ಜನ ಸೇವೆಗೆ ಟಿಕೇಟ್ ನೀಡಿ- ಕಾಂಗ್ರೆಸ್ ಪಕ್ಷಕ್ಕೆ ಮಳಿಮಠ ಮನವಿ
ಕೊಪ್ಪಳ :
ಕೇಂದ್ರದ ಅಧಿಕಾರಿಗಳ ಜೊತೆಗಿನ ಸಂವಹನದ ಕೊರತೆಯಿಂದ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮಹತ್ವದ ಯೋಜನೆಗಳನ್ನು ತಂದು ಅನುಷ್ಠಾನಗೊಳಿಸುವಲ್ಲಿ ಹಿಂದಿನ ಅನೇಕ ಸಂಸದರು ವಿಫಲವಾಗಿದ್ದಾರೆ, ನಾನು ಇಂಜಿನಿಯರಿಂಗ್ ಮತ್ತು ಲಾ ಪದವಿಧರ ಸದಾ ಬಡವರ ಪರವಾದ ಧ್ವನಿಯಾಗಿ ಜನರ ಸೇವೆ ಮಾಡುವೆ ಎಂದು ಕೊಪ್ಫಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಬಸವರಾಜಸ್ವಾಮಿ ಮಳೆಮಠ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರೈತರ,ಕಾರ್ಮಿಕರ, ಮಧ್ಯಮ ವರ್ಗದ, ದೀನ ದಲಿತರ ಹಾಗೂ ಬಡವರ ಸಂಕಷ್ಟಗಳಿಗೆ ಸ್ಪಂದಿಸುವಂತಹ ಜನನಾಯಕರ ಅತ್ಯಗತ್ಯವಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಚಿಂತನೆ, ಸಂಸತ್ತಿನಲ್ಲಿ ಪ್ರತಿಧ್ವಿನಿಸುವ ಎಲ್ಲಾ ಅರ್ಹತೆಗಳು ನನ್ನಲ್ಲಿ ಇವೆ. ಈ ಹಿಂದೆ ಬಳ್ಳಾರಿ, ರಾಯಚೂರು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸಗಳನ್ನು ಮಾಡಿದ್ದೇನೆ. ಸತತ 32 ವರ್ಷಗಳ ಕಾಲ ನಮ್ಮ ಮನೆತನ ಕಾಂಗ್ರೆಸ್ ಪಕ್ಷದ ಮನೆತನವಾಗಿಯೇ ಮುನ್ನಡೆಯುತ್ತಿದೆ ಎಂದರು. ಹೀಗಾಗಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಈ ಬಾರಿ ಕೊಪ್ಪಳ ಲೋಕಸಭಾ ಟಿಕೇಟ್ ನೀಡುವುದರ ಕುರಿತು ಒಂದುಸುತ್ತು ಮಾತುಕತೆಯನ್ನು ನಡೆಸಿದ್ದೇನೆ ಎಂದು ತಿಳಿಸಿದರು. ರಮೇಶ ಕುಲಕರ್ಣಿ, ಜಿ.ಗವಿಸಿದ್ದಪ್ಪ, ಹನುಮಂತರಾಯ ನಾಯಕ ಸೇರಿದಂತೆ ಇತರರು ಇದ್ದರು.
Comments are closed.