ನಿವೇಶನ, ವಸತಿ ರಹಿತರ ಸಮಗ್ರ ಸಮೀಕ್ಷೆ ನಡೆಸಿ ಮನೆಗಳನ್ನು ಒದಗಿಸಲು ಸಂಸದರಿಗೆ ಮನವಿ.

0

Get real time updates directly on you device, subscribe now.

ಕೊಪ್ಪಳ ವಿಧಾನ ಸಭಾ ಕ್ಷೇತ್ರ
 ಕೊಪ್ಪಳ : ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ಮತ್ತು ವಸತಿ ರಹಿತರ ಸಮಗ್ರ ಸಮೀಕ್ಷೆ ನಡೆಸಿ ಅರ್ಹರಿಗೆ ನಿವೇಶನ ಮತ್ತು ಮನೆಗಳನ್ನು ಒದಗಿಸಲು ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ.ಗಫಾರ್.ಕಾರ್ಯದರ್ಶಿ ತುಕಾರಾಮ್ ಬಿ. ಪಾತ್ರೋಟಿ. ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ನಲವಡೆ. ಸಂಘಟನಾ ಕಾರ್ಯದರ್ಶಿ ಚೈತ್ರಾ ಬುಗಡಿ. ಸಹ ಸಂಘಟನೆ ಕಾರ್ಯದರ್ಶಿ ಗೀತಾ  ಮದಕಟ್ಟಿ ಮುಂತಾದವರು ಸಂಸದ ರಾಜಶೇಖರ್ ಬಿ.ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದರು.
     ಕೊಪ್ಪಳ ನಗರದ ಜಿಲ್ಲಾ ಆಡಳಿತ ಭವನದಲ್ಲಿರುವ ಸಂಸದರ ಕಛೇರಿಯ ಮುಂಭಾಗದಲ್ಲಿ ಸೋಮವಾರ ಸಂಸದ ರಾಜಶೇಖರ್ ಬಿ. ಹಿಟ್ನಾಳ್ ಅವರಿಗೆ ನೀಡಿದ ಮನವಿ ಪತ್ರದಲ್ಲಿ
ದುಡಿಯುವ ಕೈಗಳಿಗೆ ಉದ್ಯೋಗ.ಉಣ್ಣಲು ಹೊಟ್ಟೆ ತುಂಬ ಊಟ.ನೆಮ್ಮದಿಯಿದ ನಿದ್ರಿಸಲು ಸ್ವಂತದ ಒಂದು ಸೂರು ಈ ದೇಶದ ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಪ್ರಜೆಯ  ಮೂಲಭೂತ ಹಕ್ಕಾಗಿದೆ. ಆದರೆ ನಮ್ಮ ದೇಶವನ್ನು ಮತ್ತು ನಮ್ಮನ್ನು ಆಳುತ್ತಿರುವ ಸರ್ಕಾರವು ದುಡಿಯುವ ಕೈಗಳಿಗೆ ಉದ್ಯೋಗವನ್ನು ನೀಡದೆ ಹೊಟ್ಟೆ ತುಂಬಾ ಅನ್ನ ಸಿಗದಂತೆ ಮಾಡಿ. ಹಸಿವಿನಿಂದ ನರಳುತ್ತಾ, ಮಲಗಲು ಕೂಡ ಸ್ವಂತ ಮನೆಯೂ ಇಲ್ಲದ ಸ್ಥಿತಿಗೆ ಜನರನ್ನು ದೂಡಿದೆ.
    ಆದರೆ ಭಾರತದ ಸಿರಿವಂತ ಕಾರ್ಪೋರೇಟ್ ಕಂಪನಿಗಳ ಮಾಲೀಕರು ಮಾತ್ರ ದಿನ ದಿನ ಪ್ರಪಂಚದ ಅತಿ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದು, ದಿನನಿತ್ಯ ನಮ್ಮ ಜಲ ನೆಲ ಹಾಗೂ ಜನರಿಗೆ ಸೇರಬೇಕಾದ ಸಾರ್ವಜನಿಕ ಸಂಪತ್ತನ್ನು ಎಗ್ಗಿಲ್ಲದೇ ಲೂಟಿ ಮಾಡುವುದಕ್ಕೆ ನಮ್ಮ ಸರ್ಕಾರಗಳು ಕಾನೂನು ಬದ್ಧ ಅವಕಾಶಗಳನ್ನು ಮಾಡಿಕೊಳ್ಳುತ್ತಿವೆ.
