2022ರ ಸಾಲಿನ ಕೆಯುಡಬ್ಯುಜೆ ವಾರ್ಷಿಕ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ

Get real time updates directly on you device, subscribe now.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022ನೇ ಸಾಲಿನ ಕೆಳಕಂಡ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರಿಂದ ವರದಿ/ಲೇಖನ/ಸುದ್ದಿಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ.

1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ)

2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ)

3. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿಗೆ)

4. ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿಗೆ) 5. ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿಗೆ)

6. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶಾತ್ಮಕ ಲೇಖನಕ್ಕೆ)

7. ಮಂಗಳ ಎಂ. ಸಿ. ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರ ಲೇಖನಕ್ಕೆ)

8) ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ) 9) ಆರ್.ಎಲ್.ವಾಸುದೇವರಾವ್‌ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ವರದಿ)

10. ಆರ್.ಎಲ್. ವಾಸುದೇವರಾವ್‌ ಪ್ರಶಸ್ತಿ (ವನ್ಯ ಪ್ರಾಣಿಗಳ ಕುರಿತ ಅತ್ಯುತ್ತಮ ವರದಿ)

II. ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿಗೆ)

12. ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗೆ) 13. ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ಮತ್ತು ಗ್ರಾಮಾಂತರ

ಜಿಲ್ಲೆ ಅಭಿವೃದ್ಧಿ ಕುರಿತ ಅತ್ಯುತ್ತಮ ವರದಿಗೆ ) 14. ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅತ್ಯುತ್ತಮ ಕೃಷಿ ವರದಿ)

15. ನಾಡಿಗೆ ಕೃಷ್ಣರಾಯರ ಪ್ರಶಸ್ತಿ (ಅತ್ಯುತ್ತಮ ವಿಡಂಬನಾತ್ಮಕ ಲೇಖನಕ್ಕೆ) 16. ಅತ್ಯುತ್ತಮ ಪುಟ ವಿನ್ಯಾಸಗಾರರಿಗೆ (ಡೆಸ್ಕ್‌ನಲ್ಲಿ ಕೆಲಸ ಮಾಡುವವರು)

17. ನ್ಯಾಯಾಲಯದ (ಕೋರ್ಟ್ ಬೀಟ್) ಅತ್ಯುತ್ತಮ ವರದಿಗಾಗಿ,

18. ಸುಣ್ಣವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ. (ಅತ್ಯುತ್ತಮ ಸೇನಾ ವರದಿಗೆ) 19. ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ ( ಇಂಗ್ಲೀಷ್ ಪತ್ರಿಕೆಗೆ ಪ್ರಕಟವಾದ ವರದಿ)

20.ಟಿ.ಕೆ.ಮಲಗೊಂಡ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿ)

ವಿದ್ಯುನ್ಮಾನ (ಟಿವಿ)ವಿಭಾಗ

21. ಅತ್ಯುತ್ತಮ ರಾಜಕೀಯ ವಿಶ್ಲೇಷಣೆ 22 ಅತ್ಯುತ್ತಮ ತನಿಖಾ ವರದಿಗಾಗಿ

23. ಅತ್ಯುತ್ತಮ ಸಾಮಾಜಿಕ, ಮಾನವೀಯ ವರದಿ 24, ಅತ್ಯುತ್ತಮ ಆ್ಯಂಕರ್ ಪ್ರಶಸ್ತಿ

ಷರತ್ತುಗಳು :

1. ಪ್ರಶಸ್ತಿಗೆ 2022 ಜನವರಿ 1 ರಿಂದ 2022 ಡಿಸೆಂಬರ್ 31 ರೊಳಗೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನ/ವರದಿ/ವಿಶೇಷ ವರದಿ ಸುದ್ದಿ ಛಾಯಾ ಚಿತ್ರಗಳನ್ನು ಕಳುಹಿಸಬೇಕು.

2. ವರದಿ/ಲೇಖನ ಯಾವ ಪ್ರಶಸ್ತಿಗೆ ಎಂಬುದನ್ನು ಲೇಖನದ ಮುಖಪುಟದಲ್ಲಿ ಸ್ವಷ್ಟವಾಗಿ ಬರೆದಿರಬೇಕು.

3. ಅನುವಾದ ಮಾಡಿದ ವರದಿ/ಲೇಖನ ಪರಿಗಣಿಸುವುದಿಲ್ಲ. 4. ರಾಜ್ಯ ಸಂಘ, ಜಿಲ್ಲಾ ಮತ್ತು ತಾಲ್ಲೂಕು ಸಂಘದ ಪದಾಧಿಕಾರಿಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

5. ಲೇಖನ ವರದಿಗಳನ್ನು ಮೂರು ಪ್ರತಿಗಳಲ್ಲಿ (ಜೆರಾಕ್ಸ್ ಪ್ರತಿಗಳಾದರೆ ದೃಢೀಕೃತವಾದ ಪ್ರತಿ ಇರಬೇಕು.) ಕಳುಹಿಸಬೇಕು.

6. ವಿದ್ಯುನ್ಮಾನ ಮಾಧ್ಯಮದ ಪ್ರಶಸ್ತಿಗಳ ಪ್ರವೇಶಕ್ಕೆ ವರದಿ ಪ್ರಸಾರವಾದ ಕ್ಲಿಪಿಂಗ್ (ಸಿಡಿ ಅಥವಾ ಪೆನ್‌ ಡ್ರೈವ್) ಮತ್ತು ಅದರ ಸ್ಕ್ರಿಪ್‌ಗಳನ್ನು ಸಂಪಾದಕರ ದೃಢೀಕರಣ ಸಹಿತ ಕಳುಹಿಸಬೇಕು.

7. ಅರ್ಜಿ ಸಲ್ಲಿಸುವವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವದ ಗುರುತಿನ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು.

8. ಲೇಖನದ ಜೊತೆಯಲ್ಲಿ ಸ್ವ ಪರಿಚಯ, ಪೂರ್ಣ ವಿಳಾಸ, ಮೊಬೈಲ್ ನಂಬರ್, ಮತ್ತು ಪಾಸ್ ಪೋರ್ಟ್ ಸೈಜ್ ಭಾವಚಿತ್ರ ಕಳುಹಿಸಬೇಕು.

9. ಈಗಾಗಲೇ ಒಂದು ಬಾರಿ ಪ್ರಶಸ್ತಿಯನ್ನು ಪಡೆದವರು, ಮತ್ತೆ ಅದೇ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

Get real time updates directly on you device, subscribe now.

Comments are closed.

error: Content is protected !!
%d bloggers like this: