ಕೊಪ್ಪಳ, ವಿಜಯನಗರ ಜಿಲ್ಲೆಗಳಲ್ಲಿ ಮುಖ್ಯಮಂತ್ರಿಗಳ ಪ್ರವಾಸ ಅಕ್ಟೋಬರ್ 12ಕ್ಕೆ
ಕೊಪ್ಪಳ : ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಅಕ್ಟೋಬರ್ 12ರಂದು ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಅಕ್ಟೋಬರ್ 12ರ ಬೆಳಗ್ಗೆ 10 ಗಂಟೆಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ 10.50ಕ್ಕೆ ಕೊಪ್ಪಳ ಜಿಲ್ಲೆಯ ಗಿಣಿಗೇರಾದ ಏರ್ ಸ್ಟ್ರಿಪ್ ಗೆ ಆಗಮಿಸುವರು. ಅಲ್ಲಿಂದ 10.55ಕ್ಕೆ ನಿರ್ಗಮಿಸಿ ವಿಜಯನಗರ ಜಿಲ್ಲೆಯ ಹಂಪಿಗೆ ಬೆಳಗಿನ 11.40ಕ್ಕೆ ಭೇಟಿ ನೀಡಿ ಅಲ್ಲಿನ ನಂದಗೋಕುಲ ಲೇಔಟ್ ಎದುರಿನ ಖಾಸಗಿ ಹೊಟೆಲನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವರು.
ಮಧ್ಯಾಹ್ನ 3 ಗಂಟೆಗೆ ಹಂಪಿಯಿಂದ ನಿರ್ಗಮಿಸಿ ಗಿಣಿಗೇರಾ ಏರ್ ಸ್ಟ್ರಿಪ್ ಗೆ ಆಗಮಿಸಿ, ಅಲ್ಲಿಂದ ಮಧ್ಯಾಹ್ನ 3.50ಕ್ಕೆ ನಿರ್ಗಮಿಸಿ ಕೇಂದ್ರ ಸ್ಥಾನ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆ ತಿಳಿಸಿದೆ.
Comments are closed.