ಮೊಬೈಲ್, ಇಂಟರ್ನೆಟ್, ಇಲ್ಲದೆ ಈ-ಸಮೀಕ್ಷೆ ಕೆಲಸ ಮಾಡಲು ಆಶಾ ಕಾರ್ಯಕರ್ತೆಯರಿಂದ ವಿರೋಧ

Get real time updates directly on you device, subscribe now.

.

  ಕೊಪ್ಪಳ ನಗರ ವೈದ್ಯಧಿಕಾರಿಗಳಾದ ಮಹೇಶ್ ಹಾಗೂ ಆಶಾ ಮೇಲ್ವಿಚಾರಕಾರದ ಸಂದ್ಯಾ ಅವರಿಗೆ  ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಕೊಪ್ಪಳ ನಗರ ಘಟಕದಿಂದ ಮನವಿ ಸಲ್ಲಿಸಲಾಯಿತು.

ಆಶಾ ಕಾರ್ಯಕರ್ತೆಯರಿಗೆ ಈಗ ಕಳೆದ ಕೆಲ ದಿನಗಳಿಂದ ಮೊಬೈಲ್‌ನಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಗಳ ಈ – ಸಮೀಕ್ಷೆ ಮಾಡಲು ಆಶಾಗಳಿಗೆ ತರಬೇತಿ ನೀಡಿ , ಮೊಬೈಲ್ ಆ್ಯಪ್ ಮೂಲಕ ಮಾಡಬೇಕೆಂದು ಒತ್ತಡ ಹೆರಲಾಗುತ್ತಿದೆ . ಮಾನ್ಯ ಅಭಿಯಾನ ನಿರ್ದೇಶಕರು , ಎನ್‌ಎಚ್‌ಎಂ ಹಾಗೂ ಮಾನ್ಯ ಆಯುಕ್ತರು , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ , ಬೆಂಗಳೂರು ಇವರು ದಿ : 18-02-21ರ ಸುತ್ತೋಲೆಯಲ್ಲಿ ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು , ಪಿಎಚ್‌ಸಿಓ ಸಮೀಕ್ಷೆ ಮಾಡಲು ತಿಳಿಸಲಾಗಿದೆ . ಕೊಪ್ಪಳ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾತ್ರ ಒತ್ತಾಯ ಪೂರಕವಾಗಿ ಇಲಾಖೆ ಸಿಬ್ಬಂದಿಗಳು ಹೆದರಿಸಿ ಬೆದರಿಸಿ ಸಮೀಕ್ಷೆ ಮಾಡಲು ಹೇಳಿರುತ್ತಾರೆ . ಮುಖ್ಯವಾಗಿ ಆಶಾಗಳಿಗೆ ಮೊಬೈಲ್ ಮತ್ತು ಡಾಟಾ ನೀಡದೇ ಇರುವುದರಿಂದ ಮಾಡಲು ಆಗುವುದಿಲ್ಲ . ಇನ್ನೂ ಕೆಲ ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ಕೊಟ್ಟರೂ ಸಹ ಮೊಬೈಲ್ ಆ್ಯಪ್‌ಗಳ ಮುಖಾಂತರ ಕೆಲಸ ಮಾಡಲು ಆಗುವುದಿಲ್ಲ . ಸರ್ವೆ ಮಾಡಲು ಹಲವಾರು ತೊಂದರೆಗಳು ಈ ಕೆಳಗಿನಂತೆ ಇವೆ . 1. ಹಲವಾರು ಆಶಾಗಳಿಗೆ ಸ್ಮಾರ್ಟ್ ಫೋನ್ ಇಲ್ಲ . 2. ಕೆಲವು ಆಶಾಗಳಲ್ಲಿ ಮೊಬೈಲ್ ಇದ್ದರೂ ಹೊಸ ಈ ಆಪ್ ಅನ್ನು ಸಪೋರ್ಟ್ ಮಾಡುತ್ತಿಲ್ಲ . 3 . ಈಗಾಗಲೇ ನೀಡಿರುವ CUG sim ನೆಟ್ವರ್ಕ್ ಸಿಗುತ್ತಿಲ್ಲ . 4. ಮೊಬೈಲ್ ಇದ್ದು ಮಾಡಲು ಹೋದಾಗ ಇಂಗ್ಲೀಟ್ನಲ್ಲಿ ಟೈಪ್ ಮಾಡಬೇಕಾಗಿದೆ ಇದರಿಂದ ಕೆಲವರಿಗೆ ಸಾಧ್ಯವಾಗುತ್ತಿಲ್ಲ.
