ಭವನ ನವೀಕರಣಕ್ಕೆ ೨೫ ಲಕ್ಷ ರು, ಪತ್ರಕರ್ತರಿಗೆ ಮನೆ: ಜನಾರ್ದನರೆಡ್ಡಿ ಭರವಸೆ

Get real time updates directly on you device, subscribe now.


ಗಂಗಾವತಿ: ನಾನೂ ಕೂಡಾ ಸಂಪಾದಕನಾಗಿ ಜೀವನ ನಡೆಸಿದ್ದು ಪತ್ರಕರ್ತರ ಸಂಕಷ್ಟಗಳ ಮಾಹಿತಿ ಇದೆ ಆರ್ಥಿಕವಾಗಿ ಹಿಂದುಳಿದ ಗಂಗಾವತಿಯ ಪತ್ರಕರ್ತರಿಗೆ ಮನೆ ಹಾಗು ಪತ್ರಿಕಾಭವನ ನವೀಕರಣಕ್ಕೆ ರು.೨೫ ಲಕ್ಷ ಹಣ ನೀಡುವುದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಅಧ್ಯಕ್ಷ ರು ಹಾಗು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಅವರು ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕಾ ಘಟಕ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪತ್ರಕರ್ತರು ಯಾವಾಗಲು ರೆಬಲ್ ಆಗಿರುತ್ತಾರೆ, ನಾನು ಕೂಡಾ ಯಾವುದನ್ನು ಮುಚ್ಚಿಟ್ಟಿಕೊಳ್ಳುವುದಿಲ್ಲ ಎಲ್ಲವನ್ನು ಹೇಳಿದ ನಂತರವಷ್ಟೆ ಸಮಾಧಾನ ಹುಟ್ಟಿನಿಂದಲೂ ಅವರಿಗೆ ಆ ಗುಣ ಸಿದ್ದಿಸಿರುತ್ತದೆ. ಸಾಮಾಜ ತಿದ್ದುವಲ್ಲಿ ಪತ್ರಕರ್ತರ ಪಾತ್ರ ಸಾಕಷ್ಟಿದ್ದು, ಸಮಾಜ ಮುಖಿ ಕೆಲಸ ಮಾಡುವನಿಟ್ಟಿನಲ್ಲಿ ಎಲ್ಲರು ಕೈ ಜೋಡಿಸಿರಿ, ಗಂಗಾವತಿಯಲ್ಲಿ ಯಾವುದೇ ಸುಳ್ಳು ಮುಖದ್ದಮೆ ದಾಖಲಿಸದಂತೆ ಕ್ರಮ ವಹಿಸುವೆ, ಕಾನೂನ ಬಾಹೀರ ಕಾರ್ಯನಿರ್ವಹಿಸುವ ಯಾರನ್ನು ನಾನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ, ನನ್ನ ಕಾರ್ಯಕರ್ತದಾರೂ ಅವರನ್ನು ಹಂತಹಂತವಾಗಿ ಕೈ ಬಿಡುತ್ತೇನೆ, ಪತ್ರಕರ್ತನ ವಿರುದ್ಧ ದಮನಕಾರಿ ನೀತಿ ಅಧಿಕಾರಿಗಳು ಅನುಸರಿಸಲು ನಾನು ನಿಡುವುದಿಲ್ಲ ಎಂದು ತಿಳಿಸಿದರು.
ಗಂಗಾವತಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, ಪತ್ರಕರ್ತರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದರು. ಈ ಸಂಧರ್ಭದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಕುಲಕರ್ಣಿ, ತಾಲೂಕಾ ಉಪಾಧ್ಯಕ್ಷ ಹರೀಷ್ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ದೇವರಾಜ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವೃಷಭೇಂದ್ರ ಸ್ವಾಮಿ ನವಲಿ ಹಿರೇಮಠ, ವಿಶ್ವನಾಥ ಬೆಳಗಲ್‌ಮಠ, ಪ್ರಸನ್ನದೇಸಾಯಿ, ಚಂದ್ರಶೇಕರ್ ಮುಕ್ಕುಂದಿ, ಶಿವಪ್ಪ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೇಮಗುಡ್ಡ, ಹಿರಿಯ ಪತ್ರಕರ್ತರಾದ ವೀರಾಪುರ ಕೃಷ್ಣ, ಎಂ,ಜೆ, ಶ್ರೀನಿವಾಸ್, ವಸಂತ್, ದಶರಥ್, ರವಿಕುಮಾರ್, ಮಂಜುನಾಥ ಹೊಸಕೇರಾ, ವೆಂಕಟೇಶ್ ಉಪ್ಪಾರ್, ಜೋಗಿನ್ ರಮೇಶ್, ವಾಗೀಶ್ ನವಲಿ ಹಿರೇಮಠ, ಶರಣಯ್ಯಸ್ವಾಮಿ ಕರಡಿಮಠ, ಮೃತ್ಯುಂಜಯಸ್ವಾಮಿ, ವೆಂಕಟೇಶ್ ಮಾಂತಾ, ಶರಣಪ್ಪ ಉಪ್ಪಾರ್, ಹನುಮೇಶ್ ಚಿಕ್ಕಜಂತಕಲ್, ಮಂಜುನಾಥ ಗುಡ್ಲಾನೂರು, ಜೋಗದ ಗಾದಿಲಿಂಗಪ್ಪ ಹಾಗು ಸುದರ್ಶನವೈದ್ಯ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!