ಕಾಂತರಾಜ ಆಯೋಗದ ವರದಿ ಜಾರಿ ಹಾಗೂ ಮುಸ್ಲೀಂ ಮೀಸಲಾತಿಗೆ ಆಗ್ರಹಿಸಿ SDPI ಪ್ರತಿಭಟನೆ-ಹುಜೂರ್ ಅಹ್ಮದ್

Get real time updates directly on you device, subscribe now.

ಕಾಂತರಾಜ ಆಯೋಗದ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಮತ್ತು 2ಬಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ 09 ಅಕ್ಟೋಬರ್ ರಿಂದ11 ಅಕ್ಟೋಬರ್, 2023 ವರೆಗೆ ವಿವಿಧ ಪ್ರತಿಭಟನ: ಎಸ್‌ಡಿಪಿಐ

ಕೊಪ್ಪಳ, 11 ಅಕ್ಟೋಬರ್ 2023: ಕರ್ನಾಟಕ ಸರ್ಕಾರ ಕಾಂತರಾಜ ಆಯೋಗದ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು ಮತ್ತು ಮುಸ್ಲಿಮರ ಮೀಸಲಾತಿ 2ಬಿ ಪ್ರಮಾಣವನ್ನು ಶೇ. 8ಕ್ಕೆ ಏರಿಸಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ವತಿಯಿಂದ 11 ಅಕ್ಟೋಬರ್ 2023 ರಿಂದ 13 ಅಕ್ಟೋಬರ್, 2023ರ ವರೆಗೆ ವಿವಿಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ  ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹುಜೂರ್ ಅಹ್ಮದ್  ಹೇಳಿದರು.

ಈ ನಿಟ್ಟಿನಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದು, ಟ್ವಿಟ್ಟರ್ (ಎಕ್ಸ್) ಅಭಿಯಾನ, ಪೋಸ್ಟರ್ ಅಭಿಯಾನ, ಧರಣಿ, ಪ್ರತಿಭಟನೆ, ಪತ್ರಿಕಾಗೋಷ್ಠಿ, ವಿಚಾರ ಸಂಕಿರಣಗಳ ಮೂಲಕ ಜನಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ ದಿನಾಂಕ 11/10/2023 ರಿಂದ 13/10/2023ರ ವರೆಗೆ ರಾಜ್ಯದಾದ್ಯಂತ ಧರಣಿ ಕಾರ್ಯಕ್ರಮದಲ್ಲಿ ನಾಡಿನ ಚಿಂತಕರು, ಸಾಮಾಜಿಕ ಹೋರಾಟಗಾರರು, ವಿವಿಧ ಜಾತಿ, ಸಂಘಟನೆಗಳ ನಾಯಕರು, ರಾಜಕೀಯ ಮುಖಂಡರು, ಮಹಿಳಾ ಮುಖಂಡರು, ಧಾರ್ಮಿಕ ಮುಖಂಡರು, ಮತ್ತು ಅವಕಾಶ ವಂಚಿತ ಜನಸಮುದಾಯಗಳ ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ಬೆಂಬಲವನ್ನು ವ್ಯಕ್ತಪಡಿಸಲಿದ್ದಾರೆ. 13ನೇ ತಾರೀಖು ಕೊಪ್ಪಳ ಸಮಾರೋಪ ಸಮಾರಂಭ ನಡೆಯಲಿದೆ .

ಸಾಮಾಜಿಕ ನ್ಯಾಯ ಮತ್ತು ಎಲ್ಲಾ ಜನ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಸಾರ್ವಜನಿಕ ಬಂಧುಗಳು ಈ ಅಭಿಯಾನಕ್ಕೆ ಎಲ್ಲ ರೀತಿಯ ಸಲಹೆ ಮತ್ತು ಸಹಕಾರವನ್ನು ನೀಡುವುದರ ಜೊತೆಗೆ ಪ್ರತಿಭಟನೆಯಲ್ಲಿ ಬಾಗವಹಿಸಿ ಸಾಮಾಜಿಕ ನ್ಯಾಯಕ್ಕಾಗಿ  ಕೈ ಜೋಡಿಸಬೇಕೆಂದು   ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ನಡೆದ ಜಿಲ್ಲಾಧ್ಯಕ್ಷರಾದ ಹುಜುರ್ ಅಹ್ಮದ ಮತ್ತು ಪ್ರಧಾನ ಕಾರ್ಯದರ್ಶಿಯಾದ ಯೂಸುಫ್ ಮೋದಿ ಸಂಘಟನಾ ಕಾರ್ಯದರ್ಶಿಯಾದ ನಿಜಾಮುದ್ದೀನ್ ಮಾಳೆಕೊಪ್ಪ, ಸಲೀಂ ಖಾದ್ರಿ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಮೊಹಮ್ಮದ ಸಾಧಿಕ್ ಅವರ ಉಪಸ್ಥಿತಿಯಲ್ಲಿ ನಡೆಯಿತು,

Get real time updates directly on you device, subscribe now.

Comments are closed.

error: Content is protected !!