   ಇದರೊಂದಿಗೆ ಸರ್ಕಾರದ ಆಪ್ತ ಸಂಘ ಸಂಸ್ಥೆಗಳು, ಮಠ ಮಂದಿರಗಳು ಹಾಗೂ ವ್ಯಕ್ತಿಗಳಿಗೆ ಈ ನೆಲದ ಕಾನೂನುಗಳನ್ನು ಮೀರಿ ಸರಕಾರಿ ಭೂಮಿಯನ್ನು ಹಂಚಿಕೆ ಮಾಡುತ್ತದೆ. ಆದರೆ ಸೂರಿಲ್ಲದ ಬಡವನೊಬ್ಬ ಸ್ವಂತ ಸೂರಿಗಾಗಿ ಸರಕಾರದ ಬಳಿ ಅಗತ್ಯ ಜಮೀನನ್ನು (ನಿವೇಶನ) ಕೇಳಿದರೆ ಭೂಮಿ ಲಭ್ಯವಿಲ್ಲ ಎಂದು ಬೇವಾಬ್ದಾರಿ ಉತ್ತರ ಸಿಗುತ್ತದೆ ಹೀಗಾಗಿ ನಮ್ಮ ವಸತಿ ಕನಸು ನನಸು ಅಸಾಧ್ಯವಾಗಿದೆ.
    ನಮ್ಮ ಕರ್ನಾಟಕದಲ್ಲಿ 37 ಲಕ್ಷ ಗಾಯರಾಣ, ಸರಕಾರದ ಭೂಮಿ ಲಭ್ಯವಿರುತ್ತದೆ, ನಗರದಲ್ಲಿ ನಾವು ನಿರ್ಗತಿಕರಾಗುತ್ತಿದ್ದೇವೆ. ನಾವು ಹೀಗೆ ವಸತಿ ಇಲ್ಲದೇ ಇರಬೇಕೇ ? ಆದ್ದರಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿರುವ ಕೊಪ್ಪಳ ಹಾಗೂ ಭಾಗ್ಯನಗರ ಅವಳಿ ನಗರಗಳನ್ನು ಸೇರಿದಂತೆ ತಾಲೂಕಿನಾದ್ಯಂತ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು.ದುಡಿಯುವ ಕಾರ್ಮಿಕರು, ಬಡ ರೈತ ಕಾರ್ಮಿಕರಿಗೆ ಇಂದಿಗೂ ನಿವೇಶನ ಇರುವುದಿಲ್ಲ.ತಾವು ನಮ್ಮ ಈ ಮನವಿಗೆ ಸ್ಪಂದಿಸಿ ನಿವೇಶನ ಸಹಿತ ಮನೆ ಮತ್ತು ಜಾಗ ಇದ್ದವರಿಗೆ ಮನೆಗಳನ್ನು ಮಂಜೂರು ಮಾಡಿಸಿ ಎಲ್ಲರಿಗೂ ಸೂರು ಒದಗಿಸಿಕೊಡಲು ಮನವಿ ಸಲ್ಲಿಸಿದ ಸಂದರ್ಭದಲ್ಲಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ.ಗಫಾರ್. ಕಾರ್ಯದರ್ಶಿ ತುಕಾರಾಮ್ ಬಿ.‌ ಪಾತ್ರೋಟಿ. ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ನಲವಡೆ. ಸಹ ಕಾರ್ಯದರ್ಶಿ ರಾಜೇಶ್ವರಿ ಇಟಗಿ.ಸಂಘಟನೆ ಕಾರ್ಯದರ್ಶಿ ಚೈತ್ರ ಬುಗಡಿ. ಸಹ ಸಂಘಟನೆ ಕಾರ್ಯದರ್ಶಿ ಗೀತಾ ಮದಕಟ್ಟಿ. ಮುಖಂಡ ಮೌಲಾ ಹುಸೇನ್ ಹಣಗಿ. ಜಗದೀಶ್ ಕಟ್ಟಿಮನಿ. ಆದಿತ್ಯ ಟಿ.ಪಾತ್ರೋಟಿ. ಪ್ರಕಾಶ್ ಎಸ್.ದೇವರಮನಿ ಮುಂತಾದ ಅನೇಕರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!