ಎಸ್ಎಸ್ಕೆ ಸಮಾಜದ ನಿಗಮ ಸ್ಥಾಪನೆ: ಎಲ್ಲರಲ್ಲೂ ಹೋರಾಟ ಮನೋಭಾವನೆ ಅಗತ್ಯ-ಹನುಮಂತಸಾ ನಿರಂಜನ್

Get real time updates directly on you device, subscribe now.

ಕೊಪ್ಪಳ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ(ಎಸ್ ಎಸ್ ಕೆ) ಸಮಾಜದ ನಿಗಮ ಸ್ಥಾಪನೆಯಾಗಲೂ ಎಲ್ಲರಲ್ಲೂ ಹೋರಾಟ ಮನೋಭಾವನೆ ಅಗತ್ಯ ಎಂದು ಚಿಂತನ- ಮಂಥನ ಸಂಸ್ಥಾಪಕ, ರಾಜ್ಯ ಎಸ್ ಎಸ್ ಕೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಹನುಮಂತಸಾ ನಿರಂಜನ್ ಹೇಳಿದರು.‌
ಭಾಗ್ಯನಗರದ ಭಾಗ್ಯನಗರದ ಗಂಗಮ್ಮ ಲಕ್ಷ್ಮಣಸಾ ಖೋಡೆ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್ ಎಸ್ ಕೆ ಅಭಿವೃದ್ಧಿ ನಿಗಮ ಸ್ಥಾಪನೆ ಜಿಲ್ಲಾ ಹೋರಾಟದ ಜಿಲ್ಲಾ‌ ಸಮಿತಿ ರಚನಾ ಸಭೆಯಲ್ಲಿ ಮಾತನಾಡಿದರು.
ಹೋರಾಟಕ್ಕೆ ಸ್ವ ಇಚ್ಛೆಯಿಂದ ಸಮುದಾಯ ಅಭಿವೃದ್ಧಿಗಾಗಿ ಬರಬೇಕಾಗಿದೆ. ಆಗ ಹೋರಾಟ ಯಶಸ್ಸು ಆಗಲು‌ ಸಾಧ್ಯ. ಸತತ ಪ್ರಯತ್ನದಲ್ಲಿ ದೇವರ ಆಶೀರ್ವಾದ ಇರುತ್ತದೆ ಎಂದು ಹೇಳಿದರು.
ನಿಗಮ ಸ್ಥಾಪನೆಯಿಂದ ಶೈಕ್ಷಣಿಕ, ರಾಜಕೀಯ,ಆರ್ಥಿಕ, ಸಾಮಾಜಿಕ ಸಮುದಾಯ ಜನರು ಸಶಕ್ತರಾಗಲಿದ್ದಾರೆ. ಸಾಲ ಹಾಗೂ ಪ್ರೋತ್ಸಾಹ ಧನದ ಸೌಲಭ್ಯ ದೊರೆತಾಗ ಸಮಾಜದ ಮುಖ್ಯ ವಾಹಿನಿ ಬರಲು ಸಾಧ್ಯವಾಗುತ್ತದೆ. ಕಟ್ಟಕಡೆಯ ವ್ಯಕ್ತಿಯೂ ಉನ್ನತ ಹುದ್ದೆ ಅಲಂಕರಿಸುವಂತಾಗಬೇಕು ಎಂದರು.
ಸರ್ಕಾರದ ಗಮನ ಸಳೆಯಲು ರಕ್ತದ ಮೂಲಕ ಬರೆದು ಪತ್ರ ಚಳವಳಿ ಮಾಡಬೇಕಾಗಿದೆ. ಆಗ ಸರ್ಕಾರ ಗಮನ ಸಳೆಯಲು ಸಾಧ್ಯ.‌ ಸಮಿತಿ ಕಾನೂನು ಹೋರಾಟ ಮಾಡುವ ಮೂಲಕ ನಿಗಮ ಸ್ಥಾಪನಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.‌
ಜನಪ್ರತಿನಿಧಿಗಳಿಗೆ ಸಮುದಾಯದ ಕಷ್ಟ ಅರ್ಥ ಆಗುತ್ತಿಲ್ಲ. ದೇವರಾಜು ಅರಸು ಅವರು ಮುಖ್ಯಮಂತ್ರಿ ಇದ್ದಾಗ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು‌. ಆಗ  ಸಮುದಾಯ ಮನಸ್ಸು ಮಾಡಲಿಲ್ಲ. ಈಗ ಮತ್ತೆ ಮೀಸಲಾತಿ ಕೇಳುವಂತಾಗಿದೆ. ಮಧ್ಯಪ್ರದೇಶದಲ್ಲಿ ಈಗಾಗಲೇ ಸಮುದಾಯ ಎಸ್ಟಿಯಲ್ಲಿ ಇದೆ. ಈ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಸೂಕ್ತ ದಾಖಲೆಯೊಂದಿಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು  ಎಂದರು.