5.ಕೆಲವಡೆ ಬೇರೆ ಸಿಮ್‌ಗೂ ನೆಟ್ವರ್ಕ್ ಸಮಸ್ಯೆಯು ಇದ್ದು ಮಾಡಲು ಆಗುತ್ತಿಲ್ಲ . 6. ಸರ್ವೆ ಮಾಡಲು ಹೋದಾಗ ಮಾಹಿತಿ ಕೊಡಲು ಕೆಲ ಜನರಿಂದ ವಿರೋಧವೂ ಆಗುತ್ತಿದೆ . ಮೇಲಿನ ಸಮಸ್ಯೆಗಳನ್ನು ಪರಿಹರಿಸಿ ಮತ್ತು ಆರೋಗ್ಯ ಇಲಾಖೆಯ ಇತರೆ ಸಿಬ್ಬಂದಿಗಳೊಂದಿಗೆ ಆಶಾ ಕಾರ್ಯಕರ್ತೆಯರು ಸರ್ವೆ ಮಾಡಲು ಸಿದ್ಧರಿರುವರು . ಸಿಬ್ಬಂದಿಗಳ ಜೊತೆ ಹೋಗಿ ಅವರ ಮೊಬೈಲಲ್ಲಿ ಎಲ್ಲಾ ದಾಖಲೆಗಳನ್ನು ದಾಖಲಿಸಲು ಆಶಾ ಕಾರ್ಯಕರ್ತೆಯರು ಸಹಕಾರ ನೀಡುತ್ತಾರೆ . ಮಾನ್ಯ ಅಭಿಯಾನ ನಿರ್ದೇಶಕರು , ಎನ್‌ಎಚ್‌ಎಂ ಹಾಗೂ ಮಾನ್ಯ ಆಯುಕ್ತರು , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ , ಬೆಂಗಳೂರು ಇವರು ದಿ : 18-02-21ರ ಸುತ್ತೋಲೆಯಲ್ಲಿ ತಿಳಿಸಿರುವಂತೆ ಆಶಾ ಕಾರ್ಯಕರ್ತೆಯರು , ಹಾಗೂ ಮೇಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸದ ಪಕ್ಷದಲ್ಲಿ ಕೊಪ್ಪಳ ತಾಲೂಕಿನ ಆಶಾ ಕಾರ್ಯಕರ್ತೆಯರು ಆರೋಗ್ಯ ಮತ್ತು ಪೌಷ್ಟಿಕ ಎಚ್‌ಎನ್‌ಎಸ್ ಈ – ಸಮೀಕ್ಷೆ ಮಾಡಲು ಆಗುವುದಿಲ್ಲ ಕೂಡಲೇ ಈ ಕೆಲಸ ಕೈಬಿಡಲು ಅಗ್ರಹಿಸಲಾಯಿತು. ಈ ಸಂದರ್ಭದಲ್ಲಿಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ ನಗರ ಘಟಕ ಅಧ್ಯಕ್ಷೆ ದ್ರಾಕ್ಷಿಯಣಿ, ಕಾರ್ಯದರ್ಶಿ ಗಳಾದ ರಜಿಯಾ, ಸವಿತಾ, ಮುಖಂಡರಾದ ಲಲಿತ ಹಿರೇಮಠ, ವಿಜಯಲಕ್ಷ್ಮಿ, ರೇಣುಕಾ, ಜ್ಯೋತಿ ಪ್ರೇಮ, ಶೀಲ, ಗಂಗಾ ಎಚ್ ಎಮ್, ಸಂಗೀತ, ಸುನಿತಾ ಪೂರ್ಣಿಮಾ  ನಾಗರತ್ನ, ಮುಂತಾದವರು ಭಾಗವಹಿಸಿದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: