ಹೊನ್ನೂರಮಟ್ಟಿ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ರಾಜ್ಯಕ್ಕೆ ಮಾದರಿ: ಅಂಜುಮ್ ಪರ್ವೇಜ್

Get real time updates directly on you device, subscribe now.


ತಾಜ್ಯ ಸಂಗ್ರಹಣಾ ಘಟಕ್ಕೆ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲನೆ
ಕೊಪ್ಪಳ:- ತಾಲೂಕಿನ ಹುಲಿಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹೊನ್ನೂರಮಟ್ಟಿ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕವು ಮಾದರಿ ಘಟಕವಾಗಿದ್ದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಹೇಳಿದರು.
ದಿನಾಂಕ:12 ರಂದು ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ 10 ಗ್ರಾಮ ಪಂಚಾಯತಿಗಳನ್ನೊಳಗೊಂಡ ಬಹು ಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ* ಪ್ರತಿ ದಿನ ಮನೆ ಹಾಗೂ ಅಂಗಡಿಗಳಲ್ಲಿ ಉತ್ಪತ್ತಿಯಾಗು ಕಸವನ್ನು ಗ್ರಾಮ ಪಂಚಾಯತಿ ಸ್ವಚ್ಛತಾ ವಾಹಿನಿಗಳ ಮೂಲಕ ಕಸವನ್ನು ಸಂಗ್ರಹಿಸಿ ಪ್ರತ್ಯೆಕವಾಗಿ ಸಂಗ್ರಹಿಸಿ ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಹಾಗೂ ಘಟಕದಲ್ಲಿ ಅಳವಡಿಸಲಾದ ವ್ಯವಸ್ಥೆಗಳಾದ ಪ್ಲಾಸ್ಟಿಕ್ ತಾಜ್ಯ ನಿರ್ವಹಣೆ ಘಟಕ, (MRF) ಗೋಬರಧನ್, ಗೋಶಾಲೆ, ಎರೆಹುಳು ತೊಟ್ಟಿ, ಔಷಧಿಯ ಸಸ್ಯಗಳ ನರ್ಸರಿ ಮತ್ತು ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿರುವದನ್ನು ಖುದ್ದಾಗಿ ವೀಕ್ಷಿಸಿರು. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಂಖ್ಯೆ, ಅವರಿಗೆ ನೀಡಲಾಗುವ ವೇತನವನ್ನು ಯಾವರೀತಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಪಡೆದರು. ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಘನತ್ಯಾಜ್ಯ ವಿಲೇವಾರಿ ಘಟಕ ಅನುಷ್ಠಾನಿಸಿದ್ದು ಇದಕ್ಕೆ ಪ್ರತ್ಯೇಕವಾಗಿ ನಿರ್ವಹಣೆ ಮಾಡುವದು ಖರ್ಚುದಾಯಕವಾಗಿರುತ್ತದೆ. ಆದರೆ ಬಹು ಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕದಿಂದ ಕಡಿಮೆ ವೆಚ್ಚದಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂಬ ವಿಷಯವನ್ನು ಗೌರವ ಅಧ್ಯಕ್ಷರಾದ ಟಿ.ಜನಾರ್ಧನ ಹುಲಿಗಿ ಮಾನ್ಯರಿಗೆ ವಿವರಿಸಿದರು.
ರಾಜ್ಯದಲ್ಲಿ ಹೊನ್ನೂರಮಟ್ಟಿ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕವು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಅನುಷ್ಠಾಗೊಳಿಸಲಾದ ನಳಗಳ ಜೋಡಣೆ ಕಾಮಗಾರಿಗಳನ್ನು ಪರಿಶೀಲನೆಗಾಗಿ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಟ್ಟಗಿಹಳ್ಳಿ ಭೇಟಿ ನೀಡಲಾಯಿತು. ಕಟ್ಟಗಿಹಳ್ಳಿ ಗ್ರಾಮದಲ್ಲಿ ಒಟ್ಟು 380 ಕುಟುಂಬಗಳಿದ್ದು, ಇವುಗಳ ಪೈಕಿ 350 ಕುಟುಂಬಗಳಿಗೆ ನಳ ಜೋಡಣೆಯಾಗಿದ್ದು, ಬಾಕಿ ಇರುವ 50 ಕುಟುಂಬಳಿಗೆ ಇನ್ನೂ 15 ದಿನಗಳೊಳಗಾಗಿ ನಳ ಜೋಡಣೆ ಮಾಡಲು ಕ್ರಮವಹಿಸುವಂತೆ ತಿಳಿಸಿದರು. ತದನಂತರ ಮುರಡಿ ಗ್ರಾಮ ಪಂಚಾಯತನ ಮುರಡಿ ಗ್ರಾಮಕ್ಕೆ ಬೇಟಿ ನೀಡಲಾಯಿತು, ಸದರಿ ಗ್ರಾಮದಲ್ಲಿ ಒಟ್ಟು 1200 ಕುಟುಂಬಗಳಿದ್ದು, ಅವುಗಳ ಪೈಕಿ ಒಟ್ಟು 1100 ಕುಟುಂಬಗಳಿಗೆ ನಳ ಜೋಡಣೆಯಾಗಿರುತ್ತದೆ. ಬಾಕಿ ಇರುವ 100 ಕುಟುಂಬಗಳಿಗೆ ಒಂದು ತಿಂಗಳೊಳಗಾಗಿ ನಳ ಜೋಡಣೆ ಮಾಡಲು ಮತ್ತು ನಳ ಜೋಡಣೆಗಾಗಿ ಕೊರೆಯಲಾದ ಸಿ.ಸಿ ರಸ್ತೆಯನ್ನು ಮೊದಲಿನಂತೆ ಮರು ನಿರ್ಮಿಸಲು ಸೂಚಿಸಿದರು. ಹಾಗೂ ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ಪ್ರಾರಂಭಿಸಲು ತಿಳಿಸಿ ಇನ್ನೀತರ ಕಾಮಗಾರಿಗಳಾದ ವೈಯಕ್ತಿಕ ಶೌಚಾಲಯ, ಅಂಗನವಾಡಿ, ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ಪರಿಶೀಲಿಸಿದರು.
ಸ್ಥಳದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಹುಲ್ ರತ್ನಂ ಪಾಂಡೆಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಇಂಜನಿಯರ್ ಅಜೀಜ್ ಹುಸೇನ್, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳು ಮಲ್ಲಿಕಾರ್ಜುನ ತೊದಲಬಾಗಿ, ಬಹು ಗ್ರಾಮ ತಾಜ್ಯ ವಿಲೇವಾರಿ ಘಟಕದ ಗೌರವ ಅಧ್ಯಕ್ಷರಾದ ಟಿ.ಜನಾರ್ಧನ ಹುಲಿಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬಳ್ಳಾರಿ ವಲಯದ ಅಧೀಕ್ಷಕ ಅಭಿಯಂತರ ವೀರಪ್ಪ ಅಡಿವೆಪ್ಪನವರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಹೇಶ್ ಶಾಸ್ರ್ತಿ, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು, ಹಾಗೂ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!