ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಕಾರ್ಮಿಕ ಸಚಿವರು ಮತ್ತು ಕಾರ್ಮಿಕ ಆಯುಕ್ತರು  ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರ ಶರಣು ಗಡ್ಡಿ ಮಾತನಾಡುತ್ತ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಮಕ್ಕಳಿಗೆ ಪ್ರತಿ ವರ್ಷ ನೀಡುತ್ತಿದ್ದ ಶೈಕ್ಷಣಿಕ ಸಹಾಯ ಧನವನ್ನು ಕಳೆದ 2 ವರ್ಷಗಳಿಂದ  ಶೈಕ್ಷಣಿಕ  ಸಹಾಯಧನವನ್ನು ನೀಡಿಲ್ಲ . ಮೇಲಾಗಿ ಇದೀಗ ಎಲ್ಲ ತರಗತಿಗಳ ಶೈಕ್ಷಣಿಕ ಧನಸಹಾಯವನ್ನು ಅತೀವ ಕಡಿಮೆ ಮಾಡಿರುವುದು ಅತ್ಯಂತ ವಿಷಾದನೀಯ. ಈ ಕುರಿತು AIUTUC ಒಳಗೊಂಡಂತೆ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು 20 ಜುಲೈ 2023 ರಂದು ಮಾನ್ಯ ಸಚಿವರೊಂದಿಗೆ ಹಾಗೂ ದಿನಾಂಕ 21 ಆಗಸ್ಟ್ 2023 ರಂದು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಲಾಗಿತ್ತು . ಈ ಸಭೆಗಳಲ್ಲಿ ಕಾರ್ಮಿಕ ಸಂಘಟನೆಗಳ ನಾಯಕರು , 2 ವರ್ಷಗಳಿಂದ ಶೈಕ್ಷಣಿಕ ಸಹಾಯಧನ ಬಿಡುಗಡೆ ಆಗದಿರುವುದು ಒಳಗೊಂಡಂತೆ ಇನ್ನಿತರ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸಿ ತಮ್ಮ ಅಹವಾಲುಗಳನ್ನು ಹೇಳಿದರು . ಮುಂದುವರೆದು ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಬೆಂಬಲ ಹಾಗೂ ಸಲಹೆಗಳನ್ನು ಸಹ ನೀಡಿದರು . ಆದರೆ ಇದು ಯಾವುದನ್ನು ಪರಿಗಣಿಸದೆ ಮಂಡಳಿಯು ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡು , ಎಲ್ಲಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ – ಶೈಕ್ಷಣಿಕ ಸಹಾಯಧನವನ್ನು ಕಡಿತಗೊಳಿಸಿ ಆದೇಶ ಹೊರಡಿಸಿರುವುದು ಖಂಡನೀಯ. ಆದರಿಂದ ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು AIUTUC ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ( ರಿ ) ಕೊಪ್ಪಳ ಜಿಲ್ಲಾ ಸಮಿತಿ ಸರ್ಕಾರವನ್ನು ಒತ್ತಾಯಿಸುತ್ತದೆ.ಸರ್ಕಾರ ಈ ಆದೇಶ ಈ ಪಡೆಯದೆ ಇದ್ದರೆ ನಿರ್ಧಾರದ ಪ್ರಕಾರ ಇದೇ ತಿಂಗಳು 29ನೇ ತಾರೀಕಿಗೆ ಬೆಂಗಳೂರಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟ ಆಯುಕ್ತರ ಕಚೇರಿ ಮುಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ  ಮುಖಂಡರುಗಳಾದ ರಾಮಲಿಂಗ ಶಾಸ್ತ್ರಿಗಳು, ಕುಮಾರ್ ಹುಲಿಗಿ, ನಾಗರಾಜ್, ಚಂದ್ರಶೇಖರ್, ಸೋಮಶೇಖರ್, ವಿಶ್ವ,ಹಾಗೂ ಮುಂತಾದವರು ಭಾಗವಹಿಸಿದ್ದರು.

ಬೇಡಿಕೆಗಳು
1 ) ಶೈಕ್ಷಣಿಕ ಸಹಾಯಧನವನ್ನು ಕಡಿತಗೊಳಿಸಿ ಹೊರಡಿಸಿರುವ ಆದೇಶವನ್ನು ಕೈಬಿಡಿ !
2 ) ಶೈಕ್ಷಣಿಕ ಸಹಾಯಧನ / ವಿದ್ಯಾರ್ಥಿ ವೇತನಕ್ಕೆ ಸಲ್ಲಿಕೆಯಾದ ಅರ್ಜಿಗಳನ್ನು ಕಳೆದ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಳ್ಳಲಾಗಿದೆ . ಮಂಡಳಿಗೆ ಸಲ್ಲಿಕೆಯಾಗಿರುವ ಶೈಕ್ಷಣಿಕ ಸಹಾಯಧನದ ಅರ್ಜಿಗಳನ್ನು ವಿಲೇವಾರಿ ಮಾಡಿ ಕಾರ್ಮಿಕರ ಬ್ಯಾಂಕ್‌ ಖಾತೆಗಳಿಗೆ ಶೈಕ್ಷಣಿಕ ಸಹಾಯಧನದ ಮೊತ್ತವನ್ನು ಕೂಡಲೇ ಪಾವತಿಸಿ !
3 ) ವೈದ್ಯಕೀಯ , ಪಿಂಚಣಿ ಹಾಗೂ ಹೆರಿಗೆ , ಮದುವೆ ಅಂತ್ಯಕ್ರಿಯೆ ಮುಂತಾದವುಗಳಿಗೆ ಸೇರಿದಂತೆ ಹಲವು ಸೌಲಭ್ಯಗಳ ಸಹಾಯಧನದ ಮೊತ್ತವನ್ನು ಸರಿಯಾದ ಸಮಯಕ್ಕೆ ಪಾವತಿಸಿ
4 ) ಹೊಸ ತಂತ್ರಾಂಶಗಳಲ್ಲಿನ ಸಮಸ್ಯೆಗಳನ್ನು ಕೂಡಲೇ ನಿವಾರಿಸಿ  ಎಂದು ಆಗ್ರಹಿಸಿದರು.

Get real time updates directly on you device, subscribe now.

Comments are closed.

error: Content is protected !!