ನಿವೃತ್ತ ಡಿಎಚ್ಒ ಪಾಂಡುರಂಗ ಕಬಾಡಿ ಮಾತನಾಡಿ, ಸಮುದಾಯದ ಜನಸಂಖ್ಯೆ ಅಂದಾಜು 5 ಲಕ್ಷ ಇದೆ. ಈಗಾಗಲೇ ಜನಸಂಖ್ಯೆ ನಿಖರ ಮಾಹಿತಿಗಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಸಮುದಾಯದಲ್ಲಿ 2ಎ ಕೆಟಗೇರಿಯಲ್ಲಿದೆ. ಅಲ್ಲಿ 135 ಜಾತಿಗಳು ಇವೆ. ಹೀಗಾಗಿ ಸಮುದಾಯ ಜನರು ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಹೋರಾಟದ ಹಾದಿ ಅತ್ಯಗತ್ಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ಭಾಗ್ಯನಗರದ ಸಮಾಜದ ಅಧ್ಯಕ್ಷ ಜವಾಹರಲಾಲಸಾ ಅಂಟಾಳಮರದ ವಹಿಸಿಕೊಂಡಿದ್ದರು. ಗಜೇಂದ್ರಗಡದ ಆಧ್ಯಾತ್ಮಿಕ ಚಿಂತಕ ಡಿ. ಸಿ. ಬಾಕಳೆ, ಅಶೋಕಸಾ ದಲಬಂಜನ, ತಿಪ್ಪಣಸಾ ಶಿಂಗ್ರಿ, ಭಗೀರಥಸಾ ಪಾಟೀಲ, ರವೀಂದ್ರಸಾ ಬಾಕಳೆ, ಶರಣುಸಾ ನಗರಿ, ಟಿ. ಆರ್. ರಾಯಬಾಗಿ, ಪರಶುರಾಮಸಾ ಬಾಕಳೆ, ನಾಗೂಸಾ ಮೇಘರಾಜ, ಕೃಷ್ಣಾಸಾ ಪವಾರ, ಗದಗನ ಪಿ. ಎಚ್. ಕಬಾಡಿ, ರಾಘವೇಂದ್ರ ಕಬಾಡಿ, ಕಾಶಿನಾಥಸಾ ಶಿದ್ಲಿಂಗ, ಸಂಜೀವ ಖಟವಟೆ, ಇಳಕಲ್ನ ನಾಗರಾಜ ನಗರಿ,  ಹುಬ್ಬಳ್ಳಿಯ ಮಂಜುನಾಥ ಮಿಸ್ಕಿನ್, ಶ್ರೀಕಾಂತಸಾ ಹಬೀಬ ಇತರರಿದ್ದರು.
ಕೊಪ್ಪಳ ಜಿಲ್ಲಾ ಎಸ್ ಎಸ್ ಕೆ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು: ಸತೀಶ ಮೇಘರಾಜ( ಅಧ್ಯಕ್ಷ), ಪರಶುರಾಮಸಾ ನಿರಂಜನ್, ಕಳಕುಸಾ ಹಣುಮಂತಸಾ, ಸುರೇಂದ್ರಸಾ ರಾಯಬಾಗಿ, ಅಂಬಸಾ ರಾಯಬಾಗಿ, ಮೋಹನಸಾ ದಾನಿ, ಸರೋಜಾ ಬಾಕಳೆ,ರಾಘವೇಂದ್ರಸಾ ಪವಾರ, ಲಕ್ಷ್ಮೀ ಬಾಯಿ ಕಟವಾ, ತುಂಗಾಬಾಯಿ ರಾಯಬಾಗಿ ( ಉಪಾಧ್ಯಕ್ಷ), ಪರಶುರಾಮಸಾ ಎಚ್.ಪವಾರ್( ಗೌರವ ಕಾರ್ಯದರ್ಶಿ), ರಾಮು ಕಟವಾ( ಖಜಾಂಚಿ), ಸರೋಜಬಾಯಿ‌ ಶಿಂಗ್ರಿ( ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!