ಆಶ್ರಯ ಯೋಜನೆಯಡಿ ಜಮೀನು ಖರೀದಿ: ಮಾಲೀಕರಿಂದ ಅರ್ಜಿ ಆಹ್ವಾನ
ಕೊಪ್ಪಳ ನಗರಸಭೆ ವತಿಯಿಂದ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ವಾಜಪೇಯಿ ನಗರ ನಿವೇಶನ ಯೋಜನೆ ಅಡಿಯಲ್ಲಿ ವಾಸಕ್ಕೆ ಯೋಗ್ಯವಿರುವ ಖಾಸಗಿ ಜಮೀನು ಖರೀದಿಸಬೇಕಿರುವುದರಿಂದ, ಜಮೀನು ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ನಗರ ಪ್ರದೇಶದಿಂದ ಸುಮಾರು 05 ಕಿ.ಮೀ ಅಂತರದ ಒಳಗೆ ಇರುವ ಜಮೀನುಗಳನ್ನು ಸರ್ಕಾರದ ಆದೇಶದಲ್ಲಿ ನಮೂದಿಸಿದ ದರಗಳ ಪ್ರಕಾರ ಖರೀದಿಸಬೇಕಾಗಿರುತ್ತದೆ. ಆದ ಕಾರಣ ಜಮೀನನ್ನು ಖರೀದಿಗೆ ಕೊಡಲು ಇಚ್ಛೆಯುಳ್ಳ ಜಮೀನುಗಳ ಮಾಲೀಕರು ಚಾಲ್ತಿ ವರ್ಷದ ಪಹಣಿ ಪತ್ರ ಮತ್ತು ಮುಟೇಷನ್ ಪ್ರತಿಗಳು, ಜಮೀನು ನಕ್ಷೆ, ಜಮೀನಿಗೆ ಸಂಬAಧಪಟ್ಟAತೆ ಚಾಲ್ತಿ ಸಾಲಿನವರೆಗೆ ಕರ ಪಾವತಿ ಮಾಡಿದ ಪ್ರತಿ, ಜಮೀನಿಗೆ ಸಂಬAಧಪಟ್ಟAತೆ ಇನ್ನಿತರೆ ಅಗತ್ಯ ದಾಖಲೆಗಳು, ಜಮೀನು ಮಾಲೀಕರ ಭಾವಚಿತ್ರ, ಜಮೀನಿನ ಮಾಲೀಕರ ಆಧಾರ ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿಯೊಂದಿಗೆ ಕಾರ್ಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಡಿಸೆಂಬರ್ 16 ಕೊನೆಯ ದಿನವಾಗಿದೆ. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.