ಬೀದಿವ್ಯಾಪಾರಿಗಳ ಸಂಘದಿಂದ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ
ಗಂಗಾವತಿ: ಜೂನ್-೦೫ ರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ಪ್ರಗತಿಪರ ಬೀದಿವ್ಯಾಪಾರಿಗಳ ಸಂಘದಿಂದ ನಗರದ ಗಾಂಧಿವೃತ್ತದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು
ಈ ಸಂದರ್ಭದಲ್ಲಿ ಕರ್ನಾಟಕ ಪ್ರಗತಿಪರ ಬೀದಿವ್ಯಾಪಾರಿಗಳ ಸಂಘದ ಸದಸ್ಯರುಗಳಾದ ಸೈಯ್ಯದ್ ಬುಡನ್ ಸಾಬ್ (ಇಲಾಹಿ ವಾಚ್), ಸೈಯ್ಯದ್ ಬುರ್‍ಹಾನುದ್ದೀನ್ ಮನ್ನಾಪುರ, ಜೀಲಾನಸಾಬ್, ಮನ್ಸೂರ ಅಲಿಸಾಬ್, ಹುಲುಗಪ್ಪ ಚಪ್ಪರ್, ಭಾಷಾಸಾಬ ಬಾಳೇಕಾಯಿ ಹಾಗೂ ನಗರಸಭೆಯ ವಾಹನ ಚಾಲಕರಾದ ಬಾಬರ್, ರಮೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು ಎಂದು ಸಂಘದ ರಾಜ್ಯ ಸಂಚಾಲಕರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
Comments are closed.